Belagavi: ಗೊಬ್ಬರ ಕದಿಯೋಕೆ ಮಾಸ್ಟರ್ ಪ್ಲಾನ್! ಆದರೂ ಸಿಕ್ಕಿಬಿದ್ರು

ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಬರುತ್ತಿರುವ ಮಾಹಿತಿ ತಿಳಿದಿದ್ದ  ಸಾಗರ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಪಠಾತ್ ಹಾಗೂ ಪಂಡಿತ ಕಾಳಪ್ಪ ರಸಗೊಬ್ಬರ ಕಳ್ಳತನಕ್ಕೆ ಹೊಂಚು ಹಾಕಿದ್ರು.

ರಸಗೊಬ್ಬರ ಕಳ್ಳತನ

ರಸಗೊಬ್ಬರ ಕಳ್ಳತನ

  • Share this:
ಬೆಳಗಾವಿ(ಜೂ.4): ರಸಗೊಬ್ಬರ (Fertilizer) ಟ್ರಾನ್ಸ್​ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಏಕಾಏಕಿ ಹಣ ಗಳಿಸುವ ಉದ್ದೇಶದಿಂದ ಅದೊಂದು ಖತರ್ನಾಕ್ ಐಡಿಯಾ ಮಾಡಿದ್ದಾರೆ. ಅನ್ನ ಹಾಕಿದ ಕಂಪನಿಗೆ ಪಂಗನಾಮ ಹಾಕಲು ಹೊರಟವರು ಬೆಳಗಾವಿ (Belagavi) ಹಿಂಡಲಗಾ ಜೈಲು (Jail) ಸೇರಿದ್ದಾರೆ. ನಿತ್ಯ ರೈಲಿನಲ್ಲಿ ಲಕ್ಷಾಂತರ ಟನ್ ಸರಕು ಸಾಗಾಟ ನಡೆಯುತ್ತದೆ.  ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ರೈಲಿನಲ್ಲಿ ಬರುವ ಸರಕು ಸಾಗಣೆಗಳ ಶೇಖರಣೆಗೆ ಗಾಗಿ ಹತ್ತಾರು ಗೋದಾಮುಗಳು ಬೆಳಗಾವಿ ಸಮೀಪದ ದೇಸೂರು ಗ್ರಾಮದಲ್ಲಿವೆ. ಕಳೆದ ಮೇ 17 ನೇ ತಾರೀಖು ರೈಲಿನಲ್ಲಿ (Train) ಬಂದ ಸುಮಾರು 72,609 ಚೀಲ ಡಿಎಪಿ ರಸಗೊಬ್ಬರವನ್ನ ದೇಸೂರನಲ್ಲಿರುವ ಸಾಗರ ಟ್ರಾನ್ಸ್ ಪೋರ್ಟ್ ನಲ್ಲಿ ಶೇಖರಿಸಿ ಇಡಲಾಗಿತ್ತು. 

ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಬರುತ್ತಿರುವ ಮಾಹಿತಿ ತಿಳಿದಿದ್ದ  ಸಾಗರ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಪಠಾತ್ ಹಾಗೂ ಪಂಡಿತ ಕಾಳಪ್ಪ ರಸಗೊಬ್ಬರ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಪ್ಲಾನ್ ಪ್ರಕಾರ ಸಾಗರ ಟ್ರಾನ್ಸ್ ಪೋರ್ಟ್ ಚಾಲಕನ ಸಹಾಯ ಪಡೆದು ಮತ್ತೊಂದು ಲಾರಿ ತರಿಸಿಕೊಂಡು ಬರೋಬ್ಬರಿ 900 ಡಿಎಪಿ ರಸಗೊಬ್ಬರ ಚೀಲಗಳನ್ನು ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಬಳಿಕ ರಸಗೊಬ್ಬರವನ್ನ ಬೇರೆ ಬೇರೆ ಸ್ಥಳಗಳಿಗೆ ಸಾಗಿಸುವಾಗ 900 ಚೀಲಗಳ ವ್ಯತ್ಯಾಸ  ಕಂಡುಬಂದಿದೆ. ತಕ್ಷಣ ಅಲರ್ಟ್ ಆದ ಸಾಗರ ಟ್ರಾನ್ಸ್ ಪೋರ್ಟ್ ಮ್ಯಾನೇಜರ್ ಶಿವಾಜಿ, ಮೇ 23 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದರು.

ತಪ್ಪೊಪ್ಪಿಕೊಂಡ ಆರೋಪಿ

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ ಹಂಡಾ, ಸಾಗರ ಟ್ರಾನ್ಸ್ ಪೋರ್ಟ್ ಕೆಲಸಗಾರರ ಮೇಲೆಯೇ ನಿಗಾವಹಿಸಿದ್ರು. ಈ ವೇಳೆ ನಾಗರಾಜ್ ಪಠಾತ ಹಾಗೂ ಪಂಡಿತ ಕಾಳಪ್ಪ ವರ್ತನೆಯಿಂದ ಅನುಮಾನಗೊಂಡ ಪೋಲಿಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಿಸಿದಾಗ ರಸಗೊಬ್ಬರ ಕದ್ದಿದು ನಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: HDK ಬಾಡಿಗಾರ್ಡ್​ನಿಂದ‌ PSI ಅಭ್ಯರ್ಥಿ ಮೇಲೆ ಹಲ್ಲೆ! ಮಾಜಿ ಸಿಎಂ ಕಾರಿಗೆ ಮುತ್ತಿಗೆ ಯತ್ನ?

ಹಣ ಮಾಡುವ ದುರಾಸೆಯಿಂದ ಕಳ್ಳತನ

ಕಳ್ಳತನದ ಮಾಸ್ಟರ್ ಮೈಂಡ್ ಗಳಾದ ನಾಗರಾಜ್ ಪಠಾತ ಹಾಗೂ ಪಂಡಿತ ಕಾಳಪ್ಪ ಹಣ ಮಾಡುವ ದುರಾಸೆಯಿಂದ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.  ಈ ಇಬ್ಬರು ಪ್ರಮುಖ ಆರೋಪಿಗಳಿಗೆ ಲಾರಿ ಚಾಲಕರಾಗಿ ಸಹಕರಿಸಿದ ಲಾರಿ ಚಾಲಕರಾದ ವಸೀಂ ಮಕಾಂದಾರ, ಮಂಜುನಾಥ ಹಮ್ಮನವರ, ಸನದಿ ಎಂಬಾತರನ್ನು ಪೋಲಿಸರು ಬಂಧಿಸಿದ್ದಾರೆ.

ಇದನ್ನೂ ಓದಿ: UPSCಯಲ್ಲಿ ರಾಜ್ಯದಿಂದ ಏಕೈಕ ಮುಸ್ಲಿಂ ಅಭ್ಯರ್ಥಿ ಉತ್ತೀರ್ಣ: ಹುಬ್ಬಳ್ಳಿಗೆ ಆಗಮಿಸಿದ ತಹಸೀನ್ ಭಾನುಗೆ ಭವ್ಯ ಸ್ವಾಗತ

ಬಂಧಿತರಿಂದ 10 ಲಕ್ಷ ಮೌಲ್ಯದ 810 ಚೀಲ ರಸಗೊಬ್ಬರವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.  72 ಸಾವಿರ ಚೀಲಗಳಲ್ಲಿ 900 ಚೀಲ ಕದ್ದರೆ ಯಾರಿಗೂ ಗೊತ್ತಾಗಲ್ಲ ಎಂದು ಅನ್ನ ಹಾಕಿದ್ದ ಕಂಪನಿಗೆ ಕನ್ನ ಹಾಕಿದ ಖದೀಮರು ಅಂದರ ಆಗಿದ್ದು, ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
Published by:Divya D
First published: