Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ , ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದ ನೀವು ಓದಲೇಬೇಕಾದ ಸುದ್ದಿಗಳು ಇವು

Seema.R | news18
Updated:February 11, 2019, 6:04 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Seema.R | news18
Updated: February 11, 2019, 6:04 PM IST
1.  ಸದನದಲ್ಲಿ ಸದ್ದು ಮಾಡಿದ ಆಡಿಯೋ; ಎಸ್​ಐಟಿ ತನಿಖೆಗೆ ಪ್ರಕರಣ:

ಆಪರೇಷನ್​ ಕಮಲ ಕುರಿತು ಬಿಎಸ್​ ಯಡಿಯೂರಪ್ಪ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಇಂದು ವಿಧಾನಸಭಾ ಕಲಾಪದಲ್ಲಿ ಭಾರೀ ಸದ್ದು ಮಾಡಿತ್ತು. ಸ್ಪೀಕರ್​ ಅವರನ್ನು ಕೂಡ 50 ಕೋಟಿಗೆ ಡೀಲ್​ ಮಾಡಲಾಗಿದೆ ಎಂಬ ಆರೋಪದಿಂದ ಮನನೊಂದ ಸ್ಪೀಕರ್​ ರಮೇಶ್​ ಕುಮಾರ್​ ಸದನದಲ್ಲಿ ವಿಷಾದ ವ್ಯಕ್ತಪಡಿಸಿದರು. ಬಾಡಿಗೆ ಮನೆಯಲ್ಲಿ ಸಾಮಾನ್ಯನಂತೆ ಜೀವಿಸುವ ನಾನು ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿ ಇಡಲಿ ಎಂದು ಪ್ರಶ್ನಿಸಿದರು. ಸ್ಪೀಕರ್​ ಘನತೆಗೆ ಚ್ಯುತಿ ಬರುವ ಹಾಗೇ ಮಾತನಾಡಿದ ಈ ಆಡಿಯೋ ಕುರಿತು ತನಿಖೆ ನಡೆಯಬೇಕು ಎಂದು ಸಿಎಂಗೆ ಮನವಿ ಮಾಡಿದರು. ಮುಖ್ಯಮಂತ್ರಿಯವರೇ ಮಾಡಿರುವ ಈ ಆರೋಪದಲ್ಲಿ ತನಿಖೆಗೆ ಮುಂದಾಗುವುದಕ್ಕೆ ನಮಗೆ ಆಕ್ಷೇಪ ವಿದೆ ಎಂದು ಬಿಜೆಪಿ ನಾಯಕರು ತಿಳಿಸಿದರು. ಆಡಳಿತ ಪಕ್ಷದ ಶಾಸಕರು ಈ ಕುರಿತು ತನಿಖೆ ನಡೆಯಲೇಬೇಕು ಎಂದು ಪಟ್ಟು ಹಿಡಿದರು.

2. ಕಾಂಗ್ರೆಸ್​ ರೆಬೆಲ್​ ಶಾಸಕರ ಅನರ್ಹತೆಗೆ ಸ್ಪೀಕರ್​ಗೆ ಮನವಿ

ಕಾಂಗ್ರೆಸ್​ ಶಾಸಕಾಂಗ ಸಭೆಗೆ ಹಾಜರಾಗುವಂತೆ ವಿಪ್​ ಜಾರಿ ಮಾಡಿದ್ದರು ಅದನ್ನು ಉಲ್ಲಂಘಿಸಿದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಳ್ಳಿ, ಉಮೇಶ್​ ಜಾಧವ್​ ಹಾಗೂ ಬಿ ನಾಗೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್​ ನಾಯಕರು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಬಜೆಟ್​ ಅಧಿವೇಶನ ಹಾಗೂ ಸಭೆಗೆ ಗೈರಾದ ಶಾಸಕರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದು ಶಾಸಕರ ಮೇಲೆ ಕ್ರಮಕ್ಕೆ ಮುಂದಾಗುವಂತೆ 82 ಪುಟಗಳ ದೂರನ್ನು ಸ್ಪೀಕರ್​ಗೆ ಕಾಂಗ್ರೆಸ್​ ನಾಯಕರಾದ ರಮೇಶ್​ ಕುಮಾರ್​, ದಿನೇಶ್​ ಗುಂಡೂರಾವ್​, ಪರಮೇಶ್ವರ್​ ದೂರು ಸಲ್ಲಿಸಿದರು.

3. ಪ್ರಿಯಾಂಕ ಗಾಂಧಿ ಬೃಹತ್​ ಸಮಾವೇಶ

ಕಾಂಗ್ರೆಸ್​ ಸ್ಟಾರ್​ ಪ್ರಚಾರಕಿಯಾಗಿದ್ದ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಪೂರ್ವ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಪಾಳಯದಲ್ಲಿ ಸವಾಲಾಗಿದ್ದಾರೆ. ಪಕ್ಷದ ಜವಾಬ್ದಾರಿವಹಿಸಿಕೊಂಡ ಬಳಿಕ ಇಂದು ಮೊದಲ ಬಾರಿ ಅವರು ಉತ್ತರ ಪ್ರದೇಶಕ್ಕೆ ಆಗಮಿಸಿದ ಅವರು ಲಕ್ನೋದಲ್ಲಿ ರೋಡ್​ ಶೋ ನಡೆಸಿದರು. ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಸಾಥ್​ ನೀಡಿದರು.

4. ರಫೇಲ್​ ಲೂಟಿಗೆ ಕಾರಣ ಮೋದಿ

ರಫೇಲ್​ ಯುದ್ಧ ವಿಮಾನ ಹಗರಣದ ಮೂಲಕ ಲೂಟಿ ಮಾಡಲು ಬಾಗಿಲು ತೆರೆದವರು ಮೋದಿ ಎಂದು ಪ್ರಧಾನಿ ವಿರುದ್ಧ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು. ರಕ್ಷಾಣ ಒಪ್ಪಂದದ ಭಷ್ಟ್ರಾಚಾರ ನಿಗ್ರಹ ಷರತ್ತನ್ನು ಉಲ್ಲಂಘಿಸಿ ಮೋದಿ ಲೂಟಿ ನಡೆಸಿದ್ದಾರೆ. ಅವರು ಚೌಕಿದಾರ ಚೋರ ಎಂಬುದನ್ನು ಸಾಬೀತು ಮಾಡಿದರು ಎಂದು ಹರಿಹಾಯ್ದರು.

5. ಟ್ವೀಟರ್​ಗೆ ಪ್ರಿಯಾಂಕಾ ಗಾಂಧಿ

ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿರುವ ಪ್ರಿಯಾಂಕಾ ಗಾಂಧಿ ಜನರೊಟ್ಟಿಗಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಲು ಸಾಮಾಜಿಕ ಜಾಲತಾಣಕ್ಕೆ ಕೂಡ ಎಂಟ್ರಿ ನೀಡಿದ್ದಾರೆ. ಇಂದು ಮೊದಲ ಬಾರಿ ತಮ್ಮ ಟ್ವೀಟರ್​ ಅಕೌಂಟ್​ ತೆರೆದ ಅವರು ಒಂದೇ ದಿನಕ್ಕೆ 80 ಸಾವಿರ ಬೆಂಬಲಿಗರು ಅವರನ್ನು ಫಾಲೋ ಮಾಡುತ್ತಿದ್ದಾರೆ.

6.  ಪಾಕಿಸ್ತಾನದ ಪ್ರಧಾನಿಯಂತೆ ಮೋದಿ ವರ್ತನೆ

ಒಬ್ಬ ವ್ಯಕ್ತಿ ಪ್ರಧಾನಿಯಾಗಿ ಆಯ್ಕೆಯಾದಾಗ  ಅವರು ಒಂದು ಪಕ್ಷಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಪ್ರಧಾನಿಯಾಗುತ್ತಾರೆ. ಆದರೆ, ಬಿಜೆಪಿಯೇತರ ಪಕ್ಷಗಳೊಂದಿಗೆ ಮೋದಿ ವರ್ತಿಸುತ್ತಿರುವುದನ್ನು ಗಮನಿಸಿದರೆ, ಅವರು ಭಾರತಕ್ಕೆ ಅಲ್ಲ ಪಾಕಿಸ್ತಾನಕ್ಕೆ ಪ್ರಧಾನಿಯಂತೆ ಅನಿಸುತ್ತಿದೆ ಎಂದು ಅರವಿಂದ್​ ಕೇಜ್ರಿವಾಲ್​ ವಾಗ್ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಚಂದ್ರಬಾಬು ನಾಯ್ಡು ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ರಾಜ್ಯಗಳಿಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಹರಿಹಾಯ್ದರು.

7. ಲೋಕಸಭೆಯಲ್ಲಿಯೂ ಸದ್ದು ಮಾಡಿದ ಸಿಡಿ

ಆಪರೇಷನ್​ ಕಮಲದಲ್ಲಿ ಸ್ಪೀಕರ್​, ನ್ಯಾಯಾಧೀಶರನ್ನು ಡೀಲ್​ ಮಾಡಲಾಗಿದೆ. ಇದಕ್ಕೆ ಅಮಿತ್​ ಷಾ, ಪ್ರಧಾನಿ ಮೋದಿ ಅವರು ಸಹಕರಿಸಲಿದ್ದಾರೆ ಎಂಬ ಬಿಎಸ್​ ಯಡಿಯೂರಪ್ಪ ಅವರ ಆಡಿಯೋ ಲೋಕಸಭೆಯಲ್ಲಿಯೂ ಸದ್ದುಮಾಡಿತು. ಸಂಸತ್​ ಆರಂಭಕ್ಕೂ ಮುನ್ನ ರಾಜ್ಯದ ಸಂಸದರು ಹಾಗೂ ಕಾಂಗ್ರೆಸ್​ ಶಾಸಕರು ಸಂಸತ್ತಿನ ಹೊರಗೆಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಬಳಿ ಸದನದಲ್ಲಿ ಮಾತನಾಡಿದ ದೇವೇಗೌಡ ಅವರು ಪ್ರಧಾನಿ ಹಾಗೂ ಅಮಿತ್​ ಷಾ ಹೆಸರು ಪ್ರಸ್ತಾಪ ಮಾಡಿದ ಹಿನ್ನೆಲೆ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು

8. ಬಿಜೆಪಿಯಿಂದ ಸ್ಪೀಕರ್​ಗೆ ಸಿಡಿ

ಸಿಎಂ ಆಡಿಯೋಗೆ ಪ್ರತಿಯಾಗಿ ಬಿಜೆಪಿ ನಾಯಕರು ಕೂಡ ಕುಮಾರಸ್ವಾಮಿ ಡೀಲ್​ ನಡೆಸಿದ್ದಾರೆ ಎನ್ನಲಾದ ಸಿಡಿಯನ್ನು ಸ್ಪೀಕರ್​ಗೆ ನೀಡಿದರು. ವಿಜೂಗೌಡ ಅವರನ್ನು ಎಂಎಲ್​ಸಿ ಮಾಡಲು ಬೇಡಿಕೆ ಇಟ್ಟು ಸಿಎಂ 40 ಕೋಟಿ ಡಿಮ್ಯಾಂಡ್​ ಮಾಡಿದರು. ಬಳಿಕ 25 ಕೋಟಿ ಕೊಡಲು ಒಪ್ಪಿಕೊಂಡರು. ಈ ಕುರಿತಾದ ಸಿಡಿಯನ್ನು ಸ್ಪೀಕರ್​ಗೆ ನೀಡಿದ್ದು, ಈ ಕುರಿತು ತನಿಖೆಯಾಗಬೇಕೆಂದು ಬಿಜೆಪಿ ಶಾಸಕರ ರೇಣುಕಾಚಾರ್ಯ ಆಗ್ರಹಿಸಿದರು.

9.ಮೈಸೂರು ಪಾಲಿಕೆ ಆಯುಕ್ತರ ಕಚೇರಿ ಜಪ್ತಿ

ಎಸ್​ಟಿಪಿ ಯೋಜನೆಗಾಗಿ ಮೈಸೂರು ಪಾಲಿಕೆ ರೈತರಿಂದ 14.20 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು 22 ವರ್ಷವಾದರೂ ಹಣ ನೀಡಿರಲಿಲ್ಲ. ಈ ಹಿನ್ನಲೆಎ ಮೈಸೂರು ಪಾಲಿಕೆ ಆಯುಕ್ತರ ಕಚೇರಿಯನ್ನು ಕೋರ್ಟ್​ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ರೈತರಿಗೆ 8 ಕೋಟಿ ಹಣ ಸಂದಾಯ ಮಾಡುವಂತೆ ಕೋರ್ಟ್​ ಆದೇಶ ನೀಡಿದರು. ಇದಕ್ಕೆ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿರಲಿಲ್ಲ. ನಾಲ್ಕೈದು ಬಾರಿ ಆದೇಶದ ನಡುವೆಯೂ ಉದಾಸೀನತೆ ತೋರಿದ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ ಈ ನಿರ್ಣಯ ಕೈಗೊಂಡಿತು.

10. ಮುಂದುವರೆದ ಗುಜ್ಜರ್​ ಸಮುದಾಯದ ಪ್ರತಿಭಟನೆ

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ರಾಜಸ್ಥಾನದ ಗುಜ್ಜಾರ್​ ಸಮುದಾಯದ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ, ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿ 11ರಲ್ಲಿ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದ್ದಾರೆ. ಧೋಲ್​ಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಹಿಂಸಾಚಾರದಿಂದಾಗಿ ಜಾರಿಗೊಳಿಸಲಾಗಿದ್ದ ಸೆಕ್ಷನ್​ 144ರನ್ನು ಇಂದು ಕೂಡ ಮುಂದುವರಿಸಲಾಗಿದೆ. ಮೀಸಲಾತಿ ನೀಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಈಗಾಗಲೇ ಗುಜ್ಜಾರ್​, ಗದಿಯಾ ಲುಹಾರ್​, ಬಂಜಾರಾ ಸಮುದಾಯಗಳು ಎಚ್ಚರಿಕೆ ನೀಡಿದರು.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...