HOME » NEWS » State » FEW SENIOR BJP LEADERS SECRET MEETING AT A RESORT IN CHIKKAMAGALURU SNVS

ಕಾಫಿನಾಡಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ; ಸಿ.ಟಿ. ರವಿ, ಆರ್ ಅಶೋಕ್, ಶೆಟ್ಟರ್, ಈಶ್ವರಪ್ಪ ಮೀಟಿಂಗ್ ರಹಸ್ಯವೇನು?

ಮುಳ್ಳಯ್ಯನಗಿರಿ ತಪ್ಪಲಿನಲ್ಲಿರೋ ರೆಸಾರ್ಟ್ವೊಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೊರೊನಾ ಉಸ್ತುವಾರಿಯಾಗಿರೋ ಆರ್ ಅಶೋಕ್, ಸಿ.ಟಿ. ರವಿ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಜರಾಗಿದ್ದು ವಿಶೇಷ.

news18-kannada
Updated:July 2, 2020, 10:41 PM IST
ಕಾಫಿನಾಡಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ; ಸಿ.ಟಿ. ರವಿ, ಆರ್ ಅಶೋಕ್, ಶೆಟ್ಟರ್, ಈಶ್ವರಪ್ಪ ಮೀಟಿಂಗ್ ರಹಸ್ಯವೇನು?
ಚಿಕ್ಕಮಗಳೂರಿನಲ್ಲಿ ಜಗದೀಶ್ ಶೆಟ್ಟರ್
  • Share this:
ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ತಾಂಡವವಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಹೆಮ್ಮಾರಿ ಕೇಕೆ ಹಾಕ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರಿಗೆ ಬಹುತೇಕ ಆಸ್ಪತ್ರೆಗಳಲ್ಲಿ ರಾಜಧಾನಿಯಲ್ಲಿ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕೇಸರಿ ಪಕ್ಷದ ಪ್ರಭಾವಿ ನಾಯಕರು ಕಾಫಿನಾಡಿನ ರೆಸಾರ್ಟ್ ವೊಂದರಲ್ಲಿ ಸಭೆ ಸೇರಿ ರಹಸ್ಯ ಮೀಟಿಂಗ್ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬರೀ ಕುತೂಹಲ ಮಾತ್ರವಲ್ಲದೇ ರಾಜಕೀಯ ವಲಯದಲ್ಲೂ ತೀರ್ವ ಚರ್ಚೆಗೆ ಗ್ರಾಸವಾಗಿದೆ. 

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರೋ ರೆಸಾರ್ಟ್​ವೊಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೊರೊನಾ ಉಸ್ತುವಾರಿಯಾಗಿರೋ ಆರ್ ಅಶೋಕ್, ಸಿ.ಟಿ. ರವಿ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಜರಾಗಿದ್ದು ವಿಶೇಷ. ಇದಿಷ್ಟೇ ಅಲ್ಲದೇ ಸತೀಶ್ ರೆಡ್ಡಿ, ಮುನಿರಾಜು, ಕೃಷ್ಣಪ್ಪ ಸೇರಿದಂತೆ ಕೇಸರಿ ಪಾಳಯದ ಕೆಲ ಪ್ರಭಾವಿ ನಾಯಕರು ರಾತ್ರೋರಾತ್ರಿ ಹಾಜರಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸಿಕ್ರೇಟ್ ಸಭೆ ಹಿನ್ನೆಲೆಯಲ್ಲಿ ಮೊನ್ನೆ ಚಿಕ್ಕಮಗಳೂರಿಗೆ ಆಗಮಿಸಿದ ಆರ್.ಅಶೋಕ್ ನಿನ್ನೆ ಕೂಡ ಚಿಕ್ಕಮಗಳೂರಿನಲ್ಲೇ ವಾಸ್ತವ್ಯ ಹೂಡಿದ್ರು. ಒಂದೆಡೆ ಬೆಂಗಳೂರಿನಲ್ಲಿ ಕೊರೊನಾ ಕೇಕೆ ಹಾಕ್ತಿದ್ರೂ ಮೈಂಡ್ ಮಾಡದ ಅಶೋಕ್ ಸಾಹೇಬ್ರು, ಮೂರು ದಿನಗಳ ಕಾಫಿನಾಡ ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್ಸಾದ್ರು. ನಿನ್ನೆ ತಡರಾತ್ರಿ 12.30ಕ್ಕೆ ಸಚಿವ ಸಿ.ಟಿ. ರವಿ ರೆಸಾರ್ಟ್​ನಿಂದ ಹೊರಬರೋದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತು. ಆದ್ರೆ ಈ ಬಗ್ಗೆ ಬೆಳಗ್ಗೆ ಕೇಳಿದ್ದಕ್ಕೆ ನಾವ್ಯಾರೂ ಸಭೆ ಮಾಡೇ ಇಲ್ಲ, ನಾನು ಹೋಗೇ ಇಲ್ಲ ಅಂತಾ ತೇಪೆ ಹಾಕುವ ಕೆಲಸವನ್ನ ಸಚಿವ ಸಿ.ಟಿ ರವಿ ಮಾಡಿದರು.

ಸಚಿವ ಸಿ.ಟಿ ರವಿ ಕಾರು ರಾತ್ರಿ 12.30ಕ್ಕೆ ಹೊರಬಂದರೂ, ‘ಇಲ್ಲಾ... ನಾನ್ ಯಾವುದೇ ರೆಸಾರ್ಟ್​ಗೆ ಹೋಗೇ ಇಲ್ಲ’ ಎಂದ್ಹೇಳಿ ಎಂದಿನಂತೆ ಗುಟ್ಟು ಬಿಟ್ಟುಕೊಡದೇ ಜಾಣತನ ಮೆರೆದರು. ಕಾಫಿನಾಡಲ್ಲಿ ರಹಸ್ಯ ಸಭೆ ನಡೆಸುವ ಯೋಜನೆಯಿಂದಾಗಿಯೇ ನಿನ್ನೆ ಅಶೋಕ್ ಸಾಹೇಬ್ರು, ಚಿಕ್ಕಮಗಳೂರು ನಗರದಲ್ಲಿ ನೆನೆಗುದಿಗೆ ಬಿದ್ದಿರೋ ಡಿಸಿ ಕಚೇರಿಯ ಸ್ಥಳ ಪರಿಶೀಲನೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಈ ವೇಳೆ ಆರ್ ಅಶೋಕ್ ಅವರಿಗೆ ಮೊನ್ನೆಯಿಂದಲೂ ಮುನಿರಾಜು, ಕೃಷ್ಣಪ್ಪ ಜೊತೆ ನೀಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಹಾವೇರಿಯಲ್ಲಿ ಕೊರೋನಾ ಪ್ರಕರಣ ನಿಯಂತ್ರಿಸಲು ವಿವಿಧ ಕ್ರಮಗಳಿಗೆ ಜಿಲ್ಲಾಡಳಿತ ಸಜ್ಜು

ಸಚಿವರಾದ ಮೇಲೆ ಚಿಕ್ಕಮಗಳೂರು ನಗರಕ್ಕೆ ಕಾಲಿಡದ ಜಗದೀಶ್ ಶೆಟ್ಟರ್, ಕೊರೊನಾ ಮಧ್ಯೆಯೂ ಇಂಡಸ್ಟ್ರಿಯಲ್ ಟೂರ್ ನೆಪದಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದರು. ಆರ್ ಅಶೋಕ್, ಜಗದೀಶ್ ಶೆಟ್ಟರ್ ಅಧಿಕೃತ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಕ್ಯಾಮೆರಾಗಳಿಗೆ ಸಿಕ್ಕಿದರು. ಆದ್ರೆ ಈಶ್ವರಪ್ಪರವರು ರಾತ್ರಿಯೇ ಬಂದು ಸಭೆ ಮುಗಿಸಿಕೊಂಡು ರಾತ್ರಿ ಹೋಗಿರುವ ಮಾಹಿತಿ ದೊರೆತಿದೆ.ಒಂದೆಡೆ ಸರ್ಕಾರದ ಪ್ರತಿ ವಿಚಾರದಲ್ಲೂ ಬಿಎಸ್​ವೈ ಪುತ್ರ ವಿಜಯೇಂದ್ರ ಮೂಗು ತೂರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ ಅಂತಾ ಹೇಳಲಾಗ್ತಿದೆ. ಜೊತೆಗೆ ಎಷ್ಟೇ ನಮ್ಮಲ್ಲಿ ಭಿನ್ನಭಿಪ್ರಾಯವಿಲ್ಲ ಎಂದು ಬಿಜೆಪಿ ನಾಯಕರು ಪೋಸ್ ಕೊಟ್ಟರೂ ನಾಲ್ಕೈದು ಮಿನಿಸ್ಟರ್, ಶಾಸಕರು, ಮುಖಂಡರು ರಹಸ್ಯ ಸ್ಥಳದಲ್ಲಿ ಒಂದೆಡೆ ಸೇರಿ ಮೀಟಿಂಗ್ ನಡೆಸುತ್ತಾರೆ ಅಂದರೆ ಇವರು ಸುಮ್ಮನೆ ಸೇರಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಸದ್ದಿಲ್ಲದೇ ರಹಸ್ಯವಾಗಿ ರೆಸಾರ್ಟ್​ನಲ್ಲಿ ನಡೆದ ಮೀಟಿಂಗ್, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದಂತೂ ಸತ್ಯ.ವರದಿ: ವೀರೇಶ್ ಹೆಚ್.ಜಿ. 
First published: July 2, 2020, 10:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories