KRS: ಕೆಆರ್​ಎಸ್ ಡ್ಯಾಂ ಅಡಿಪಾಯದ ಕಲ್ಲುಗಳು ಕುಸಿತ, ನಿಜವಾಗ್ಲೂ ಡ್ಯಾಂ ಬಿರುಕು ಬಿಟ್ಟಿದೆಯಾ?

KRS Dam: ತಡರಾತ್ರಿ ಸುರಿದ ಮಳೆಯಿಂದಾಗಿ ಮೆಟ್ಟಿಲುಗಳ ತಳಹದಿಯ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದಿವೆ. ಇದ್ರಿಂದ ಆತಂಕ ಸೃಷ್ಟಿ ಯಾಗಿದ್ದು, KRS ನಲ್ಲಿ ಬಿರುಕು ಬಿಟ್ಟಿದೆ ಎಂಬ ಹೇಳಿಕೆಗೆ ಪುಷ್ಟಿ ನೀಡಿದಂತಾಗಿದೆ. KRS ನಲ್ಲಿ ಡ್ಯಾಂ ನಿರ್ಮಾಣ ಮಾಡಿದ ಸಂದರ್ಭ ದಿಂದ ಇಲ್ಲಿವರೆಗೂ ಈ ರೀತಿ ಕುಸಿತವಾಗಿರಲಿಲ್ಲ. ಆದ್ರೆ ಈ ಕುಸಿತ ಎಲ್ಲರಲ್ಲೂ ಆತಂಕ ಈಗ ಸೃಷ್ಟಿಸಿದೆ. 

ಕುಸಿದಿರುವ ಕೆಆರ್​ಎಸ್ ಅಣೆಕಟ್ಟಿನ ಗೋಡೆ

ಕುಸಿದಿರುವ ಕೆಆರ್​ಎಸ್ ಅಣೆಕಟ್ಟಿನ ಗೋಡೆ

  • Share this:
    KRS Dam: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರ KRS ಡ್ಯಾಂ ಬಿರುಕು ಹೇಳಿಕೆ ಹಸಿಯಾಗಿರುವಾಗಲೇ ಇದೀಗ ಕೆ.ಆರ್.ಎಸ್. ಡ್ಯಾಂ ಬಳಿ ಕಾವೇರಿ ಪ್ರತಿಮೆಗೆ ಹೋಗುವ ರಸ್ತೆಯ ತಳಹದಿಯ ಕಲ್ಲುಗಳು ಕುಸಿದಿದ್ದು, ಆತಂಕ ಮೂಡಿಸಿದೆ. ಹೌದು..., ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಎಸ್ ಜಲಾಶಯ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಕನ್ನಂಬಾಡಿಕಟ್ಟೆ ಬಿರುಕು ಬಿಟ್ಟಿದೆ ಅಂತ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆದು ಪರ ವಿರೋಧ ಚೆರ್ಚೆಗಳು ನಡೆದಿದ್ವು. ಹಿಗಾಗಿ ಅಧಿಕಾರಿಗಳ ಸಮೇತ ಸುಮಲತಾ ಅಂಬರೀಶ್ ಕೂಡ ಡ್ಯಾಂ ವೀಕ್ಷಣೆ ಮಾಡಿದ್ದರು. ಈ ಸಂದರ್ಭ ಅಧಿಕಾರಿಗಳು ಡ್ಯಾಂ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಡ್ಯಾಂ ಸುರಕ್ಷಿತವಾಗಿದೆ ಅಂತ ತಮ್ಮ ವರದಿಯನ್ನ ನೀಡಿದ್ದರು. ಆದ್ರೆ ತಡರಾತ್ರಿ ಡ್ಯಾಂಗೆ ಹೊಂದಿಕೊಂಡಿರುವ ರಸ್ತೆಯ ತಳಹದಿ ಕುಸಿದಿದೆ. ಈ ತಳಹದಿಯು ಪ್ಲಸ್ 80 ಗೇಟ್ ಗಳ ಪಕ್ಕದಲ್ಲೆ ಇದ್ದು, ಇದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ.

    ಎಡೆಬಿಡದೆ ಸುರಿದ ಮಳೆಗೆ ಕುಸಿಯಿತಾ ಡ್ಯಾಂಗೆ ಹೊಂದಿಕೊಂಡ ರಸ್ತೆಯ ತಳಹದಿ ?

    ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಿಗಾಗಿ ಡ್ಯಾಂಗೆ ಹೊಂದಿಕೊಂಡಂತಿರೋ ರಸ್ತೆಯ ತಳಹದಿ ಕುಸಿದಿದೆ. ಈ ರಸ್ತೆ ಡ್ಯಾಂ ನಿರ್ಮಾಣ ಮಾಡಿದ ಸಂದರ್ಭದಲ್ಲೆ ಸುರ್ಕಿ ಗಾರೆ ಮತ್ತು ಮಣ್ಣಿನಿಂದ ನಿರ್ಮಿಸಲಾಗಿದೆ. ಹಿಂದೆ ಇದೆ ರಸ್ತೆಯ ಮೂಲಕ ಡ್ಯಾಂನ ಮೇಲ್ಬಾಗಕ್ಕೆ ಹೋಗಲಾಗ್ತಿತ್ತು. ಆದ್ರೆ ಭದ್ರತಾ ದೃಷ್ಟಿಯಿಂದ ಡ್ಯಾಂಗೆ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿದ ಮೇಲೆ ಈ ರಸ್ತೆಯಲ್ಲಿ ಓಡಾಟ ನಿರ್ಬಂಧಿಸಲಾಗಿತ್ತು. ತಡರಾತ್ರಿ ಸುರಿದ ಮಳೆಯಿಂದಾಗಿ ಮೆಟ್ಟಿಲುಗಳ ತಳಹದಿಯ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದಿವೆ. ಇದ್ರಿಂದ ಆತಂಕ ಸೃಷ್ಟಿ ಯಾಗಿದ್ದು, krs ನಲ್ಲಿ ಬಿರುಕು ಬಿಟ್ಟಿದೆ ಎಂಬ ಹೇಳಿಕೆಗೆ ಪುಷ್ಟಿ ನೀಡಿದಂತಾಗಿದೆ. Krs ನಲ್ಲಿ ಡ್ಯಾಂ ನಿರ್ಮಾಣ ಮಾಡಿದ ಸಂದರ್ಭ ದಿಂದ ಇಲ್ಲಿವರೆಗೂ ಈ ರೀತಿ ಕುಸಿತವಾಗಿರಲಿಲ್ಲ. ಆದ್ರೆ ಈ ಕುಸಿತ ಎಲ್ಲರಲ್ಲೂ ಆತಂಕ ಈಗ ಸೃಷ್ಟಿಸಿದೆ.

    ಇದನ್ನೂ ಓದಿ: Sumalatha Ambareesh: ಕನ್ನಂಬಾಡಿ ಕಟ್ಟೆ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ: ಸುಮಲತಾ

    KRS ಡ್ಯಾಂ ಬಳಿ‌ ಕಲ್ಲು ಕುಸಿತ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದೌಡು

    ರಾತ್ರಿ ಮಳೆಗೆ ಕಲ್ಲು ಕುಸಿದಿದ್ದ ಸುದ್ದಿ ತಿಳಿದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ krs ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಡ್ಯಾಂ ಕೆಳಗಿನ ರಸ್ತೆಯ ಕಲ್ಲುಗಳು ಕುಸಿದಿದ್ದು ಡ್ಯಾಂ ಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಕುಸಿದಿರೋ ಕಲ್ಲುಗಳನ್ನು ಮತ್ತೆ ಯಥಾಸ್ಥಿತಿಯಲ್ಲಿ ಕೂರಿಸಿ ದುರಸ್ಥಿ ಕಾಮಗಾರಿಗೆ ಮುಂದಾಗಿದ್ದಾರೆ.ಸ್ಥಳೀಯ ಶಾಸಕ ರವೀಂದ್ರ ಕೂಡ ಮಾತನಾಡಿ ರಸ್ತೆ ಕೆಳಗಿನ ಕಲ್ಲುಗಳು ಕುಸಿದಿರೋದ್ರಿಂದ ಡ್ಯಾಂಗೂ ಇದಕ್ಕೂ ಏನೂ ಸಂಬಂಧವಿಲ್ಲ ಯಾವುದೇ ಅಪಾಯವಿಲ್ಲ ಎಂದಿದ್ದು, ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ‌.

    ತಳಹದಿ ಕುಸಿತಕ್ಕೆ ಸುಮಲತಾ ಅಂಬರೀಶ್ ಬೇಸರ

    ಡ್ಯಾಂಗೆ ಸಂಪರ್ಕ ಕಲ್ಪಿಸೋ ರಸ್ತೆಯ ತಳಹದಿ ಕುಸಿದ ವಿಚಾರ ತಿಳಿದ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೆ ಕುಸಿತದ ವಿಚಾರ ತಿಳಿತಿದ್ದಾಗೆ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ಆದ್ರೆ ಈ ಸಂದರ್ಭ ಡಿಸಿ ಅಶ್ವಥಿ ಮೆಟ್ಟಿಲುಗಳ ಕುಸಿತದ ಬಗ್ಗೆ ಅಧಿಕಾರಿಗಳು ನನಗೆ ಯಾವ ಮಾಹಿತಿಯನ್ನು ಕೊಟ್ಟಿಲ್ಲ ಎಂದಿದ್ದಾರೆ. ಇನ್ನು ಇದಾದ ಬಳಿಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನ ಕೂಡ ಪ್ರಶ್ನಿಸಿದ್ದಾರೆ. ಈ ಸಂದರ್ಭ ಒಬ್ಬೊಬ್ಬ ಅಧಿಕಾರಿ ಒಂದೊಂದು ಸಬೂಬನ್ನ ನೀಡಿದ್ದಾರೆ. ಹಿಗಾಗಿ ಸುಮಲತಾ ಅಂಬರೀಶ್ ಅಧಿಕಾರಿಗಳ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಈ ಘಟನೆಯಿಂದ ಎಲ್ಲರು ಆದಷ್ಟು ಬೇಗ ಹೆಚ್ಚೆತ್ತಕೊಳ್ಳಬೇಕು ಇಲ್ಲದಿದ್ದರೆ ರಾಜಕಾರಣಿಗಳ ಸ್ವಾರ್ಥಕ್ಕೆ ಡ್ಯಾಂ ಕಳೆದುಕೊಳ್ಳಬೇಕಾಗುತ್ತದೆ ಅಂತ ತಿಳಿಸಿದ್ದಾರೆ.

    (ವರದಿ: ಸುನೀಲ್ ಗೌಡ, ಮಂಡ್ಯ)
    Published by:Soumya KN
    First published: