Husband Suicide: ಪ್ರಿಯಕರನ ಜೊತೆ ಪತ್ನಿ ಚೆಲ್ಲಾಟ; ಕಣ್ಣಾರೆ ಕಂಡು ನೇಣಿಗೆ ಶರಣಾದ ಗಂಡ

ಗಂಡನಿಗೆ ಸಾಲವಿತ್ತು ಹೀಗಾಗಿ ನೇಣು ಹಾಕಿಕೊಂಡಿದ್ದಾನೆ ಎಂದು ಕಥೆ ಕಟ್ಟಿದ್ದ ಪತ್ನಿ, ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಗಿದೆ. ಧನಗುಂಡಯ್ಯ ಸಾವಿಗೆ ಆತನ ಪತ್ನಿಯ ಅನೈತಿಕ ಸಂಬಂಧವೇ ಕಾರಣವಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ(ಜು.25): ಮದುವೆಯಾಗಿ ಮುದ್ದಾದ ಎರಡು ಮಕ್ಕಳಿದ್ದರು.  ಆಕೆಗೆ ಬೇರೆ ಊರಿನಲ್ಲಿರುವ ಪ್ರಿಯಕರ ಮೇಲೆ ಆಸೆ, ಮೊದಲು ಗಂಡನ ಕಣ್ಣು ತಪ್ಪಿಸಿ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ (Illegal Affair) ಹೊಂದುತ್ತಿದ್ದಳು. ಈ ಬಗ್ಗೆ ಗಂಡ ಸಾಕಷ್ಟು ಬಾರಿ ಬುದ್ದಿ ಹೇಳಿದ್ರು  ಪ್ರಯೋಜನವಾಗಲಿಲ್ಲ. ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿರುವುದಕ್ಕೆ ಆಗಾಗ ಜಗಳು ಕೂಡ ಮಾಡುತ್ತಿದ್ದಳು. ಮೊನ್ನೆ ಹೆಂಡತಿಯೊಂದಿಗೆ ಆಕೆ ಪ್ರಿಯಕರ (Lover) ಇರುವುದನ್ನು ನೋಡಿ ಬೇಸತ್ತು ಗಂಡ (Husband) ನೇಣಿಗೆ ಶರಣಾಗಿದ್ದಾನೆ.

ಪೊಲೀಸ್​ ತನಿಖೆ ವೇಳೆ ಹೊರ ಬಂತು ಸತ್ಯ

ಮೊದಲು ಹೆಂಡತಿ ನನ್ನ ಗಂಡನಿಗೆ 1 ಲಕ್ಷ ಸಾಲವಿತ್ತು. ಇದೇ ಕಾರಣಕ್ಕೆ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ತನಿಖೆ ಆರಂಭಿಸಿದಾಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜಾಲಿ ಗಿಡಕ್ಕೆ ಬೆಳ್ಳಂ ಬೆಳಗ್ಗೆ ಶವವೊಂದು ನೇತಾಡ್ತಿತ್ತು. ಶವ ನೋಡಿದವರೆಲ್ಲಾ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಅಂದುಕೊಂಡಿದ್ರು. ಇದೇ ಮಾತನ್ನ ಆತನ ಪತ್ನಿಯೂ ಊರವರಿಗೆ ಹೇಳಿದ್ರು. ಮೊದ ಮೊದಲು ರೈತ ಆತ್ಮಹತ್ಯೆ ಅಂತ ಸುದ್ದಿಯಾಗಿದ್ದು ಆತನ ಸಾವಿಗೆ ಸಂಜೆ ಹೊತ್ತಿಗೆ ಟ್ವಿಸ್ಟ್ ಸಿಕ್ಕಿತ್ತು‌. ಆತ ನೇಣು ಬಿಗಿದುಕೊಳ್ಳಲು ಆತನ ಪತ್ನಿಯ ಅನೈತಿಕ ಸಂಬಂಧವೇ ಕಾರಣ ಅನ್ನೋದ ಬಟಾ ಬಯಲಾಗಿದೆ.

ನಿನ್ನೆ ನೇಣು ಹಾಕಿಕೊಂಡೋ ವ್ಯಕ್ತಿಯ ಹೆಸರು ಧನಗುಂಡಯ್ಯ. ವಯಸ್ಸು 40. ಕೊಪ್ಪಳ ತಾಲೂಕಿನ ಚಿಕ್ಕ ಸಿಂಧೋಗಿ ನಿವಾಸಿ. ಮೊದಲೆಲ್ಲ ಊರಲ್ಲಿ ರೈತ ಆತ್ಮಹತ್ಯೆ ಅಂತಾ ಧನಗುಂಡಯ್ಯ ಸಾವಿನ ಸುದ್ದಿ ಹರಡಿತ್ತು. ಧನಗುಂಡಯ್ಯ ಸಾಲ ಮಾಡಿಕೊಂಡ ಸಾಲಬಾಧೆಯಿಂದ ತತ್ತರಿಸಿ ನೇಣು ಹಾಕಿಕೊಂಡಿದ್ದ ಎಂದು ನಂಬಿಸಲಾಗಿತ್ತು. ಆತನ ಪತ್ನಿ ಗವಿಸಿದ್ದಮ್ಮ ಸಾಲಬಾಧೆಯಿಂದ ನನ್ನ ಗಂಡ ಸಾವನ್ನಪ್ಪಿದ್ದಾನೆ ಎಂದು ಅಳವಂಡಿ ಪೊಲೀಸರಿಗೆ ದೂರು ನೀಡಿದ್ದಳು.

ಇದನ್ನೂ ಓದಿ: Suspected Terrorist: ಉಗ್ರರ ಅಡಗು ತಾಣವಾಗಿದ್ಯಾ ಬೆಂಗಳೂರು? ಮತ್ತೊಬ್ಬ ಶಂಕಿತ ಉಗ್ರನ ಬಂಧನ

ವೀರಯ್ಯ ಎಂಬಾತನ ಜೊತೆ ಅನೈತಿಕ ಸಂಬಂಧ

ಆದ್ರೆ ಸಂಜೆ ಧನಗುಂಡಯ್ಯ ಸಾವಿಗೆ ಅಸಲಿ ಕಾರಣ ಬಯಲಾಗಿದೆ. ಧನಗುಂಡಯ್ಯ ಆತನ ಪತ್ನಿಯ ಅನೈತಿಕ ಸಂಬಂಧವೇ ಕಾರಣವಾಗಿದೆ. ಧನಗುಂಡಯ್ಯ ಪತ್ನಿ ಗವಿ ಸಿದ್ದಮ್ಮ, ಕಳೆದ ಐದಾರು ವರ್ಷಗಳಿಂದ ಬೇಳೂರ ಗ್ರಾಮದ ವೀರಯ್ಯ ಜೊತೆ ಅನೈತಿಕ ಸಂಬಂಧ ಹೊಂದಿದ್ಲು.ಈ ವಿಷಯ ಗಂಡ ಧನಗುಂಡಯ್ಯ ನಿಗೆ ಗೊತ್ತಾಗಿತ್ತು.ವೀರಯ್ಯ ಮನೆಗೆ ಹೋಗೋದು ಬರೋದು ಮಾಡ್ತಿದ್ದ. ಎಷ್ಟ ಹೇಳಿದ್ರು,ಹೆಂಡತಿ ಗವಿ ಸಿದ್ದಮ್ಮ ಗಂಡನ ಮಾತು ಕೇಳಿರಲಿಲ್ಲ.ಗಂಡನಿಗೆ ನಿತ್ಯ ಕಿರುಕುಳ ಕೊಡೋದು ಹೊಡೆಯೋದು ಮಾಡ್ತಿದ್ಲಂತೆ.

ಗವಿ ಸಿದ್ದಮ್ಮ


ಗಂಡ- ಹೆಂಡತಿ ನಡುವೆ ಜಗಳ

ಕಳೆದ ಎರಡು ದಿನಗಳ ಹಿಂದೆ ವೀರಯ್ಯ ಮನೆಗೆ ಬಂದಿದ್ದಾನೆ‌. ಇದನ್ನು ನೋಡಿದ ಧನಗುಂಡಯ್ಯ ಸಿಟ್ಟಾಗಿದ್ದಾನೆ. ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಆಗ ಹೆಂಡತಿ ಗವಿ ಸಿದ್ದಮ್ಮ ನೀ ಇರಲಬೇಡ ಸಾಯಿ ಎಂದಿದ್ಲಂತೆ.ಅಲ್ದೆ ವೀರಯ್ಯ ಕೂಡಾ ಧನಗುಂಡಯ್ಯನ್ನ ಬೈದಿದ್ಲಂತೆ,ಹೀಗಾಗಿ ಧನಗುಂಡಯ್ಯ ಮಾನಸಿಕವಾಗಿ ನೊಂದು ಜಾಲಿ ಗಿಡಕ್ಕೆ ನೇತು ಹಾಕಿಕೊಂಡಿದ್ದಾನೆ. ಹೆಂಡತಿ ಗವಿ ಸಿದ್ದಮ್ಮ ಇದನ್ನು ರೈತ ಆತ್ಮಹತ್ಯೆ ಎಂದು ಬಿಂಬಿಸಿದ್ಲು. ಶದ್ರೆ ಧನಗುಂಡಯ್ಯ ಸಹೋದರ ತಮ್ಮನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ಅಸಲಿ ಕಹಾನಿ ಬಯಲಾಗಿದೆ.

ಇದನ್ನೂ ಓದಿ: MonkeyPox: ದೇಶದಲ್ಲಿ ಮಂಕಿಪಾಕ್ಸ್ ಕೇಸ್​ಗಳು ಪತ್ತೆ; ರೋಗ ತಡೆಗೆ ಕರ್ನಾಟಕದಲ್ಲಿ ಕಟ್ಟೆಚ್ಚರ- ಸುಧಾಕರ್

ಧನಗುಂಡಯ್ಯನ ಹೆಂಡತಿ ಗವಿಸಿದ್ದಮ್ಮ ಹಾಗೂ ವೀರಯ್ಯನನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. ಧನಗುಂಡಯ್ಯ ಮೂಲತಃ ಕೊಪ್ಪಳ ತಾಲೂಕಿನ ಚಿಕ್ಕ ಸಿಂಧೋಗಿ ನಿವಾಸಿ. ಊರಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದ. ಇಬ್ಬರು ಮಕ್ಕಳು ಹೆಂಡತಿ ಸಣ್ಣ ಮನೆಯಲ್ಲಿ ವಾಸ ಮಾಡ್ತಿದ್ರು. ಆದ್ರೆ ಹೆಂಡತಿ ಹಾದಿ ಬಿಟ್ಟು ಬಹಳ ವರ್ಷಗಳೇ ಕಳೆದಿತ್ತಂತೆ. ಪಕ್ಕದ ಊರಿನ ವೀರಯ್ಯ ಜೊತೆ ಅನೈತಿಕ ಸಂಬಂದ ಹೊಂದಿದ್ದು, ಮೊದಲು ಗುಟ್ಟಾಗಿತ್ತು.ನಂತ್ರ ರಟ್ಟಾಗಿ, ವೀರಯ್ಯ ಮನೆಗೆ ಬರೋಕೆ ಶುರು ಮಾಡಿದ ಗಂಡ ಇಲ್ಲದಿರೋದನ್ನ ನೋಡಿ ವೀರಯ್ಯ ಆಗಾಗ ಬಂದು ಹೋಗ್ತಿದ್ದ.

ಇದು ಅಕ್ಕ ಪಕ್ಕದ ಮನೆಯವರಿಗೂ ಕಿರಿಕಿರಿಯಾಗಿತ್ತು.ಈ ಬಗ್ಗೆ ಗ್ರಾಮದವರು ತಿಳಿ ಹೇಳಿದ್ರು. ಧನಗುಂಡಯ್ಯ ಹಿರಿಯನ್ನ ಕರೆಸಿ ಹೆಂಡತಿಗೆ ಬುದ್ದಿ ಹೇಳಿದ್ರು, ಗವಿ ಸಿದ್ದಮ್ಮ ತನ್ನ ಚಾಳಿ ಬಿಟ್ಟಿರಲಿಲ್ಲ. ಕೆಲ ಸಲ ಇಬ್ಬರು ಕೂಡಿ ಧನಗುಂಡಯ್ಯನ ಮೇಲೆ ಹಲ್ಲೆ ಮಾಡಿದ್ದಾರಂತೆ. ಗಂಡನಿಗೆ ನೀ ಮನೆ ಬಿಟ್ಟು ಹೋಗು ಅಂತ ಹೆಂಡತಿ ಪೀಡಿಸುತ್ತಿದ್ಲಂತೆ. ಹೀಗಿದ್ದಾಗ ಕಳೆದ ಎರಡು ದಿನಗಳ ಹಿಂದೆ ವೀರಯ್ಯನ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಗಲಾಟೆ ಮಾಡಿರೋದೆ ಧನಗುಂಡಯ್ಯ ಸಾವಿಗೆ ಕಾರಣವಾಗಿದೆ. ಗವಿ ಸಿದ್ದಮ್ಮ ಹಾಗೂ ವೀರಯ್ಯನನ್ನ ವಶಕ್ಕೆ ಪಡೆದ ವಿಚಾರಣೆ ಮಾಡಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.
Published by:Pavana HS
First published: