• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hubballi: ಅಪ್ರಾಪ್ತೆ ಜೊತೆ 3 ಮಕ್ಕಳ ತಂದೆ ಮದುವೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ!

Hubballi: ಅಪ್ರಾಪ್ತೆ ಜೊತೆ 3 ಮಕ್ಕಳ ತಂದೆ ಮದುವೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ!

ಎರಡನೇ ಮದುವೆಯಾದ ಆರೋಪಿ ಹನುಮಂತ ಉಪ್ಪಾರ

ಎರಡನೇ ಮದುವೆಯಾದ ಆರೋಪಿ ಹನುಮಂತ ಉಪ್ಪಾರ

ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿ ಜೊತೆಗೆ ಮೂವರು ಮಕ್ಕಳು ಇದ್ದಾರೆ. ಆದರೆ ಸದ್ಯ ಅಪ್ರಾಪ್ತೆಯೊಂದಿಗೆ ಎರಡನೇ ಮದುವೆಯಾಗಿದ್ದಾನೆ. ಈ ಸಂಬಂಧ ಹುಬ್ಬಳ್ಳಿಯ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 • News18 Kannada
 • 3-MIN READ
 • Last Updated :
 • Raichur, India
 • Share this:

ಹುಬ್ಬಳ್ಳಿ: 17 ವರ್ಷದ ಅಪ್ರಾಪ್ತೆಯನ್ನು (Minor Girl) ಮೂರು ಮಕ್ಕಳ ತಂದೆ ಮದುವೆಯಾದ ಘಟನೆ ಹುಬ್ಬಳ್ಳಿಯ (Hubli) ಆಶೋಕ ನಗರ ಪೊಲೀಸ್ ಠಾಣೆಯಲ್ಲಿ (Ashok Nagar Police Station ) ನಡೆದಿದೆ. ಆರೋಪಿ ಹನುಮಂತ ಉಪ್ಪಾರ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದರೂ ಈಗ ಅಪ್ರಾಪ್ತ ಬಾಲಕಿಯೊಂದಿಗೆ ಎರಡನೇ ಮದುವೆಯಾಗಿದ್ದಾನೆ (Second Marriage) ಎಂದು ಫೋಟೋಗಳ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಬಾಲಕಿಗೆ ಹಣ ಆಮಿಷವೊಡ್ಡಿ (Lure of Money) ಆರೋಪಿ ಮದುವೆಯಾಗಿದ್ದಾನೆ ಎಂದು ಹನುಮಂತಪ್ಪ ಮೊದಲ ಪತ್ನಿ ಆರೋಪಿಸಿದ್ದಾರೆ.


ಮೊದಲ ಪತ್ನಿಯನ್ನು ಬಿಟ್ಟು ಎರಡನೇ ಮದುವೆಯಾದ ಆರೋಪಿ


ಹನುಮಂತ ಉಪ್ಪಾರ ಹುಬ್ಬಳ್ಳಿಯ ಮಹದೇವ ನಗರದ ನಿವಾಸಿಯಾಗಿದ್ದು, ನೇತ್ರಾ ಎಂಬಾಕೆಯನ್ನು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಇಬ್ಬರಿಗೂ ಮೂರು ಮಕ್ಕಳು ಕೂಡ ಜನಿಸಿದ್ದಾರೆ. ಆದರೆ ಈಗ ಆರೋಪಿ ಮೊದಲ ಪತ್ನಿ ನೇತ್ರಾ ಅವರನ್ನು ಬಿಟ್ಟು ಮತ್ತೊಂದು ಮದುವೆಯಾಗಿದ್ದಾನೆ. ಅದರಲ್ಲೂ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಮದುವೆಯಾಗಿದ್ದು, ಆಕೆಗೆ ಹಣದ ಆಮಿಷ ತೋರಿಸಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾನೆ ಎಂದು ಮೊದಲ ಪತ್ನಿ ಆರೋಪಿಸಿದ್ದಾರೆ.
ಇದನ್ನೂ ಓದಿ: Hassan: ಹದಿಹರೆಯದ ಪ್ರೇಮಕ್ಕೆ ಅಪ್ರಾಪ್ತೆ ಬಲಿ; ವಿಷ ಸೇವಿಸಿ ಸಾವಿಗೆ ಶರಣಾದ ಬಾಲಕಿ, ಯುವಕ ಅರೆಸ್ಟ್


ಆರೋಪಿ ವಿರುದ್ಧ ಎಫ್​ಐಆರ್ ದಾಖಲಿಸಿದ ಪೊಲೀಸರು


ಸಂಬಂಧ ನೇತ್ರಾ ಅವರು ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇತ್ತ ಆಪ್ರಾಪ್ತ ಬಾಲಕಿಯನ್ನು ಮದುವೆಯಾದ ಕಾರಣ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯೂ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಹನಮಂತನ‌ ವಿರುದ್ದ ದೂರು ದಾಖಲು ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಮೊದಲ ಪತ್ನಿ ನೇತ್ರಾ, ಎರಡು ವರ್ಷಗಳಿಂದ ಪತಿ ಈ ರೀತಿ ನನ್ನನ್ನು ದೂರ ಮಾಡಿದ್ದಾರೆ. ಅವರು ಬಾರಿ ಹಿರಿಯ ನೇತೃತ್ವದಲ್ಲಿ ಮಾತುಕತೆ ನಡೆಸಿದರೂ ಆತ ಬದಲಾಗಲಿಲ್ಲ. ಈಗ ಬಾಲಕಿಯೊಂದಿಗೆ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಮಕ್ಕಳ ರಕ್ಷಣಾಧಿಕಾರಿಗಳ ವಿರುದ್ಧ ದೂರು


ಆದರೆ ಅಪ್ರಾಪ್ತ ಬಾಲಕಿ ಮದುವೆಯಾದರುವ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಪ್ರಕರಣ ದಾಖಲು ಮಾಡಬೇಕು, ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾ ಮಹಿಳಾ‌ ರಕ್ಷಣಾಧಿಕಾರಿಗಳ ನಡೆ ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಪ್ರಾದೇಶಿಕ ಆಯುಕ್ತರಿಗೆ ಮಕ್ಕಳ ರಕ್ಷಣಾಧಿಕಾರಿ ಆರ್.ಎಂ.ಕಂಟೆಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Bengaluru: ಗೋಮಾತೆಗೆ ಮೂತ್ರಪಾನ ಮಾಡಿಸಿದ ಆರೋಪ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್; ಟೆಕ್ಕಿ ನಿಜ ಬಣ್ಣ ಬಯಲು, ಅಸಲಿಗೆ ಆಗಿದ್ದೇನು?


ವಿದ್ಯಾರ್ಥಿನಿಯರ ವಸತಿ ನಿಲಯ


ಹಾಸ್ಟೆಲ್​​​ನಲ್ಲಿ ನೇಣಿಗೆ ಶರಣಾದ ಪಿಯು ವಿದ್ಯಾರ್ಥಿನಿ


ಪಿಯುಸಿ ಪ್ರಥಮ (PUC Student) ವರ್ಷ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮಹಿಳಾ ವಸತಿ ನಿಲಯದಲ್ಲಿ (Women's Hostel) ನೇಣಿಗೆ ಶರಣಾಗಿರುವ ಘಟನೆ ರಾಯಚೂರಿನ (Raichur) ಲಿಂಗಸುಗೂರ ಪಟ್ಟಣದ ವಿಸಿಬಿ ಶಿಕ್ಷಣ ಸಂಸ್ಥೆಯ (VCB Educational Institution) ಮಹಿಳಾ ವಸತಿ ನಿಲಯದಲ್ಲಿ ನಡೆದಿದೆ.


ಐಶ್ವರ್ಯಾ ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿಯಾಗಿದ್ದು, ಲಿಂಗಸ್ಗೂರು (Lingsugur) ತಾಲೂಕಿನ ಗೋನವಾಟ್ಲ ತಾಂಡಾದ ನಿವಾಸಿಯಾದ್ದಳು. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಭಾಗದ (PUC Science) ವಿದ್ಯಾರ್ಥಿನಿ ಓದುತ್ತಿದ್ದಳು. ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು