ತಾರಕಕ್ಕೇರಿದ ಕಾಂಗ್ರೆಸ್​​ ನಾಯಕರ ಜಗಳ: ಕೆ.ಜೆ ಜಾರ್ಜ್ ನಡೆಗೆ ಬೇಸತ್ತ ಶಾಸಕ ಭೈರತಿ ಬಸವರಾಜ್ ರಾಜೀನಾಮೆಗೆ ನಿರ್ಧಾರ

ಇದೀಗ ಮತ್ತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಹಾಗಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ತೆರಳಿ ಬಸವರಾಜ್, ರಾಜೀನಾಮೆ ನೀಡಲಿದ್ದಾರೆ.

Ganesh Nachikethu | news18
Updated:July 5, 2019, 6:45 PM IST
ತಾರಕಕ್ಕೇರಿದ ಕಾಂಗ್ರೆಸ್​​ ನಾಯಕರ ಜಗಳ: ಕೆ.ಜೆ ಜಾರ್ಜ್ ನಡೆಗೆ ಬೇಸತ್ತ ಶಾಸಕ ಭೈರತಿ ಬಸವರಾಜ್ ರಾಜೀನಾಮೆಗೆ ನಿರ್ಧಾರ
ಕೆ.ಜೆ ಜಾರ್ಜ್​​ ಮತ್ತು ಭೈರತಿ ಸುರೇಶ್​​
  • News18
  • Last Updated: July 5, 2019, 6:45 PM IST
  • Share this:
ಬೆಂಗಳೂರು(ಜುಲೈ.05): ಕಾಂಗ್ರೆಸ್​​ನಲ್ಲಿ ಮತ್ತೆ ಭಿನ್ನಮತ ಶುರುವಾಗಿದೆ. ಸಚಿವ ಕೆ.ಜೆ ಜಾರ್ಜ್ ಮತ್ತು ಶಾಸಕ ಭೈರತಿ ಬಸವರಾಜ್ ಜಗಳ ತಾರಕಕ್ಕೇರಿದ್ದು, ಕಾಂಗ್ರೆಸ್​​​-ಜೆಡಿಎಸ್​​ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೆ. ಜಾರ್ಜ್​​​ ನಡೆಯಿಂದ ಬೇಸತ್ತಿರುವ ಶಾಸಕ ಭೈರತಿ ಬಸವರಾಜ್, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಚೇರ್ಮನ್ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸರ್ಕಾರ ನೀಡಿರುವ ಸವಲತ್ತು ಹಿಂಪಡೆದಿರುವ ಭೈರತಿ ಬಸವರಾಜ್, ಈಗಾಗಲೇ ತನ್ನ ಕಾರು ಹಿಂದಿರುಗಿಸಿದ್ದಾರೆ. ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸದತ್ತ ತೆರಳಿರುವ, ಭೈರತಿ ರಾಜೀನಾಮೆ ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು ಭೈರತಿ ಸುರೇಶ್​​ ಮತ್ತು ಜಾರ್ಜ್ ನಡುವೆ ಜಗಳಕ್ಕೆ, KSDL ಎಂ.ಡಿ ವರ್ಗಾವಣೆ ವಿಚಾರವೇ ಕಾರಣ ಎಂದು ಹೇಳಲಾಗುತ್ತಿದೆ. ಸಚಿವ ಕೆ.ಜೆ ಜಾರ್ಜ್ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಬರುತ್ತದೆ. ಈ ಹಿಂದೆಯೇ ಐಎಎಸ್ ಅಧಿಕಾರಿ ಎಂ.ಡಿ ರವಿಕುಮಾರ್‌ ತನ್ನ ಮಾತು ಕೇಳಿಲ್ಲ ಎಂಬ ಕಾರಣಕ್ಕೆ ಭೈರತಿ ಸುರೇಶ್ ವರ್ಗಾವಣೆ ಮಾಡಿಸಿದ್ದರು. ರವಿಕುಮಾರ್ ಜಾಗಕ್ಕೆ ವಿಜಯಕುಮಾರ್ ಶೆಟ್ಟಿ ಎಂಬುವರನ್ನು ತಂದು ಕೂರಿಸಿದ್ದರು. ಆದರೆ, ರವಿಕುಮಾರ್ ಪರ ನಿಂತಿದ್ದ ಕೆ.ಜೆ ಜಾರ್ಜ್, ಭೈರತಿ ನಿರ್ಧಾರವನ್ನು ತಳ್ಳಿ ಹಾಕಿದ್ದರು.

ಇದನ್ನೂ ಓದಿ: ಕೇಂದ್ರ ಬಜೆಟ್ 2019-20: ಜನಸ್ನೇಹಿ ಮತ್ತು ದೂರದೃಷ್ಟಿ ಬಜೆಟ್​​ ಇದಾಗಿದೆ; ಪ್ರಧಾನಿ ನರೇಂದ್ರ ಮೋದಿ

ಇದೇ ಕಾರಣಕ್ಕೆ ಈಗಾಗಲೇ ಪರಸ್ಪರ ಇಬ್ಬರೂ ನಾಯಕರು, ಏಕ ವಚನದಲ್ಲಿ ಬೈದಾಡಿಕೊಂಡಿದ್ದರು. ಇದೀಗ ಮತ್ತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಹಾಗಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ತೆರಳಿ ಬಸವರಾಜ್, ರಾಜೀನಾಮೆ ನೀಡಲಿದ್ದಾರೆ.

(ವರದಿ: ಚಿದಾನಂದ ಪಟೇಲ್)
---------------
First published:July 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ