ತುಮಕೂರು: ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದ್ದಂತೆ ರಾಜಕೀಯ ದ್ವೇಷ ಗ್ರಾಮಗಳಿಗೆ (Political Rivalry) ಎಂಟ್ರಿ ಕೊಟ್ಟಿದ್ದು, ಪಕ್ಷಗಳ ಹೆಸರಿನಲ್ಲಿ ಬೇರೆಯಾದ ಒಂದೇ ಗ್ರಾಮದ ಜನರು ದೇವರನ್ನು ಅನಾಥರನ್ನಾಗಿ ಮಾಡಿರುವ ಘಟನೆ ತುಮಕೂರು (Tumakuru) ಗ್ರಾಮಾಂತರ ಜಿಲ್ಲೆಯ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಪರಿಸ್ಥಿತಿ ನಿಯಂತ್ರಣ ತರಲು ಜಿಲ್ಲಾಡಳಿತ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಿ ನಿಷೇಧಾಜ್ಞೆ ಜಾರಿ (144 section) ಮಾಡಿದೆ.
ಹೌದು, ರಾಜಕೀಯ ದ್ವೇಷಕ್ಕೆ ಒಂದೇ ಗ್ರಾಮದಲ್ಲಿ ಎರಡು ಪಾಂಡುರಂಗ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಮೂಲ ದೇವಸ್ಥಾನ ಗ್ರಾಮಸ್ಥರ ಕಮಿಟಿ ಅಧೀನದಲ್ಲಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸೆಡ್ಡು ಹೊಡೆದು ಬಿಜೆಪಿ ಸದಸ್ಯರು ಮತ್ತೊಂದು ದೇವಸ್ಥಾನ ನಿರ್ಮಾಣ ಮಾಡಿರುವ ಆರೋಪವಿದೆ. ಆದರೆ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮೂಲ ದೇವರ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಇನ್ನೊಂದು ಪಾಂಡುರಂಗ ದೇವಸ್ಥಾನ ಮಾಡಿಕೊಂಡಿರುವವರು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Kodimatha Swamiji: 2023ರ ಚುನಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ! ಈ ಬಾರಿಯೂ ಸಮ್ಮಿಶ್ರ ಸರ್ಕಾರ ಫಿಕ್ಸಾ?
ಎರಡು ಬಣಗಳ ನಡುವೆ ದೇವರ ಉತ್ಸವಕ್ಕಾಗಿ ಜಗಳ ನಡೆದಿದೆ. ಗಲಾಟೆಯಾಗುವ ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದಂದೇ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ.
ಅಲ್ಲದೇ ಗ್ರಾಮದಲ್ಲಿ ಮೂವರು ಎಸ್ಐ, ಇಬ್ಬರು ಸಿಪಿಐ, ಡಿವೈಎಸ್ಪಿ ಸೇರಿದಂತೆ ಒಂದು ಡಿಎಆರ್ ತುಕಡಿ ನಿಯೋಜನೆ ಮಾಡಿ, ಬಂದೋಬಸ್ತ್ ಮಾಡಿಲಾಗಿದೆ. ಎರಡು ಬಣಗಳ ಜಗಳದಲ್ಲಿ ಹಬ್ಬದ ದಿನದಂದು ಯಾವುದೇ ಉತ್ಸವ ನಡೆಯದೆ ಉತ್ಸವ ಮೂರ್ತಿ ಅನಾಥವಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಗ್ರಾಮದಲ್ಲಿರುವ ಎರಡು ದೇವಾಲಯ ಮುಜರಾಯಿ ಇಲಾಖೆಗೆ ಬರೆಯುವಂತೆ ಹಲವು ಒತ್ತಾಯ ಮಾಡಿದ್ದಾರೆ.
ಮಕ್ಕಳ ಮೇಲೆ ತೋಳ ದಾಳಿ
ತೋಳದ ದಾಳಿಗೆ ಗದಗ ತಾಲೂಕಿನ ಕುರ್ತಕೋಟಿ ನೀಲಗುಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಆಟವಾಡುತ್ತಿದ್ದ ಮಕ್ಕಳ ಮೇಲೆ ತೋಳ ದಾಳಿ ಮಾಡಿದೆ. 14 ವರ್ಷದ ಬಾಲಕ ಹಾಗೂ 8 ವರ್ಷದ ಬಾಲಕಿ ಮೇಲೆ ತೋಳ ದಾಳಿ ಮಾಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಹಿಂದೆಯೂ ಗ್ರಾಮದಲ್ಲಿ ನಾಯಿಗಳು ಹಾಗೂ ಹಸುಗಳ ಮೇಲೂ ತೋಳ ದಾಳಿ ಮಾಡಿದ್ದು, ಕೂಡಲೇ ತೋಳ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯಗೆ ಮೊದಲ ಶಾಕ್; ಮಾಜಿ ಸಿಎಂ ಕನಸಿನ ಕೋಲಾರ ನನಸಾಗಲ್ವಾ?
ಹಬ್ಬದ ದಿನವೂ ತರಗತಿ ನಡೆಸಿದ ಕ್ರೈಸ್ಟ್ ಶಾಲೆ!
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಿನ್ನೆ ಸಂಕ್ರಾಂತಿ ಹಬ್ಬದಂದು ತರಗತಿ ನಡೆಸಿದ್ದಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಾರ್ವತ್ರಿಕ ರಜೆ ಇದ್ದರೂ ಸಹ ಕ್ರೈಸ್ಟ್ CMI ಪಬ್ಲಿಕ್ ಶಾಲೆಯಲ್ಲಿ ತರಗತಿ ನಡೆಸಿದೆ.
ಶಾಲೆಯ ಆಡಳಿತ ಮಂಡಳಿ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಹಾಗೂ ದಲಿತ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಹಿಂದೂ ಮಕ್ಕಳು ಹಬ್ಬ ಆಚರಣೆ ಮಾಡಬಾರದೆಂಬ ದುರುದ್ದೇಶದಿಂದ ಕ್ರೈಸ್ಟ್ ಶಾಲೆಯಲ್ಲಿ ತರಗತಿ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಶಾಲೆಯಲ್ಲಿ ಕೇವಲ ಕ್ರೈಸ್ತ ಧರ್ಮದ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದಾರೆ ಅಂತ ಹಿಂದೂ ಸಂಘಟನೆ ಮುಖಂಡರು ಆರೋಪಿಸಿದ್ದಾರೆ. ಶಾಲೆಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ