HOME » NEWS » State » FEBRUARY 01 HERE IS THE TOP 10 NEWS OF THE DAY EVENING DIGEST KANNADA LATEST BREAKING LIVE NEWS HK

Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:February 1, 2020, 6:34 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಚಿವೆ ನಿರ್ಮಲಾ ಸೀತಾರಾಮನ್
  • Share this:
1.ಶಿಕ್ಷಣ ಕ್ಷೇತ್ರದಲ್ಲೂ ವಿದೇಶಿ ಬಂಡವಾಳದ ನೇರ ಹೂಡಿಕೆಗೆ ಅವಕಾಶ; ನಿರ್ಮಲಾ ಸೀತಾರಾಮನ್

ದೇಶದ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 99,300 ಕೋಟಿ ಹಾಗೂ ಕೌಶಲ್ಯ ಅಭಿವೃದ್ಧಿಗೆ 3,000 ಕೋಟಿ ಅನುದಾನ ನೀಡಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ಬಜೆಟ್ 2020 ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

2.ಬಜೆಟ್ ನಂತರ ವಿವಿಧ ವಸ್ತುಗಳ ಬೆಲೆ ಏರಿಕೆ-ಇಳಿಕೆ ಪಟ್ಟಿ

ಮೋದಿ ನೇತೃತ್ವದ ಎರಡನೇ ಎನ್​ಡಿಎ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಬಜೆಟ್​ನಲ್ಲಿ ವಿವಿಧ ತೆರಿಗೆಯಲ್ಲಿ ಏರಿಕೆ, ಇಳಿಕೆ ಮಾಡಿದ್ದಾರೆ. ಇಳಿಕೆಯಾಗಿರುವುದರಲ್ಲಿ ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಸೇರಿವೆ. ಅಬಕಾರಿ ಸುಂಕದಲ್ಲೂ ಕೆಲ ಬದಲಾವಣೆ ಮಾಡಿದ್ದಾರೆ.

3.ಕೇಂದ್ರ ಬಜೆಟ್ ಮಂಡನೆ ದಿನವೇ ಭಾರತೀಯ ಷೇರುಪೇಟೆ ಕುಸಿತ; ನಷ್ಟ ದಾಖಲಿಸಿದ ಖಾಸಗಿ ವಿಮಾ ಕಂಪೆನಿಗಳು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್​ನಲ್ಲಿ ಮಹತ್ವದ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅಲ್ಲದೆ, ಬಜೆಟ್​ನಲ್ಲಿ ಸರ್ಕಾರ ತೆರಿಗೆದಾರರಿಗೆ ಪರ್ಯಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದರು. ಅಲ್ಲದೆ, ಜೀವ ವಿಮಾ ನಿಗಮದ ಷೇರು ಮಾರಾಟ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿಸುತ್ತಿದ್ದಂತೆ ಇಂದಿನ ವಿಮಾ ಷೇರುಪೇಟೆ ಕುಸಿತ ಕಂಡಿದೆ. ಖಾಸಗಿ ವಿಮಾ ಕಂಪೆನಿಗಳಾದ ಹೆಚ್​ಡಿಎಫ್​ಸಿ ಲೈಫ್, ಐಸಿಐಸಿಐ ಪ್ರುಡೆನ್ಶಿಯಲ್ ಹಾಗೂ ಎಸ್​ಬಿಐ ಲೈಫ್ ಕಂಪೆನಿಗಳು ದಾಖಲೆಯ ಕುಸಿತ ಅನುಭವಿಸಿವೆ.

4.ಬೆಂಗಳೂರಿಗೆ ಸಿಹಿ ಸುದ್ದಿ: ಸಬರ್ಬನ್ ರೈಲು ಯೋಜನೆಗೆ ಬಜೆಟ್​ನಲ್ಲಿ ಅನುದಾನನಗರದ ಬಹುನಿರೀಕ್ಷಿತ ಉಪನಗರ ರೈಲು (ಸಬರ್ಬನ್ ರೈಲು) ಯೋಜನೆಗೆ ಕೇಂದ್ರ ಸರ್ಕಾರ ಶೇ. 60ಷ್ಟು ಅನುದಾನ ಕೊಡುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಇದನ್ನು ಪ್ರಕಟಿಸಿದ್ಧಾರೆ. 18,600 ಕೋಟಿ ಮೊತ್ತದ ಸಬರ್ಬನ್ ರೈಲು ಯೋಜನೆಯ ಶೇ. 60 ವೆಚ್ಚವನ್ನು ಕೇಂದ್ರವೇ ಭರಿಸಲಿದೆ.

5.ಮೋದಿಯನ್ನು ತಮಿಳು ಕವಿ ತಿರುವಳ್ಳುವರ್​ಗೆ ಹೋಲಿಸಿದ ಸೀತಾರಾಮನ್; ಡಿಎಂಕೆ ಸಂಸದರ ಅಸಮಾಧಾನ

ತಮಿಳಿನ ಶ್ರೇಷ್ಠ ಕವಿ ತಿರುವಳ್ಳುವರ್​ ಅವರ ಮಾರ್ಗದರ್ಶನದ ಮೇಲೆ ನಂಬಿಕೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕವಿಯ ಆಶಯದಂತೆ ಸಮಾಜದ ಪ್ರಮುಖ 5 ಅಂಶಗಳನ್ನು ಪಾಲಿಸುತ್ತಾ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

6.ಸೋಮವಾರ ಸಂಪುಟ ವಿಸ್ತರಣೆ; 10:3 ಸೂತ್ರ - ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಹಲವು ಒತ್ತಡಗಳ ಮಧ್ಯೆ ಯಡಿಯೂರಪ್ಪ ಅವರು ಸೋಮವಾರ ಸಚಿವ ಸಂಪುಟ ವಿಸ್ತರಣೆ ಮಾಡುವುದು ಬಹುತೇಕ ಖಚಿತವಾಗಿದೆ. ಸಂಪಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೋಮವಾರ ಸಂಪುಟ ವಿಸ್ತರಣೆಯಾಗಲಿದೆ. ಸಿ.ಪಿ. ಯೋಗೇಶ್ವರ್ ಮತ್ತು ಅರವಿಂದ್ ಲಿಂಬಾವಳಿಗೆ ಮಂತ್ರಿ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಒಟ್ಟು 13 ಮಂದಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ಪಕ್ಷಾಂತರಿ ಶಾಸಕರು ಹಾಗೂ ಪಕ್ಷದ ಮೂಲ ಶಾಸಕರು ಪೈಪೋಟಿಯಲ್ಲಿರುವುದರಿಂದ ಪರಿಸ್ಥಿತಿ ನಿಭಾಯಿಸಲು 10:3 ಸೂತ್ರ ಇಟ್ಟುಕೊಳ್ಳಲಾಗಿದೆ.

7.ಎಲ್​ಐಸಿಯನ್ನೂ ಮಾರುವ ಹಂತಕ್ಕೆ ದೇಶ ಬಂದಿದೆ; ಇದು ನಿರಾಶೆಯ ಬಜೆಟ್: ಸಿದ್ದರಾಮಯ್ಯ

ಜಿಡಿಪಿ ದರ ಶೇ. 3.5ಕ್ಕೆ ಕುಸಿತಗೊಂಡಿದೆ. ದೇಶದ ಆದಾಯ ಪಾತಾಳಕ್ಕೆ ಹೋಗಿದೆ. ಇದರಿಂದ ಹೆಚ್ಚು ಸಾಲ‌ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಮುಂದೆ ಜಿಡಿಪಿ ಶೇ.6 ತರುತ್ತೇವೆ ಅಂತಿದ್ದಾರೆ. ಅದು ಗಗನ ಕುಸುಮ ಆಗಲಿದೆ. ಕೇಂದ್ರ ಸರ್ಕಾರ ಕೊನೆಯದಾಗಿ ಎಲ್‌ಐಸಿ ಶೇರು ಮಾರಲು ಮುಂದಾಗಿದೆ. ಇದು ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ
ಎಂಥ ಪರಿಸ್ಥಿತಿಗೆ ಬಂದಿದೆ ಎಂಬುದು ನಮ್ಮ ಕಣ್ಮುಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು

8.ಬಿಎಸ್​ವೈ ಬೆನ್ನಿಗೆ ನಿಂತ ಮತ್ತೊಬ್ಬ ಜೆಡಿಎಸ್​ ಶಾಸಕ; ಬಿಜೆಪಿ ಸರ್ಕಾರವನ್ನು ಬೀಳೋಕೆ ಬಿಡಲ್ಲ ಎಂದ ಸುರೇಶ್ ಗೌಡ

ಒಂದೆಡೆ ಆಪರೇಷನ್ ಕಮಲದಿಂದಾಗಿ ಕುಗ್ಗಿರುವ ಜೆಡಿಎಸ್ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪಕ್ಷದ ವರಿಷ್ಠರು ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಸ್ವತಃ ಜೆಡಿಎಸ್ ಶಾಸಕರು ಬಹಿರಂಗವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಶಾಸಕರು ಪಕ್ಷ ತೊರೆಯುವ ಸೂಚನೆ ನೀಡುತ್ತಿದ್ದಾರೆ.

9.ಲೀಕ್​ ಆಯ್ತು ಕೆ.ಜಿ.ಎಫ್​ 2 ಸಿನಿಮಾದ ಈ ವಿಡಿಯೋ

ರಾಕಿಂಗ್​ ಸ್ಟಾರ್ ಯಶ್​ ಅಭಿನಯದ 'ಕೆ.ಜಿ.ಎಫ್​ ಚಾಪ್ಟರ್​ 2' ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲೇ ಬೀಡು ಬಿಟ್ಟಿರುವ ಚಿತ್ರತಂಡ ಚಿತ್ರೀಕರದಲ್ಲಿ ವ್ಯಸ್ತವಾಗಿದೆ. 'ಕೆ.ಜಿ.ಎಫ್​ ಚಾಪ್ಟರ್​ 1' ಹಿಟ್ ಆಗಿರುವ ಹಿನ್ನಲೆಯಲ್ಲಿ ತುಂಬಾ ಗೌಪ್ಯವಾಗಿ 'ಚಾಪ್ಟರ್ 2' ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದೆ. ಎಲ್ಲೂ ಸಹ ಈ ಚಿತ್ರ ಚಿತ್ರೀಕರಣ ವಿಡಿಯೋ ಹಾಗೂ ಫೋಟೋಗಳು ಹೊರ ಬರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಆದರೂ ಚಿತ್ರೀಕರಣದ ವಿಡಿಯೋ ಲೀಕ್​ ಆಗಿದೆ.

10.ಸದ್ದು ಮಾಡುತ್ತಿದೆ ಅಂಡರ್-19 ವಿಶ್ವಕಪ್​ನಲ್ಲಾದ ಮಂಕಡ್ ರನೌಟ್

ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್​ ಅಂತಿಮ ಹಂತದತ್ತ ಸಾಗುತ್ತಿದೆ. ನಿನ್ನೆ 4ನೇ ಕ್ವಾರ್ಟರ್ ಫೈನಲ್​ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸೆಮಿ ಫೈನಲ್​ಗೆ ಪಾಕ್ ಲಗ್ಗೆಯಿಟ್ಟಿದ್ದು ಭಾರತ ವಿರುದ್ಧ ಸೆಣೆಸಾಡಲಿದೆ.
Youtube Video

 
First published: February 1, 2020, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories