ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಐಟಿ-ಬಿಟಿ ಸೇರಿದಂತೆ ಖಾಸಗಿ ಕ್ಷೇತ್ರದ ಉದ್ಯೋಗದಲ್ಲೂ ಕನ್ನಡಿಗರಿಗೆ ಶೇ.5 ರಷ್ಟು ಮೀಸಲಾತಿ ನೀಡಬೇಕು, ಹಾಗೂ ಇದು ಹಂತ ಹಂತವಾಗಿ ಶೇ.100ಕ್ಕೆಏರಿಕೆಯಾಗಬೇಕು ಎಂದು 1986ರಲ್ಲಿ ಸಾಮಾಜಿಕ ಹೋರಾಟಗಾರ್ತಿ ಸರೋಜಿನಿ ಮಹಿಷಿ ಸರ್ಕಾರಕ್ಕೆ ವರದಿ ನೀಡಿದ್ದರು.
ಆದರೆ, ಮೂರು ದಶಕಗಳಾದರೂ ಈ ವರದಿ ಜಾರಿಯಾಗಿಲ್ಲ. ಕನ್ನಡಿಗರಿಗೆ ನ್ಯಾಯ ದೊರಕಿಲ್ಲ. ಹೀಗಾಗಿ ಈ ವರದಿಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಅಂಶಗಳನ್ನೂ ಜಾರಿಗೆ ತರಬೇಕು ಎಂದು ಕಳೆದ ಹಲವು ವರ್ಷಗಳಿಂದ ಕನ್ನಡ ಪರ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಒತ್ತಾಯ ಚಳುವಳಿ ರೂಪ ತಳೆದಿರುವುದು ತೀರಾ ಅಪರೂಪ. ಇಂತಹ ಅಪರೂಪದ ಘಟನೆಗೆ ಪೆಬ್ರವರಿ 13 ಸಾಕ್ಷಿಯಾಗಲಿತ್ತು.
ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಒತ್ತಾಯಿಸಿ ಸುಮಾರು 500 ಕನ್ನಡ ಪರ ಸಂಘಟನೆಗಳು ಫೆಬ್ರವರಿ 13ಕ್ಕೆ ರಾಜ್ಯ ವ್ಯಾಪಿ ಬಂದ್ಗೆ ಕರೆ ನೀಡಿವೆ. ಈ ಬಂದ್ಗೆ ಈಗಾಗಲೇ ಓಲಾ-ಊಬರ್ ಸೇರಿದಂತೆ ಅನೇಕ ಖಾಸಗಿ ಸಾರಿಗೆ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಅಲ್ಲದೆ, ಖಾಸಗಿ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸಹ ಈ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ನಾಳಿನ ಕರ್ನಾಟಕ ಬಂದ್ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳೂ ಗೋಚರವಾಗಿತ್ತು.
ಆದರೆ, ಕೊನೆ ಗಳಿಗೆಯಲ್ಲಿ ರಾಜ್ಯದ ಪ್ರಮುಖ ಕನ್ನಡ ಪರ ಸಂಘಟನೆಯಾದ ಟಿ.ಎ. ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮತ್ತೊಂದು ಪ್ರಮುಖ ಬಣವಾದ ಪ್ರವೀಣ್ ಶೆಟ್ಟಿ ಬಣ, ವಾಟಾಳ್ ನಾಗರಾಜ್ ಈ ಮುಷ್ಕರಕ್ಕೆ ತನ್ನ ಬೆಂಬಲ ಇಲ್ಲ ಎಂದು ಘೋಷಿಸಿದೆ. ಅಲ್ಲದೆ, ಊಲಾ-ಊಬರ್ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಕೇವಲ ನೈತಿಕ ಬೆಂಬಲವನ್ನು ಮಾತ್ರ ನೀಡಿವೆ.
ಈ ಕುರಿತು ಸ್ಪಷ್ಟನೆ ನೀಡಿರುವ ನಾರಾಯಣ ಗೌಡ, “ಸರೋಜಿನಿ ಮಹಿಷಿ ವರದಿ ಜಾರಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ, ಫೆಬ್ರವರಿ 13 ರಂದು ನಡೆಯುವ ಕರ್ನಾಟಕ ಬಂದ್ಗೆ ಕರೆವೆ ಬೆಂಬಲ ಇಲ್ಲ. ಯಾವುದೇ ಹೋರಾಟಕ್ಕೆ ಅನೇಕ ಮಾರ್ಗಗಳು ಇವೆ. ಎಲ್ಲದಕ್ಕೂ ಬಂದ್ ಪರಿಹಾರವಲ್ಲ. ಹೀಗಾಗಿ ಈ ಬಂದ್ನಿಂದ ಕರವೇ ದೂರು ಉಳಿಯಲಿದೆ” ಎಂದ್ದದ್ದರೆ,
"ಹೀಗೆ ಏಕಾಏಕಿ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ಬಂದ್ಗೆ ನಮ್ಮ ಬೆಂಬಲ ಇಲ್ಲ" ಎಂದು ಪ್ರವೀಣ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಎರಡು ಪ್ರಮುಖ ಕನ್ನಡ ಪರ ಸಂಘಟನೆಗಳು ಹೀಗೆ ಸರೋಜಿನಿ ಮಹಿಷಿ ವರದಿಗಾಗಿ ಆಗ್ರಹಿಸಿ ನಡೆಯುತ್ತಿರುವ ಬಂದ್ನಿಂದ ದೂರ ಉಳಿದಿರುವುದು ಅನೇಕರಿಗೆ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ, ಈ ಬಂದ್ ಯಶಸ್ವಿಯಾಗುತ್ತಾ? ಎಂಬ ಅನುಮಾನವೂ ಮೂಡಿದೆ.
ನಾಳೆಯ ಕರ್ನಾಟಕ್ ಬಂದ್ ಗೆ ಯಾರ್ಯಾರ ಬೆಂಬಲ ಇಲ್ಲ.
*ವಾಟಾಳ್-ನಾರಾಯಣ ಗೌಡ ಅವರ ಬೆಂಬಲ ಇಲ್ಲ.
*ಪ್ರವೀಣ್ ಶೆಟ್ಟಿ ಬಣದ ಬೆಂಬಲವೂ ಇಲ್ಲ.
*ಬಂದ್ ನ ಎಫೆಕ್ಟ್ ಕಂಡು ಬರೋದು ಬಹುತೇಕ ಡೌಟ್.
*ಬಿಎಂಟಿಸಿ ಬಸ್ ಗಳ ಸಂಚಾರ ಅಬಾಧಿತ
*ಸಾರಿಗೆ ನೌಕರರಿಂದ ಬಂದ್ ಗೆ ನೈತಿಕ ಬೆಂಬಲ
*ಆದ್ರೆ ಬಸ್ ಸಂಚಾರ ಸ್ಥಗಿತಗೊಳಿಸದಿರಲು ನಿರ್ಧಾರ
*ಎಂದಿನಂತೆ ಇರಲಿದೆ ಮೆಟ್ರೋ ಸಂಚಾರ.
*ಶಾಲಾ-ಕಾಲೇಜುಗಳು ಕೂಡ ಎಂದಿನಂತೆ ಇರಲಿವೆ.
*ಆಟೋ-ಟ್ಯಾಕ್ಸಿ-ಓಲಾ-ಊಬರ್ ಸಂಚಾರಕ್ಕೂ ಇಲ್ಲ ತೊಂದರೆ
*ಲಾರಿ ಸಂಚಾರ -ಪೆಟ್ರೋಲ್ ಬಂಕ್ ಗಳೂ ಓಪನ್ ಇರುತ್ವೆ.
*ಹೊಟೇಲ್ ಗಳು ತೆರೆದಿರುತ್ವೆ-ವ್ಯಾಪಾರ ವಹಿವಾಟಿಗೂ ತೊಂದರೆ ಇಲ್ಲ.
*ಸಿನೆಮಾ ಥಿಯೇಟರ್ಸ್ ಗಳಲ್ಲು ಸಿನೆಮಾ ಪ್ರದರ್ಶನ ಇರುತ್ತೆ.
*ಬಲವಂತವಾಗಿ ಬಂದ್ ಮಾಡಿಸದಂತೆ ಪೊಲೀಸ್ ಕಮಿಷನರ್ ಎಚ್ಚರಿಕೆ.
*ಬಂದ್ ಮಾಡಿಸಲು ಮುಂದಾದ್ರೆ ಹೋರಾಟಗಾರರ ವಿರುದ್ಧ ಕಠಿಣ ಕ್ರಮ.
*ಪರ್ಮಿಷನ್ ಕೊಟ್ಟಿರುವುದು ಸಾಂಕೇತಿಕ ಮುಷ್ಕರಕ್ಕೆ-ಬಂದ್ ಗಲ್ಲ ಪೊಲೀಸ್ ಕಮಿಷನರ್ ಸ್ಪಷ್ಟನೆ.
*ಆಸ್ತಿಪಾಸ್ತಿಗೆ ಹಾನಿ-ಸಾರ್ವಜನಿಕರಿಗೆ ತೊಂದರೆಯಾದರೆ ಹೋರಾಟಗಾರರೇ ಹೊಣೆ
*ನಷ್ಟವನ್ನು ತಾವೇ ಭರಿಸಿಕೊಡಬೇಕೆಂದು ಪೊಲೀಸ್ ಕಮಿಷರ್ ಕಟ್ಟಪ್ಪಣೆ
ಇದನ್ನೂ ಒದಿ : ಫೆ. 13ಕ್ಕೆ ಕರ್ನಾಟಕ ಬಂದ್: 500ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ