HOME » NEWS » State » FDA EXAM PAPER LEAK CASE ACCUSED CHANDRU TALK ABOUT MARKS CARD SECRET DURING CCB TRIAL GVTV MAK

FDA Exam: ಸಿಸಿಬಿ ವಿಚಾರಣೆ ವೇಳೆ ಮಾರ್ಕ್ಸ್ ಕಾರ್ಡ್ ಮತ್ತು ಚೆಕ್ ರಹಸ್ಯ ಬಾಯ್ಬಿಟ್ಟ ಆರೋಪಿ ಚಂದ್ರು

ವಾಣಿಜ್ಯ ತೆರಿಗೆ ಇಲಾಖೆ ಇನ್ಸ್​ಪೆಕ್ಟರ್​ ಆಗಿದ್ದ ಆರೋಪಿ ಚಂದ್ರು ಬಳಿಯೇ ಲಕ್ಷಾಂತರ ಹಣ ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

news18-kannada
Updated:January 30, 2021, 2:27 PM IST
FDA Exam: ಸಿಸಿಬಿ ವಿಚಾರಣೆ ವೇಳೆ ಮಾರ್ಕ್ಸ್ ಕಾರ್ಡ್ ಮತ್ತು ಚೆಕ್ ರಹಸ್ಯ ಬಾಯ್ಬಿಟ್ಟ ಆರೋಪಿ ಚಂದ್ರು
ಆರೋಪಿ ಚಂದ್ರು.
  • Share this:
ಬೆಂಗಳೂರು: ದಿನದಿಂದ ದಿನಕ್ಕೆ ಎಫ್​ಡಿಎ ಲೀಕಾಸುರರ ಪಟ್ಟಿ ಏರುತ್ತಲೇ ಇದೆ. ಇದುವರೆಗೂ  23 ಮಂದಿ ಆರೋಪಿಗಳನ್ನ ಬಂಧಿಸಿರೋ ಸಿಸಿಬಿ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ಸಮಯದಲ್ಲಿ ಆರೋಪಿ ಚಂದ್ರು ಮಾರ್ಕ್ಸ್ ಕಾರ್ಡ್ ಮತ್ತು ಚೆಕ್ ರಹಸ್ಯ ಬಾಯ್ಬಿಟ್ಟಿದ್ದಾನೆ.. ಹೌದು ಎಫ್​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ನಡುವೆ ಆರೋಪಿಗಳಿಂದ ಪ್ರಶ್ನೆ ಪತ್ರಿಕೆ ಪಡೆದಿದ್ದ ಅಭ್ಯರ್ಥಿಗಳ ಹಿಂದೆ ಸಿಸಿಬಿ ಬಿದ್ದಿದ್ದು, ಇದುವರೆಗೂ ಬಂಧಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ಈ ನಡುವೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ರಾಚಪ್ಪನನ್ನ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಆರೋಪಿ ಚಂದ್ರು  ಚೆಕ್ ಮತ್ತು ಮಾರ್ಕ್ಸ್ ಕಾರ್ಡ್ ರಹಸ್ಯ ಬಾಯ್ಬಿಟ್ಟಿದ್ದಾನೆ.

ಹೌದು ಹಣ ನೀಡದೆ ಕಾಲಾವಕಾಶ ಕೇಳುವ ಅಭ್ಯರ್ಥಿಗಳ ಬಳಿ ಚಂದ್ರು ಎಸ್​ಎಸ್​ಎಲ್​ಸಿ, ಪಿಯುಸಿ ಮತ್ತು ಡಿಗ್ರಿ ಮಾರ್ಕ್ಸ್ ಕಾರ್ಡ್ ಪಡೆಯುತ್ತಿದ್ದ. ಸದ್ಯ ಐದು ಮಾರ್ಕ್ಸ್ ಕಾರ್ಡ್ ಗಳನ್ನ ಸಿಸಿಬಿ ಪೊಲೀಸ್ರು ಜಪ್ತಿ ಮಾಡಿದ್ದಾರೆ‌‌. ಇದಲ್ಲದೆ ಚಂದ್ರು ಬಳಿ ಬಳಿ ಒಂದು ಲಕ್ಷ ,ಎರಡು ಲಕ್ಷ, ಮೂರುವರೆ ಲಕ್ಷದ ಚೆಕ್ ಮತ್ತು ಎರಡು ಖಾಲಿ ಚೆಕ್ ಗಳು ಪತ್ತೆಯಾಗಿವೆ. ಒಟ್ಟು ಐದು ಚೆಕ್​ಗಳನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ. ಜೊತೆಗೆ ಆರೋಪಿಗಳಾದ ಸನಾಬೇಡಿ, ರಮೇಶ್, ಚಂದ್ರು,ರಾಚಪ್ಪ ನಾಲ್ವರನ್ನ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಈ ವೇಳೆ ಕಮಿಷನ್ ಹಣದ ಆಸೆಗೆ ಅಭ್ಯರ್ಥಿಗಳನ್ನ ಚಂದ್ರು ಬಳಿ ರಾಚಪ್ಪ ಕರೆತಂದಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ..ಜೊತೆಗೆ ಚಂದ್ರು ಬಳಿ ಐದು ಮಂದಿ ಅಭ್ಯರ್ಥಿಗಳನ್ನ ಪರಿಚಯಿಸಿ ತನ್ನ ಸಂಬಂಧಿಕರು ಎಂದು ಹತ್ತು ಲಕ್ಷದ ಡೀಲ್ ನ್ನ ಐದು ಲಕ್ಷಕ್ಕೆ ರಾಚಪ್ಪ ಫಿಕ್ಸ್ ಮಾಡಿಸಿದ್ದನಂತೆ. ಬೆಳಗಾಂ ಮೂಲದ ಮೂವರು ಅಭ್ಯರ್ಥಿಗಳ ಬಳಿ ಮಾರ್ಕ್ಸ್ ಕಾರ್ಡ್ ಪಡೆದಿದ್ದ, ಜೊತೆಗೆ ಶಿವಮೊಗ್ಗ ಓರ್ವ ಅಭ್ಯರ್ಥಿ ಹಾಗೂ ಮೈಸೂರಿನ ಅಭ್ಯರ್ಥಿ ಬಳಿ ಎಸ್ಎಸ್​ಎಲ್​ಸಿ ಮಾರ್ಕ್ಸ್ ಕಾರ್ಡ್ ಪಡೆದಿದ್ದ ಎನ್ನಲಾಗಿದೆ. ಇನ್ನು ರಮೇಶ್ ಮತ್ತು ಸನಾಬೇಡಿ ಉಳಿದುಕೊಂಡಿದ್ದ ಮನೆ ಮತ್ತು ಕಚೇರಿ ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ: ಆಗ್ರಾದಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 10 ಮಂದಿ ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ

ಈ ವೇಳೆ ಅವರ ಬಳಿ ಯಾವುದೇ ದಾಖಲೆ ಹಣ ಪತ್ತೆಯಾಗಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಇನ್ಸ್​ಪೆಕ್ಟರ್​ ಆಗಿದ್ದ ಆರೋಪಿ ಚಂದ್ರು ಬಳಿಯೇ ಲಕ್ಷಾಂತರ ಹಣ ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ತಾನು ಹಣಕ್ಕಾಗಿ ಅಲ್ಲಾ, ಫ್ರೆಂಡ್ ಶಿಪ್ ಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ‌ ಮಾಡಿದೆ ಎಂದು ಸನಾಬೇಡ ಹೇಳಿಕೆ ನೀಡಿದ್ದಾರೆ.
Youtube Video

ಮತ್ತೊಂದೆಡೆ ಈ ಹೇಳಿಕೆ ಸತ್ಯಾಸತ್ಯತೆ ಅರಿಯಲು ವಿವಿಧ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ನಾಳೆಗೆ ಲೀಕಾಸುರರ ಬಂಧನ ಪಟ್ಟಿ ಇನ್ನಷ್ಟು ಹೆಚ್ಚಾಗಲಿದೆ. ಇನ್ನು ಕೆಪಿಎಸ್​ಸಿ ಕೆಲ ನೌಕರರ ಮೇಲೆ ಅನುಮಾನವಿದ್ದು, ವಿಚಾರಣೆ ನಡೆಸಲು ಸಿಸಿಬಿ ಸಿದ್ದತೆ ನಡೆಸಿದೆ. ಈ ನಡುವೆ ಬಂಧಿತ ಆರೋಪಿಗಳ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳ ಹುಡುಕಾಟದಲ್ಲಿ ಸಿಸಿಬಿ ನಿರತವಾಗಿದೆ.
Published by: MAshok Kumar
First published: January 30, 2021, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories