HOME » NEWS » State » FDA EXAM KARNATAKA LOKA SEVA AYOGA DECLAR THE FDA EXAM DATE MAK

FDA Exam: ಎಫ್​ಡಿಎ ಪರೀಕ್ಷೆ ದಿನಾಂಕ ಘೋಷಿಸಿದ ಲೋಕ ಸೇವಾ ಆಯೋಗ; ಫೆಬ್ರವರಿ.28ಕ್ಕೆ ನಡೆಯಲಿದೆ ಪರೀಕ್ಷೆ!

ಪ್ರಶ್ನಾಪತ್ರಿಕೆ ಸೋರಿಕೆಯಾಗಿರುವ ಕುರಿತು ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆ ಕಾರ್ಯಚಾರಣೆ ನಡೆಸಿದ್ದು, ಆರು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ರಾಚಪ್ಪ ಮತ್ತು ಚಂದ್ರು ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗಿದೆ.

news18-kannada
Updated:February 2, 2021, 3:53 PM IST
FDA Exam: ಎಫ್​ಡಿಎ ಪರೀಕ್ಷೆ ದಿನಾಂಕ ಘೋಷಿಸಿದ ಲೋಕ ಸೇವಾ ಆಯೋಗ; ಫೆಬ್ರವರಿ.28ಕ್ಕೆ ನಡೆಯಲಿದೆ ಪರೀಕ್ಷೆ!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಫೆಬ್ರವರಿ 02); ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿದ್ದ ಎಫ್​ಡಿಎ (ಪ್ರಥಮ ದರ್ಜೆ ಸಹಾಯಕ) ಪರೀಕ್ಷೆಯನ್ನು ಫೆ.28ಕ್ಕೆ ನಡೆಸುವುದಾಗಿ ಲೋಕಸೇವಾ ಆಯೋಗ ಇಂದು ತಿಳಿಸಿದೆ. ಈ ಸಂಬಂಧ ಸುತ್ತೋಲೆಯನ್ನೂ ಹೊರಡಿಸಿದೆ. ಎಲ್ಲಾ ಅಂದುಕೊಂಡತೆ ನಡೆದಿದ್ದರೆ, ಎಫ್​ಡಿಎ ಪರೀಕ್ಷೆ ಕಳೆದ ಜನವರಿ 24 ರಂದೇ ನಡೆಯಬೇಕಿತ್ತು. ಆದರೆ, ಪ್ರಥಮ ದರ್ಜೆ ಸಹಾಯಕರ ಹುದ್ದೆ ಪ್ರಶ್ನಾಪತ್ರಿಕೆ ಸೋರಿಕೆಗೊಂಡ ಹಿನ್ನಲೆ ಪರೀಕ್ಷೆಯನ್ನು ರದ್ದು ಮಾಡಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ ಸತ್ಯವತಿ ಆದೇಶ ಹೊರಡಿಸಿದ್ದರು. 2019ರ ವಿವಿಧ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಹೊರಡಿಸಿ ಕಳೆದ ವರ್ಷ ಕೆಪಿಎಸ್​ಸಿ ಯಿಂದ ನೇಮಕಾತಿ ಹೊರಡಿಸಲಾಗಿತ್ತು. 

ಅದರಂತೆ ಜ. 23ರಂದು ಕಡ್ಡಾಯ ಕನ್ನಡ ಮತ್ತು ಜ.24 ರಂದು ಸ್ಪರ್ಥಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ಈ ಎರಡೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಪ್ರಕರಣದ ತನಿಖೆ ಇದೀಗ ಪ್ರಗತಿಯಲ್ಲಿ ಲೋಕಸೇವಾ ಆಯೋಗ ಎಫ್​ಡಿಎ ಪರೀಕ್ಷೆಗೆ ಹೊಸ ದಿನಾಂಕವನ್ನು ಘೋಷಿಸಿದೆ.

ಪ್ರಶ್ನಾಪತ್ರಿಕೆ ಸೋರಿಕೆಯಾಗಿರುವ ಕುರಿತು ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆ ಕಾರ್ಯಚಾರಣೆ ನಡೆಸಿದ್ದು, ಆರು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ರಾಚಪ್ಪ ಮತ್ತು ಚಂದ್ರು ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಬಂಧಿತ ಆರೋಪಿಗಳಿಂದ 24 ಲಕ್ಷ ನಗದು , ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳ ಬಳಿಯಿದ್ದ ಪ್ರಶ್ನಾ ಪತ್ರಿಕೆಯನ್ನು ಕೆಪಿಎಸ್​ಸಿಗೆ ಪರಿಶೀಲನೆಗೆ ಕಳುಹಿಸಾಗಿದೆ. ಈ ವೇಳೆ ಈ ಪ್ರಶ್ನಾ ಪತ್ರಿಕೆಗಳು ನಾಳೆ ನಡೆಯಬೇಕಿದ್ದ ಪರೀಕ್ಷೆಯದು ಎಂದು ತಿಳಿದುಬಂದಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಿದ್ದಾರೆ. ರದ್ದಾದ ಈ ಪರೀಕ್ಷೆಯನ್ನು ಮರು ನಿಗದಿ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: CBSE Class 10, Class 12 Exam 2021: ಸಿಬಿಎಸ್​​ಇ 10, 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ವಾಣಿಜ್ಯ ತೆರಿಗೆ ಅಧಿಕಾರಿಯಿಂದಲೇ ಪೇಪರ್​ ಸೋರಿಕೆ

ಈ ಎಫ್​ಡಿಎ ಪತ್ರಿಕೆಯನ್ನು ಕೋರಮಂಗಲದ ವಾಣಿಜ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಅಧಿಕಾರಿ ಚಂದ್ರು ಸೋರಿಕೆ ಮಾಡಿರುವುದು ಬೆಳಕಿದೆ ಬಂದಿದೆ.ಕಮರ್ಷಿಯಲ್ ಟ್ಯಾಕ್ಸ್ ವಿಜಿಲೇನ್ಸ್ ಇನ್ಸ್‌ಪೆಕ್ಟರ್ ಆಗಿದ್ದ ಚಂದ್ರು ಪ್ರಶ್ನೆ ಪತ್ರಿಕೆ ಪಡೆದು ಮಾರಾಟ ಮಾಡಿದ್ದಾರೆ. ಮೊದಲ ಹಂತದ ವ್ಯಕ್ತಿಯಿಂದ ಪಡೆದು ಬೇರೆ ಜಿಲ್ಲೆಗಳ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ಎರಡನೇ ಹಂತದ ಡೀಲರ್ ಆಗಿದ್ದ ಚಂದ್ರು ಕಾರ್ಯ ನಿರ್ವಹಿಸಿದ್ದಾರೆ. ಈ ಪತ್ರಿಕೆ ಪಡೆಯಲು ಬೆಳಗಾವಿ, ಅಥಣಿ, ಶಿವಮೊಗ್ಗ, ಬೆಂಗಳೂರು ಸೇರಿ ಬೇರೆ ಕಡೆಗಳಿಂದ ಬಂದಿದ್ದ ಐದು ಜನರ ಬಂಧಿಸಲಾಗಿದೆ. ಒಂದು ಪ್ರಶ್ನಾ ಪತ್ರಿಕೆಗೆ ಹತ್ತು ಲಕ್ಷ ನಿಗದಿ ಮಾಡಿ ಮಾರಾಟ ಮಾಡುವ ಯತ್ನ ನಡೆಸಲಾಗಿತ್ತು.
Published by: MAshok Kumar
First published: February 2, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories