ಎಫ್​ಡಿಎ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಯಾರು?; ಕೊನೆಗೂ ಸಿಕ್ಕಾಕೊಂಡ್ರು ಎ1 ಆರೋಪಿ

ಸನಾಬೇಡಿ ಕೊಟ್ಟ ಪ್ರಶ್ನೆ ಪತ್ರಿಕೆಯನ್ನು ಚಂದ್ರು ಮತ್ತು ಇತರೆ ಆರೋಪಿಗಳಿಗೆ ರಮೇಶ್ ನೀಡಿದ್ದ ಎನ್ನಲಾಗಿದೆ. ಸದ್ಯ ಸಿಸಿಬಿ ರಮೇಶ್ ಮತ್ತು ಮಹಿಳಾ ಅಧಿಕಾರಿ ಸನಾಬೇಡಿ ಇಬ್ಬರನ್ನೂ ತೀವ್ರ ವಿಚಾರಣೆ ಮಾಡುತ್ತಿದೆ.

ಕರ್ನಾಟಕ ಲೋಕಸೇವಾ ಆಯೋಗ

ಕರ್ನಾಟಕ ಲೋಕಸೇವಾ ಆಯೋಗ

 • Share this:
  ಬೆಂಗಳೂರು(ಜ.25): ಕೆಪಿಎಸ್​ಸಿ ಎಫ್​​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಈಗಾಗಲೇ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಈ ಕೃತ್ಯದಲ್ಲಿ ಕೆಪಿಎಸ್​ಸಿ ಸಿಬ್ಬಂದಿಗಳ ಕೈವಾಡವಿರುವುದು ಖಚಿತವಾಗಿದೆ. ಅದರಂತೆ ಕೆಪಿಎಸ್​ಸಿ ಇಲಾಖೆಯಲ್ಲಿ ಕಂಟ್ರೋಲರ್​ ಆಫ್​ ಎಕ್ಸಾಂ ಡಿವಿಷನ್​ನಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಸನಾ ಬೇಡಿ ಎಂಬಾಕೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಸದ್ಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಸ್ಟೆನೋಗ್ರಾಫರ್ ಸನಾಬೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಆರೋಪಿ ರಮೇಶ್​​ಗೆ ಪ್ರಶ್ನೆ ಪತ್ರಿಕೆ ನೀಡಿದ್ದಳು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ರಮೇಶ್​ ವಿಚಾರಣೆ ವೇಳೆ ಈ ಸ್ಪೋಟಕ ವಿಷಯದ ಬಗ್ಗೆ ಬಾಯಿಬಿಟ್ಟಿದ್ದಾನೆ.

  ಸನಾಬೇಡಿ ಕೊಟ್ಟ ಪ್ರಶ್ನೆ ಪತ್ರಿಕೆಯನ್ನು ಚಂದ್ರು ಮತ್ತು ಇತರೆ ಆರೋಪಿಗಳಿಗೆ ರಮೇಶ್ ನೀಡಿದ್ದ ಎನ್ನಲಾಗಿದೆ. ಸದ್ಯ ಸಿಸಿಬಿ ರಮೇಶ್ ಮತ್ತು ಮಹಿಳಾ ಅಧಿಕಾರಿ ಸನಾಬೇಡಿ ಇಬ್ಬರನ್ನೂ ತೀವ್ರ ವಿಚಾರಣೆ ಮಾಡುತ್ತಿದೆ.

  ಶಾಲೆ ಆರಂಭ ಕುರಿತು ಬುಧವಾರ ನಿರ್ಧಾರ ಪ್ರಕಟ; ಸಚಿವ ಸುರೇಶ್ ಕುಮಾರ್

  ಕೆಪಿಎಸ್ ಸಿ ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ,  ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೆಪಿಎಸ್ ಸಿಯ ಇಬ್ಬರು ನೌಕರರ ಕೈವಾಡವಿದೆ ಅಂತ ದೃಢಪಡಟ್ಟಿದೆ. ಎಸ್ ಡಿಎ ರಮೇಶ್ ಮತ್ತು ಸ್ಟೇನೋಗ್ರಾಫರ್ ಸಾನಾ ಬೇಡಿ- ಈ ಇಬ್ಬರು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂದರು.

  ಸಾನಾ ಬೇಡಿಗೆ ಪ್ರಶ್ನೆ ಪತ್ರಿಕೆ ಆಕ್ಸಸ್ ಇತ್ತು. ಆಕೆ ಪತ್ರಿಕೆ ಲೀಕ್ ಮಾಡಿ ರಮೇಶ್ ಮೂಲಕ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 14 ಜನರನ್ನ ಬಂಧಿಸಲಾಗಿದ್ದು, ತನಿಖೆಯನ್ನ ಮುಂದುವರೆಸಲಾಗಿದೆ‌ ಎಂದು ಹೇಳಿದರು.
  Published by:Latha CG
  First published: