Fetus Death: ಆಸ್ಪತ್ರೆಯ ಬಾತ್ ರೂಮ್​ನಲ್ಲಿ ಭ್ರೂಣ ಪತ್ತೆ, ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶು

ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತು ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ. ಆಸ್ಪತ್ರೆಯ ಬಾತ್ ರೂಮ್ ನಲ್ಲಿ ಎಸೆದು ಹೋಗಿರುವ ಕಿರಾತಕರು ಎರಡು ದಿನಗಳ ಹಿಂದೆ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಆಸ್ಪತ್ರೆ

ಆಸ್ಪತ್ರೆ

  • Share this:
ರಾಮನಗರ : ಜಿಲ್ಲೆಯ ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತು ಶಿಶು (Fetus) ಸಾವನ್ನಪ್ಪಿರುವ (Death) ಘಟನೆ ನಡೆದಿದೆ. ಆಸ್ಪತ್ರೆಯ ಬಾತ್ ರೂಮ್ ನಲ್ಲಿ ಎಸೆದು ಹೋಗಿರುವ ಕಿರಾತಕರು ಎರಡು ದಿನಗಳ ಹಿಂದೆ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಹೆಣ್ಣು ಮಗು ಇರಬಹುದು (Babygirl) ಎಂಬ ಶಂಕೆವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಮಕ್ಕಳ ಅಭಿವೃದ್ಧಿ ಅಧಿಕಾರಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. FSL ವರದಿಗಾಗಿ ಕಳುಹಿಸಲು ನಿರ್ಧಾರ ಮಾಡಿದ್ದು ,ಮರಣೋತ್ತರ ಪರೀಕ್ಷೆ ನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಇನ್ನು ಆಸ್ಪತ್ರೆಯಲ್ಲಿ ಯಾವುದೇ ಗರ್ಭಪಾತದ ಕೇಸ್ ಇಲ್ಲ ಎಂದು ಮಾಹಿತಿ ಸಿಕ್ಕಿದೆ. ಹೊರಗಿನಿಂದ ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಆಸ್ಪತ್ರೆಯ ಕೆಲ ಸಿಬ್ಬಂದಿ ವರ್ಗ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಕುರಿತಯ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಕೆಶಂಕೆಯಿಲ್ಲದ ಆಡಳಿತ ವರ್ಗ, ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ :

ಚನ್ನಪಟ್ಟಣ ಹೇಳಿಕೇಳಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ.‌ ಆದರೆ ಇದೇ ಕ್ಷೇತ್ರದಲ್ಲಿ ಇರುವ ಸಾರ್ವಜನಿಕ ಆಸ್ಪತ್ರೆಯ ಕರ್ಮಕಾಂಡ ಒಂದಲ್ಲ, ಎರಡಲ್ಲ. ಆದರೆ ಇದ್ಯಾವುದರ ಬಗ್ಗೆಯೂ ಸಹ ಇಲ್ಲಿನ ಆಡಳಿತ ವರ್ಗ ತಲೆಕೆಡಿಸಿಕೊಳ್ಳುವುದಿಲ್ಲ. ಇದರ ಜತೆಗೆ ಕುಮಾರಸ್ವಾಮಿ ಸಹ ಅಧಿಕಾರಿಗಳ ಪರವಾಗಿಯೇ ಮಾತನಾಡುವುದರಿಂದ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಹುಚ್ಚಾಸ್ಪತ್ರೆಯಾಗಿದೆ.

ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿ 4 ವರ್ಷ ಕಳೆದಿದೆ, ಈ ಆಸ್ಪತ್ರೆಯ ವಿಚಾರವಾಗಿ ಹಲವಾರು ದೂರುಗಳು ಬಂದಿವೆ. ಆದರೆ ಇದ್ಯಾವುದರ ಬಗ್ಗೆಯೂ ಸಹ ಅವರು ಕ್ರಮವಹಿಸಿಲ್ಲ. ಬದಲಾಗಿ ಆಡಳಿತ ವರ್ಗದ ಅಧಿಕಾರಿಗಳನ್ನ ಸಮರ್ಥಿಸಿಕೊಳ್ಳುವ ಮೂಲಕ ಅಧಿಕಾರಿಗಳಿಗೆ ಬೆಂಬಲ ನೀಡ್ತಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಸಿಲಿಂಡರ್ ಕಳ್ಳತನ ನಡೆದಿತ್ತು‌ :

ವಿಶ್ವದಲ್ಲೇ ಕೊರೋನಾ ಅಬ್ಬರ ಹೆಚ್ಚಾಗಿದ್ದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದರು.‌ ಆದರೆ ಇದೇ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಕಳ್ಳತನ ಸಹ ನಡೆಯಿತು. ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿ, ಒಂದಿಬ್ಬರನ್ನ ಬಂಧಿಸಿ ವಿಚಾರಣೆ ಸಹ ನಡೆಸಿದ್ದರು.

ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್! ಆರಂಭವಾಗಲಿವೆ Namma Clinic ಆಸ್ಪತ್ರೆಗಳು

ಆದರೆ ಈ ಪ್ರಕರಣದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿಜಯನರಸಿಂಹರವರ ಲೋಪ ಎದ್ದು ಕಾಣುತ್ತಿತ್ತು. ಈ ಪ್ರಕರಣದಲ್ಲಿ ವಿಜಯನರಸಿಂಹರವರ ಬೇಜಾಬ್ದಾರಿತನ ಎದ್ದು ಕಾಣ್ತಿತ್ತು. ಆದರೆ ಆಗಲೂ ಸಹ ಕುಮಾರಸ್ವಾಮಿ ಯಾವ ಕ್ರಮವನ್ನು ವಹಿಸಲಿಲ್ಲ.

ರೋಗಿಗಳಿಗೆ ಚಿಕಿತ್ಸೆ ನೀಡದೇ ವೈದ್ಯರ ಕಳ್ಳಾಟ, ನ್ಯೂಸ್ 18 ವರದಿ :

ಇನ್ನು ಕಳೆದ ಎರಡ್ಮೂರು ತಿಂಗಳುಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಸಾಲುಸಾಲು ರೋಗಿಗಳು ಚಿಕಿತ್ಸೆಗೆ ಬಂದಿದ್ದರೂ ಸಹ, ಅವರನ್ನ ನೋಡಲು ಒಬ್ಬ ವೈದ್ಯರೂ ಇಲ್ಲದೇ ಕಳ್ಳಾಟ ಆಡುತ್ತಿದ್ದ ವಿಚಾರವಾಗಿ ನ್ಯೂಸ್ 18 ಕನ್ನಡ ಸವಿಸ್ತಾರವಾಗಿ ವರದಿ ಪ್ರಸಾರ ಮಾಡಿತ್ತು. ಸ್ವತಃ ಆರೋಗ್ಯ ಸಚಿವರಾದ ಸುಧಾಕರ್ ರವರ ಕಚೇರಿಯಿಂದಲೇ ವಿಜಯನರಸಿಂಹಗೆ ಕರೆ ಬಂದು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆಬಂದಿತ್ತು.

ಇದನ್ನೂ ಓದಿ: Gadag: ಹಾಡಹಗಲೇ ಪತ್ನಿ ಮೇಲೆ ಡೆಡ್ಲಿ ಅಟ್ಯಾಕ್, 23 ಬಾರಿ ಮನಸೋ ಇಚ್ಚೆ ಮಚ್ಚಿನಿಂದ ಇರಿದು ಹಲ್ಲೆ

ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಸೇರಿ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿಯೂ ಸಹ ಕುಮಾರಸ್ವಾಮಿ ಅಧಿಕಾರಿಗಳ ಪರವಾಗಿ ಮಾತನಾಡಿದ್ದರು. ಅವರ ವಿರುದ್ಧ ಸುದ್ದಿ ಮಾಡಿದರೆ ಅವರ ಪ್ರೋತ್ಸಾಹಕ್ಕೆ ಧಕ್ಕೆಯಾಗಲಿದೆ ಎಂದು ಸಮರ್ಥಿಸಿಕೊಂಡರು. ಆದರೆ ಈ ಆಸ್ಪತ್ರೆಯ ವಿಚಾರವಾಗಿ ಇಡೀ ಚನ್ನಪಟ್ಟಣ ತಾಲೂಕಿನಲ್ಲಿ ಭಾರೀ ಚರ್ಚೆಯಾಗ್ತಿದೆ.
Published by:Divya D
First published: