• Home
  • »
  • News
  • »
  • state
  • »
  • SSLC Student: ಓದಿದ್ದು ನೆನಪುಳಿಯುತ್ತಿಲ್ಲ ಎಂಬ ಆತಂಕ; ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡ ವಿದ್ಯಾರ್ಥಿ

SSLC Student: ಓದಿದ್ದು ನೆನಪುಳಿಯುತ್ತಿಲ್ಲ ಎಂಬ ಆತಂಕ; ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡ ವಿದ್ಯಾರ್ಥಿ

ರಾಣೆಬೆನ್ನೂರು ಪೊಲೀಸ್ ಠಾಣೆ

ರಾಣೆಬೆನ್ನೂರು ಪೊಲೀಸ್ ಠಾಣೆ

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿ ಅರುಣ್​, ಓದಿದ್ದು ನೆನಪಿನಲ್ಲಿ ಇರುತ್ತಿಲ್ಲ ಎಂದು ಆತಂಕಗೊಂಡು ಹಾಸ್ಟೆಲ್​ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

  • Share this:

ಹಾವೇರಿ: ಎಸ್​​ಎಸ್​​ಎಲ್​ಸಿ (SSLC) ವಿದ್ಯಾರ್ಥಿಯೋರ್ವ (Student) ಹಾಸ್ಟೆಲ್‌ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ (Ranebennur) ಗುಡಿಹೊನ್ನತ್ತಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು 16 ವರ್ಷದ ಅರುಣ್ ದೇವರುಗುಡ್ಡ ಎಂದು ಗುರುತಿಸಲಾಗಿದ್ದು, ಮೃತ ವಿದ್ಯಾರ್ಥಿ ಎಸ್​ಎಸ್​​ಎಲ್​ಸಿ ಪರೀಕ್ಷೆಗೆ (SSLC Exam) ತಯಾರಿ ನಡೆಸಿದ್ದನಂತೆ. ಗುಡಿ ಹೊನ್ನತ್ತಿ ಗ್ರಾಮದ ಎಸ್​​ಸಿ/ಎಸ್​ಸಿ ಹಾಸ್ಟೆಲ್​ನಲ್ಲಿ ಓದುತ್ತಿದ್ದ ವಿದ್ಯಾರ್ಥಿ, ನಾನು ಓದಿದ್ದು ನೆನಪಿನಲ್ಲಿ ಇರೋದಿಲ್ಲ ಅಂತ ನಾನು ಫೇಲ್ ಆಗಬಹುದು ಎಂದು ಆತಂಕಗೊಂಡಿದ್ದನಂತೆ. ಇದೇ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಮನೆ ಬೀಗ ಮುರಿದು ದರೋಡೆ


ಮನೆ ಬೀಗ ಮುರಿದು ಕಳ್ಳರು ಮನೆಯಲ್ಲಿದ್ದ (Home Robbery) ಸುಮಾರು 1 ಕೆ.ಜಿಗೂ ಹೆಚ್ಚು ಚಿನ್ನವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆದಿದೆ. ಲೋಲಾಕ್ಷಮ್ಮ ಎಂಬುವವರ ಮನೆಯಲ್ಲಿ ದರೋಡೆಯಾಗಿದೆ. ವಿಷ್ಯ ತಿಳಿದು ಸ್ಥಳಕ್ಕೆ ಬಂದು ಮದ್ದೂರು ಪೊಲೀಸರು ಪರಿಶೀಲನೆ (Maddur Police) ನಡೆಸಿ ದೂರು ದಾಖಲು ಮಾಡಿಕೊಂಡಿದ್ದಾರೆ.


ಆತ್ಮಹತ್ಯೆಗೆ ಶರಣಾದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ


ಇದನ್ನೂ ಓದಿ: Positive Story: ಹುಟ್ಟುಹಬ್ಬಕ್ಕೆ ಚಾಕೊಲೇಟ್ ಅಲ್ಲ, ಸಸಿ ಗಿಫ್ಟ್! ಶಿರಸಿಯ ಸರ್ಕಾರಿ ಶಾಲೆಯಲ್ಲಿ ಮಾದರಿ ಕಾರ್ಯ


ಹೆಚ್ಚಾದ ಕಾಡಾನೆ ಹಾವಳಿ.. ರೈತರ ಪ್ರತಿಭಟನೆ


ಚಾಮರಾಜನಗರ (Chamarajanagar) ತಾಲೋಕಿನ ಕಾಡಂಚಿನಲ್ಲಿ ಗ್ರಾಮಗಳಲ್ಲಿ ಕಾಡಾನೆಗಳ (Wild Elephants) ಹಾವಳಿ ಹೆಚ್ಚಾಗಿದೆ. ಇದರಿಂದ ಬೇಸತ್ತ ಲಿಂಗನಪುರ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು.


ಕಳೆದ 1 ವಾರದಿಂದ ಚನ್ನಪ್ಪನಪುರ, ಅರಕಲವಾಡಿ, ಲಿಂಗನಪುರ ಸುತ್ತಮುತ್ತ ಕಾಡಾನೆಗಳ ಹಾವಳಿ (Human Elephant Conflict) ಹೆಚ್ಚಾಗಿದೆ. 30ಕ್ಕೂ ಹೆಚ್ಚು ಆನೆಗಳ ಹಿಂಡು ಅಪಾರ ಪ್ರಮಾಣದ ರಾಗಿ, ತೆಂಗು, ಬಾಳೆ, ಕೋಸು ಮತ್ತಿತರ ಬೆಳೆ ನಾಶ ಮಾಡಿವೆ. ಸರ್ಕಾರ ಕೂಡಲೇ ಸೂಕ್ತ ಬೆಳೆಹಾನಿ ಪರಿಹಾರ ಕೊಡಬೇಕು. ಕಾಡಂಚಿನಲ್ಲಿ ಸಮರ್ಪಕ ಆನೆ ಕಂದಕ, ಸೋಲಾರ್ ಬೇಲಿ ಹಾಕಬೇಕು ಎಂದು ರೈತರು (Farmers) ಆಗ್ರಹಿಸಿದ್ದಾರೆ.


ಇದನ್ನೂ ಓದಿ: Bengaluru: ಲುಡೋ ಗೇಮ್​ ಆಡುವಾಗ ಲವ್​​; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಅರೆಸ್ಟ್​


ನಾಯಿ ಬೇಟೆಗೆ ಬಂದ ಚಿರತೆ


ಮನೆ ಮುಂದೆ ಕಟ್ಟಿದ್ದ ನಾಯಿ (Dog) ಮೇಲೆ ಚಿರತೆ ದಾಳಿ ಮಾಡಿದ ಘಟನೆ ರಾಮನಗರ (Ramanagara) ಜಿಲ್ಲೆಯ ರಾಂಪುರದಲ್ಲಿ ನಡೆದಿದೆ. ಗೋವಿಂದರಾಜು ಎಂಬುವವರ ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ (Leopard Attack) ಮಾಡಿದೆ. ಆದರೆ, ಚಿರತೆಯಿಂದ ತಪ್ಪಿಸಿಕೊಳ್ಳುವಲ್ಲಿ ನಾಯಿ ಯಶಸ್ವಿಯಾಗಿದೆ. ಈ ದೃಶ್ಯ ಮನೆಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ (Dakshina Kannada) ಮನೆಯಂಗಳದಿಂದ ಬೆಲೆಬಾಳುವ ನಾಯಿಮರಿಯನ್ನು ಚಿರತೆ ಹೊತ್ತೊಯ್ದಿದೆ. ಹಾಡುಹಗಲೇ ಘಟನೆ ನಡೆದಿದ್ದು, ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ಗಣೇಶ್ ಎಂಬವರ ಮನೆ ಅಂಗಳಕ್ಕೆ ಬಂದ ಚಿರತೆ ಅಂಗಳದಲ್ಲಿ ಆಡುತ್ತಿದ್ದ 40 ದಿನ ಪ್ರಾಯದ ಪಗ್ ಜಾತಿಯ (Pug Dog) ಮರಿಯನ್ನು ಕಚ್ಚಿಕೊಂಡು ಎಸ್ಕೇಫ್​ ಅಗಿದೆ. ಮನೆ ಮಾಲೀಕ ಗಣೇಶ್ ಮಾತ್ರ ಇದ್ದ ಸಮಯದಲ್ಲಿ ಘಟನೆ ನಡೆದಿದ್ದು, ಕಳೆದ ಕೆಲವು ದಿನಗಳಿಂದ ಈ ಪರಿಸರದಲ್ಲಿ ಓಡಾಡುದ್ದ ಚಿರತೆ ನಾಯಿ ಮರಿಯನ್ನು ಹೊತ್ತೊಯ್ದಿದಿದ್ದು, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ ಹೆಚ್ಚಾಗಿದೆ.


ರಾಮೇಶ್ವರ ದೇವರ ತೆಪೋತ್ಸವ


ಮಾಧವ ದೇವರ ವರ್ಧಂತಿ ಉತ್ಸವ ಪ್ರಯುಕ್ತ ತುಂಗಾ ಆರತಿ ಹಾಗೂ ತೆಪೋತ್ಸವ ನಡೆಸಲಿದೆ. ಶಿವಮೊಗ್ಗದ (Shivamogga) ತೀರ್ಥಹಳ್ಳಿಯ ತುಂಗಾ ನದಿಯಲ್ಲಿ (Tunga River) ರಾಮೇಶ್ವರ, ಕಲ್ಲಾರೆ ಗಣಪತಿ ಹಾಗೂ ಮಾಧವ ದೇವರ ತೆಪೋತ್ಸವ (Teppotsava) ಅದ್ಧೂರಿಯಾಗಿ ನಡೀತು. ತೆಪ್ಪೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದ್ರು. ಇನ್ನು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತಿ ತೀರ್ಥ ಸ್ವಾಮಿಗಳು (Bharathi Tirtha Swamiji) ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು