Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:February 14, 2020, 6:01 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಟ್ರಂಪ್ ಭಾರತದ ಭೇಟಿ, ವ್ಯಾಪಾರ ವೃದ್ಧಿಗೆ ಮಾತುಕತೆ; ದೇಶದ ಡೈರಿ ಉತ್ಪನ್ನಗಳಿಗೆ ತೆರೆಯಲಿದೆಯೇ ಅಮೆರಿಕ ಬಾಗಿಲು?

ಈ ತಿಂಗಳಾಂತ್ಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಎರಡು ದಿನದ ಪ್ರವಾಸದ ನಿಮಿತ್ತ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಭಾರತದ ಮಾರುಕಟ್ಟೆಯನ್ನು ಅಮೆರಿಕಾಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಅಮೆರಿಕಾಕ್ಕೆ ಕೋಳಿ ಮಾಂಸ ಮತ್ತು ಹಾಲು ಉತ್ಪನ್ನಗಳ ರಫ್ತು ಕುರಿತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಪರಿಚಿತ ಮೂಲಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದೆ.

2.ವರ್ಷವೇ ಕಾದಿದ್ದೀರಿ, ಇನ್ನೂ 15 ದಿನದಲ್ಲಿ ಏನೂ ಆಗಲ್ಲ: ಓಮರ್​ ಅಬ್ದುಲ್ಲಾ ಬಂಧನ ಪ್ರಶ್ನಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್​​

ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಗೃಹಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಉತ್ತರಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅದರ ಜತೆಜತೆಗೆ, ಅರ್ಜಿ ಸಲ್ಲಿಸಲು ಇಷ್ಟು ಸಮಯ ಕಳೆದಿರುವಾಗ ಇನ್ನೂ 15 ದಿನ ಕಾಯುವುದರಲ್ಲಿ ಸಮಸ್ಯೆ ಏನು ಎಂದು ಅರ್ಜಿ ಸಲ್ಲಿಸಿದ್ದ ಓಮರ್​ ಅಬ್ದುಲ್ಲಾ ತಂಗಿ ಸಾರಾ ಅಬ್ದುಲ್ಲಾ ಪೈಲಟ್​ಗೆ ಕೊರ್ಟ್​ ಪ್ರಶ್ನಿಸಿದೆ.

3.ಫೆ.16ಕ್ಕೆ ದೆಹಲಿ ಸಿಎಂ ಆಗಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ; ಪ್ರಧಾನಿ ಮೋದಿಗೆ ಆಹ್ವಾನ

ಸತತ ಮೂರನೇ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್​ ಇದೇ ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ.

4.ಅಂಟಾರ್ಟಿಕಾದಲ್ಲಿ ತಾಪಮಾನ ಏರಿಕೆ, ಇರಾಕ್ ಮೇಲೆ ಮತ್ತೊಂದು ಕ್ಷಿಪಣಿ ದಾಳಿಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ಸಾಕಷ್ಟು ಬೆಳವಣಿಗೆ ನಡೆಯುತ್ತಿರುತ್ತವೆ. ಈ ಪೈಕಿ ಇಂದು ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಪ್ರಮುಖ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ನಾವು ಮಾಹಿತಿ ನೀಡುತ್ತಿದ್ದೇವೆ.

5.ಕೋರ್ಟ್​ ಆದೇಶಕ್ಕೆ ಒಂದು ಬೆಲೆ ಬೇಡವೇ?: ಟಿಲಿಕಾಂ ಕಂಪನಿಗಳ ಮೇಲೆ ಸುಪ್ರೀಂ ಕೆಂಡಾಮಂಡಲ

ನ್ಯಾಯಾಲಯ ಆದೇಶ ಮಾಡಿದ್ದರೂ ಒಂದೂ ರೂಪಾಯಿ ದಂಡ ಕಟ್ಟದೆ ನಿರುಮ್ಮಳವಾಗಿರುವ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತಾದರೂ ಕಿಮ್ಮತ್ತು ಕೊಡದೆ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ವ್ಯಗ್ರಗೊಂಡಿರುವ ಸುಪ್ರೀಂ ಕೋರ್ಟ್ ಈ ಟೆಲಿಕಾಂ ಕಂಪನಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದೆ. ವೊಡಾಫೋನ್ ಐಡಿಯಾ, ಭಾರ್ತಿ ಏರ್​ಟೆಲ್ ಮೊದಲಾದ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಸುಮಾರು ದೊಡ್ಡ ಮೊತ್ತದ ಎಜಿಆರ್ ಹಣವನ್ನು ಬಾಕಿ ಉಳಿಸಿಕೊಂಡಿರುವ ಪ್ರಕರಣ ಇದಾಗಿದೆ.

6.ವಿಧಾನಮಂಡಲ ಅಧಿವೇಶನ ದಿನಾಂಕ ಘೋಷಿಸಿದ ಸ್ಪೀಕರ್​; ಮಾರ್ಚ್​5ಕ್ಕೆ ರಾಜ್ಯ ಬಜೆಟ್​ ಮಂಡಿಸಲಿರುವ ಬಿಎಸ್​ವೈ

ಚಳಿಗಾಲದಲ್ಲಿ ನಡೆಯಬೇಕಿದ್ದ ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ "ಫೆಬ್ರವರಿ 17 ರಿಂದ ಮಾರ್ಚ್ 31ರ ವರೆಗೆ ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ, ಮಾರ್ಚ್​.05 ರಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

7.ಬೀದರ್ ಪ್ರಕರಣ - ಅವಾಚ್ಯ ಶಬ್ದ ಬಳಸಿದ್ದು ಮೋದಿಗಲ್ಲ - ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದ್ರೆ ದೇಶದ್ರೋಹವಾಗಲ್ಲ; ಸಿದ್ಧರಾಮಯ್ಯ

ಶಾಹೀನ್ ಶಾಲೆಯಲ್ಲಿ ಮಕ್ಕಳು ಅವಾಚ್ಯ ಶಬ್ದ ಬಳಸಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗಲ್ಲ ದಾಖಲೆ ಕೇಳಲು ಬರುವವರಿಗೆ, ನಾಟಕದಲ್ಲಿ ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದರೆ ಅದು ದೇಶ ದ್ರೋಹವಾಗಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

8.ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರ್ಯಕ್ಕೆ ಗೈರಾದ ಹೆಂಡತಿ ಕಲಾವತಿ

ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಮದ್ದೂರಿನ ಯೋಧ ಗುರು ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಪುಲ್ವಾಮಾ ಕರಾಳ ದಿನದ ಜೊತೆ ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರಣ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಯೋಧನ ಪತ್ನಿ ಕಲಾವತಿಯ ಗೈರು ಎದ್ದು ಕಾಣುತ್ತಿತ್ತು.

9.ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆಯಾ ರಾಬರ್ಟ್? ಅಭಿಮಾನಿಗಳ ಪ್ರಶ್ನೆಗೆ ತರುಣ್​ ಸುಧೀರ್​ ಕೊಟ್ರು ಉತ್ತರ!

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಭಾರೀ ಸದ್ದು ಸುದ್ದಿ ಮಾಡುತ್ತಿದೆ. ಏಪ್ರಿಲ್​ ತಿಂಗಳಿನಲ್ಲಿ ಈ ಸಿನಿಮಾ  ತೆರೆಗೆ ಬರಲಿದೆ. ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್​ ಹುಟ್ಟು ಹಬ್ಬದ ಪ್ರಯುಕ್ತ ಫೆ.16 ರಂದು ಈ ಸಿನಿಮಾದ ಟ್ರೈಲರ್​ ಅನ್ನು ಚಿತ್ರತಂಡ ರಿಲೀಸ್​ ಮಾಡಲಿದೆ. ಈ ಮಧ್ಯೆ ದರ್ಶನ್​ ಅಭಿಮಾನಿಗಳಲ್ಲಿ ರಾಬರ್ಟ್​ ಸಿನಿಮಾ ಪ್ಯಾನ್​ ಇಂಡಿಯಾ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ನಿರ್ದೇಶಕ ತರುಣ್​ ಸುಧೀರ್​ ಉತ್ತರ ನೀಡಿದ್ದಾರೆ.

10.ಬರೋಡ 296 ರನ್​ಗೆ ಆಲೌಟ್; ಕರ್ನಾಟಕಕ್ಕೆ 149 ರನ್ಸ್​ ಟಾರ್ಗೆಟ್; ಗೆಲುವಿನತ್ತ ನಾಯರ್ ಪಡೆ!

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬರೋಡ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಗೆಲುವಿನತ್ತ ದಾಪುಗಾಲಿಡುತ್ತಿದೆ. ಬರೋಡ ತನ್ನ 2ನೇ ಇನ್ನಿಂಗ್ಸ್​ನಲ್ಲಿ 296 ರನ್​ಗೆ ಆಲೌಟ್ ಆಗಿದ್ದು, ರಾಜ್ಯ ತಂಡಕ್ಕೆ ಗೆಲ್ಲಲು 149 ರನ್​ಗಳ ಟಾರ್ಗೆಟ್ ನೀಡಿದೆ.

 
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ