• Home
 • »
 • News
 • »
 • state
 • »
 • Mobile Tower: ಮೊಬೈಲ್ ಟವರನ್ನೇ ಎಗರಿಸಿರೋ ಖತರ್ನಾಕ್ ಕಳ್ಳರು! 50 ಅಡಿ ಎತ್ತರ, 10 ಟನ್ ತೂಕದ ಟವರ್ ಕದ್ದಿದಾದ್ರೂ ಹೇಗೆ ಗೊತ್ತಾ?

Mobile Tower: ಮೊಬೈಲ್ ಟವರನ್ನೇ ಎಗರಿಸಿರೋ ಖತರ್ನಾಕ್ ಕಳ್ಳರು! 50 ಅಡಿ ಎತ್ತರ, 10 ಟನ್ ತೂಕದ ಟವರ್ ಕದ್ದಿದಾದ್ರೂ ಹೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಕಳ್ಳರು ಎಲ್ಲವನ್ನು ಬಿಟ್ಟು ಮೊಬೈಲ್ ಟವರ್ ಗೆ ಕನ್ನ ಹಾಕಿದ್ದಾರೆ. ಈ ವಿಚಿತ್ರ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಹದೇವಪುರ ಗರುಡಚಾರಪಾಳ್ಯದ ಗೌಶಾಲ ರಸ್ತೆಯಲ್ಲಿದ್ದ ಸುಮಾರು 50 ಅಡಿ ಎತ್ತರ ಹಾಗೂ 10 ಟನ್ ತೂಕದ ಮೊಬೈಲ್ ಫೋನ್ ಟವರ್ ಜೊತೆಗೆ ಟವರ್ ನ ಡೀಸೆಲ್ ಜನರೇಟರ್ ಮತ್ತು ಬ್ಯಾಟರಿ ಬ್ಯಾಂಕ್ ನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore, India
 • Share this:

  ಬೆಂಗಳೂರು: ಕಳ್ಳರು (Thief) ಮನೆಗೆ (Home) ಕನ್ನ ಹಾಕುವುದನ್ನು ನೀವು ಕೇಳಿರಬಹುದು. ದರೋಡೆ ಮಾಡಿದ್ದು, ಸುಲಿಗೆ, ವಿವಿಧ ವೇಷಗಳಲ್ಲಿ ಬಂದು ಚಿನ್ನಾಭರಣ (Gold Jewellery) ಕದ್ದಿದ್ದು ನೋಡಿರಬಹುದು. ಒಂಟಿ ಮಹಿಳೆಯರ ಸರ ಕದಿಯುವುದು, ಚಿನ್ನದ ಅಂಗಡಿಗೆ ನುಗ್ಗಿ ಕಳ್ಳತನ ಮಾಡುವುದು , ಮೊಬೈಲ್ ಅಂಗಡಿಗಳಲ್ಲಿ (Mobile Shop) ವಸ್ತುಗಳನ್ನು, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದು, ದುಡ್ಡು ಎಗರಿಸಿದ್ದು ಗೊತ್ತಿರುತ್ತದೆ. ಅಷ್ಟೇ ಯಾಕೆ ದೇವಸ್ಥಾನದ ಹುಂಡಿ, ಮೂರ್ತಿ, ಚಿನ್ನ ಮತ್ತು ಬೆಳ್ಳಿಯ ಮೂರ್ತಿಗಳ ಕದ್ದು ಪರಾರಿಯಾಗಿದ್ದು ನೋಡಿರಬಹುದು. ಆದ್ರೆ ಈಗ ಬೆಂಗಳೂರಿನಲ್ಲಿ (Bengaluru) ಕಳ್ಳರು ಮೊಬೈಲ್ ಟವರನ್ನೇ (Mobile Tower) ಕದ್ದುಕೊಂಡು ಹೋಗಿದ್ದಾರೆ. ಹೌದು ಇದು ಆಶ್ಚರ್ಯ ಎನ್ನಿಸಿದ್ರೂ ನಿಜ.


   ಬೆಂಗಳೂರಿನಲ್ಲಿ ಮೊಬೈಲ್ ಟವರ್ ಕದ್ದೊಯ್ದ ಕಳ್ಳರು


  ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರು ಎಲ್ಲವನ್ನು ಬಿಟ್ಟು ಮೊಬೈಲ್ ಟವರ್ ಗೆ ಕನ್ನ ಹಾಕಿದ್ದಾರೆ. ಈ ವಿಚಿತ್ರ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಹದೇವಪುರ ಗರುಡಚಾರಪಾಳ್ಯದ ಗೌಶಾಲ ರಸ್ತೆಯಲ್ಲಿದ್ದ ಸುಮಾರು 50 ಅಡಿ ಎತ್ತರ ಹಾಗೂ 10 ಟನ್ ತೂಕದ ಮೊಬೈಲ್ ಫೋನ್ ಟವರ್ ಕದ್ದಿದ್ದಾರೆ.


  ಜೊತೆಗೆ ಟವರ್ ನ ಡೀಸೆಲ್ ಜನರೇಟರ್ ಮತ್ತು ಬ್ಯಾಟರಿ ಬ್ಯಾಂಕ್ ನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಖಾಸಗಿ ಕಂಪನಿಯು ಪೊಲೀಸರಿಗೆ ದೂರು ನೀಡಿದೆ.


  ಟೈಮ್ ಆಫ್ ಇಂಡಿಯಾ ವರದಿ ಪ್ರಕಾರ, 50 ಅಡಿ ಎತ್ತರ ಹಾಗೂ 10 ಟನ್ ತೂಕದ ಮೊಬೈಲ್ ಫೋನ್ ಟವರ್ ಜೊತೆಗೆ ಟವರ್ ನ ಡೀಸೆಲ್ ಜನರೇಟರ್ ಮತ್ತು ಬ್ಯಾಟರಿ ಬ್ಯಾಂಕ್ ಕದ್ದೊಯ್ದಿರುವ ಕಳ್ಳರಿಗಾಗಿ ಪೊಲೀಸರು ಸದ್ಯ ಬಲೆ ಬೀಸಿದ್ದಾರೆ.


  ಮೊಬೈಲ್ ಟವರ್ ಮತ್ತು ಬಿಡಿ ಭಾಗಗಳು ವಿಲೇವಾರಿ


  ಆಗಸ್ಟ್ 1 ಮತ್ತು ಸೆಪ್ಟೆಂಬರ್ 1, 2022 ರ ನಡುವಿನ ಅವಧಿಯಲ್ಲಿ ಮೊಬೈಲ್ ಟವರ್ ಮತ್ತು ಅದರ ಬಿಡಿ ಭಾಗಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಟವರ್ ನ ನಿಖರವಾದ ಎತ್ತರ ಮತ್ತು ತೂಕದ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


  ಟೆಲಿಕಾಂ ಉದ್ಯಮದ ಮೂಲದ ಪ್ರಕಾರ, ಕಳ್ಳತನವಾದ ಮೊಬೈಲ್ ಟವರ್ ಸುಮಾರು 50 ಅಡಿ ಉದ್ದ ಮತ್ತು 10 ಟನ್ ತೂಕ ಹೊಂದಿರುವ ಸಾಧ್ಯತೆಯಿದೆ. ಇದರ ಎತ್ತರ 200 ಅಡಿ ಇರಬಹುದು ಎಂದು ಹೇಳಿದ್ದಾರೆ.


  ಟೆಲಿಕಾಂ ಟವರ್ ಮತ್ತು ಅದರ ಪರಿಕರದ ಒಟ್ಟು ಮೌಲ್ಯ 17 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗಿದೆ. ಈಗ ಟವರ್ ಕದ್ದ ದುಷ್ಕರ್ಮಿಗಳ ಪತ್ತೆಗಾಗಿ ಸಂಬಂಧಪಟ್ಟ ಸಂಸ್ಥೆಯು ಪೊಲೀಸರು ಮತ್ತು ನ್ಯಾಯಾಲಯ ಮಧ್ಯಸ್ಥಿಕೆ ವಹಿಸಲಿ ಎಂದು ನಿರ್ದೇಶನ ಕೋರಿದೆ.


  ಜನವರಿ 1 ರಂದು ನ್ಯಾಯಾಲಯದ ಸೂಚನೆ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಹದೇವಪುರ ಪೊಲೀಸರು, ಜನವರಿ 1 ರಂದು ಐಪಿಸಿ ಸೆಕ್ಷನ್ 379 ಕಳ್ಳತದ  ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.


  ಮೊಬೈಲ್ ಟವರ್ ಕಳ್ಳತನದ ಬಗ್ಗೆ ಸಂಸ್ಥೆ ಹೇಳಿದ್ದೇನು?


  ಇನ್ನು ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಮೊಬೈಲ್ ಟವರ್ ನ್ನು 2009 ರಲ್ಲಿ ಸ್ಥಾಪನೆ ಮಾಡಲಾಗಿದೆ. ಅದರ ನಿರ್ವಹಣೆ ಮಾಡುತ್ತಿದ್ದ ತಂತ್ರಜ್ಞರು ಆಗಸ್ಟ್ 2022 ರಲ್ಲಿ ಕೆಲಸ ತೊರೆದಿದ್ದರು. ನಂತರ ಸೆಪ್ಟೆಂಬರ್ 2022 ರಲ್ಲಿ ಮತ್ತೊಬ್ಬ ತಂತ್ರಜ್ಞರ ನೇಮಕ ಮಾಡಲಾಗಿತ್ತು.


  ಹೊಸ ತಂತ್ರಜ್ಞ ಸ್ಥಳಕ್ಕೆ ಭೇಟಿ ನೀಡುವಿದರೊಳಗಾಗಿ ಟವರ್ ಕಳ್ಳತನವಾಗಿತ್ತು ಎಂದು ತಿಳಿಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಕೆಲವರು ಟವರ್ ತೆರೆಯುವುದನ್ನು ನೋಡಿದ್ದೇವೆ ಎಂದಿದ್ದಾರೆ. ಇನ್ನು ಸಂಸ್ಥೆಯು ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದಿದೆ.


  ಇದನ್ನೂ ಓದಿ: ಬ್ರಿಗೇಡ್ ರೋಡ್​​ನಲ್ಲಿ ಏಕಾಏಕಿ ಬಾಯ್ತೆರೆದ ರಸ್ತೆ; ಹಳಕ್ಕೆ ಬಿದ್ದು ಇಬ್ಬರು ಬೈಕ್​ ಸವಾರರಿಗೆ ಗಾಯ


  ದೂರು ದಾಖಲಿಸಿರುವ ಸಂಸ್ಥೆಯು ತಂತ್ರಜ್ಞನನ್ನು ಸಂಪರ್ಕಿಸಿ ಟವರ್ ಕಳ್ಳತನದ ಮಾಹಿತಿ ಕೇಳಿದಾಗ ಅವರು, ಸಂಪೂರ್ಣ ಮಾಹಿತಿ ನೀಡಿಲ್ಲ. ಟವರ್ ಹೇಗೆ ಕಳ್ಳತನವಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ೀ ಬಗ್ಗೆ ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

  Published by:renukadariyannavar
  First published: