ಇಂಗ್ಲಿಷ್ ಸಂಕಷ್ಟ: ರಮೇಶ್​ ಜಾರಕಿಹೊಳಿಗೆ ಕೈ ತಪ್ಪಲಿದೆಯಾ ನೀರಾವರಿ ಖಾತೆ?

ನದಿ ವಿವಾದಗಳನ್ನು ನಿಭಾಯಿಸಬೇಕಾದರೆ, ಅಂತರರಾಜ್ಯಗಳೊಂದಿಗೆ ಉತ್ತಮ ಸಂಪರ್ಕ ಸಂವಹನ ಹೊಂದಿರಬೇಕು. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಬೇಕು. ಅಲ್ಲದೇ ಖಾತೆ ನಿರ್ವಹಣೆಗೆ ಇಂಗ್ಲಿಷ್​ ಜ್ಞಾನ ಕೂಡ ಇರಬೇಕು. ಈ ಮೂರು ಅಂಶಗಳು ಜಾರಕಿಹೊಳಿಗೆ ಇಲ್ಲ.

ರಮೇಶ್​ ಜಾರಕಿಹೊಳಿ

ರಮೇಶ್​ ಜಾರಕಿಹೊಳಿ

  • Share this:
ಬೆಂಗಳೂರು(ಫೆ. 3): ನೀರಾವರಿ ಖಾತೆ ಮೇಲೆ ಕಣ್ಣಿಟ್ಟಿರುವ ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿಗೆ ತಮ್ಮ ಆಸೆ ಕೈಗೂಡದೇ ಹೋಗಬಹುದು. ಇದಕ್ಕೆ ಕಾರಣ ಅವರಿಗೆ ಇಂಗ್ಲಿಷ್​ ಚೆನ್ನಾಗಿ ಬಾರದಿರುವುದು. 

ಅಚ್ಚರಿಯಾದರೂ ಹೌದು. ಅತ್ಯಂತ ಪ್ರಭಾವಿ ಖಾತೆಗಳಲ್ಲಿ ಒಂದಾಗಿರುವ ನೀರಾವರಿ ಖಾತೆ ಪಡೆಯಲು ರಮೇಶ್​ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಡಿಸಿಎಂ ಸ್ಥಾನ ಬೇಡ ಆದರೆ ನೀರಾವರಿ ಖಾತೆಯೇ ಬೇಕು ಎಂಬುದು ರಮೇಶ್​ ಪಟ್ಟು. ಈ ರಮೇಶ್​ ಹಠ ಈಗ ಸಿಎಂಗೆ ಮಾತ್ರವಲ್ಲದೇ ಹಲವು ನಾಯಕರಿಗೆ ತಲೆ ಬಿಸಿ ತಂದಿದೆ.

ಕರ್ನಾಟಕ ಈಗಾಗಲೇ ಮಹದಾಯಿ, ಕಾವೇರಿ, ಕೃಷ್ಣ ವಿವಾದಗಳು ದೇಶದಲ್ಲಿ ಸುದ್ದಿಯಾಗಿವೆ. ಈ ನದಿ ವಿವಾದಗಳನ್ನು ನಿಭಾಯಿಸಬೇಕಾದರೆ, ಅಂತರರಾಜ್ಯಗಳೊಂದಿಗೆ ಉತ್ತಮ ಸಂಪರ್ಕ ಸಂವಹನ ಹೊಂದಿರಬೇಕು. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಬೇಕು. ಅಲ್ಲದೇ ಖಾತೆ ನಿರ್ವಹಣೆಗೆ ಇಂಗ್ಲಿಷ್​ ಜ್ಞಾನ ಕೂಡ ಇರಬೇಕು. ಈ ಮೂರು ಅಂಶಗಳು ಜಾರಕಿಹೊಳಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಖಾತೆ ನೀಡಬಾರದು ಎಂಬುದು ಮೂಲ ಬಿಜೆಪಿಗರ ವಾದ. ಇದೇ ವಾದವನ್ನು ಅವರು ಹೈ ಕಮಾಂಡ್​ ಮುಂದೆ ಕೂಡ ಮಂಡಿಸಿದ್ದಾರೆ.

ಇದನ್ನು ಓದಿ: ರಮೇಶ ಜಾರಕಿಹೊಳಿಗೆ ನೀರಾವರಿ ಖಾತೆ ಕೊಟ್ಟರೆ ಬಿಜೆಪಿಯನ್ನೇ ಮುಳುಗಿಸುತ್ತಾರೆ: ಲಖನ್​​

ಈ ಹಿಂದೆ ಸಚಿವರಾಗಿದ್ದಾಗ ರಮೇಶ್​ ಜಾರಕಿಹೊಳಿ ಜವಾಬ್ದಾರಿಯಾಗಿ ವರ್ತಿಸಿಲ್ಲ, ಅಲ್ಲದೇ ಸದನದಲ್ಲಿ ಕೂಡ ಅವರು ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ವಿಫಲವಾಗಿದ್ದರು. ಅವರು ಉತ್ತಮ ವಾಗ್ಮಿಯೂ ಅಲ್ಲ, ಸಂವಹನ ಕೌಶಲ್ಯವೂ ಅವರಿಗೆ ಇಲ್ಲ. ಈ ಖಾತೆ ನೀಡಿದರೆ, ಪಕ್ಷಕ್ಕೆ ಮುಜುಗರವಾಗಲಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಖಾತೆ ನೀಡದಂತೆ ಸಿಎಂಗೆ ನಿರ್ದೇಶನ ನೀಡುವಂತೆ ಮೂಲ ಬಿಜೆಪಿ ನಾಯಕರು ಪಕ್ಷದ ಹೈ ಕಮಾಂಡ್​ ಮೊರೆ ಹೋಗಿದ್ದಾರೆ.
First published: