ಬೆಳೆವಿಮೆ ಹಣ ಕೊಡು ಎಂದಿದ್ದಕ್ಕೆ ಸ್ವಂತ ಮಗನನ್ನೆ ಕೊಂದ ಪಾಪಿ ತಂದೆ

ಇನ್ನು ಮಗನನ್ನ ಕೊಲೆ ಮಾಡಿದ ಪಾಪಿ ತಂದೆ ತಾನು ಏನೂ ಮಾಡಿಲ್ಲ ಎಂದು ಮನೆಯಲ್ಲಿ ಸುಮ್ಮನಿದ್ದ. ಬೆಳಿಗ್ಗೆ ತಾಯಿ ಮಗನನ್ನ ಎಬ್ಬಿಸಲು ಹೋದಾಗ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

news18-kannada
Updated:February 15, 2020, 4:15 PM IST
ಬೆಳೆವಿಮೆ ಹಣ ಕೊಡು ಎಂದಿದ್ದಕ್ಕೆ ಸ್ವಂತ ಮಗನನ್ನೆ ಕೊಂದ ಪಾಪಿ ತಂದೆ
ಕೊಲೆಯಾದ ಯಮನಪ್ಪ
  • Share this:
ಚಿಕ್ಕೋಡಿ (ಫೆ.15) : ಸಾಮಾನ್ಯವಾಗಿ ತಂದೆ ತನ್ನ ಮಕ್ಕಳಿಗೆ ಬುದ್ದಿವಾದ ಹೇಳುತ್ತಾರೆ. ಮಗ ದಾರಿ ಬಿಡುತ್ತಿದ್ದರೆ ತಿದ್ದಿ ಬುದ್ದಿ ಹೇಳುವದನ್ನು ಕೇಳಿದ್ದಿರಿ ಆದರೆ, ಇಲ್ಲೊಬ್ಬ ತಂದೆ ತನ್ನ ಮಗ ತನಗೆ ಬುದ್ದಿವಾದ ಹೇಳಿದಕ್ಕೆ ಸ್ವಂತ ಮಗನನ್ನೆ ಬರ್ಬರವಾಗಿ ಕೊಲೆ ಮಾಡಿದ್ದಾನೆ. 

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ 60 ವರ್ಷದ ಸಿದ್ದಪ್ಪ ಯಮನಪ್ಪ ನಿಡಗುಂದಿ ತನ್ನ ಮಗನಾದ ಯಮನಪ್ಪ ಸಿದ್ದಪ್ಪ ನಿಡಗುಂದಿ (40) ಬರ್ಬರವಾಗಿ ಕೊಲೆ‌ ಮಾಡಿದ್ದಾನೆ. ಕಾರಣ ಇಷ್ಟೇ ಕಳೆದ ಬಾರಿ ಆದ ಅತಿವೃಷ್ಠಿಯಿಂದ ಇದ್ದ ಬೆಳೆ ಹಾಳಾಗಿತ್ತು ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಎಂದು ಸಿದ್ದಪ್ಪ ಅಕೌಂಟ್ ಗೆ 30 ಸಾವಿರ ಹಣ ಜಮಾ ಆಗಿತ್ತು. ಆದರೆ, ಸಿದ್ದಪ್ಪ ಈ ಹಣವನ್ನ ಮನೆಗೆ ಕೊಡದೆ ನಿತ್ಯ ಕುಡಿದು ಬೇಕಾ ಬಿಟ್ಟಿ ಖರ್ಚು ಮಾಡತೊಡಗಿದ್ದ.

ಆದರೆ, ಮಗ ಯಮನಪ್ಪ ನಿನ್ನೆ ರಾತ್ರಿ ನನಗೆ ಸ್ವಲ್ಪ ಸಾಲವಾಗಿದೆ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ನನಗೆ ಹಣಕೊಡು ಸಾಲ ತೀರಿಸುತ್ತೆನೆಂದು ಕೇಳಿದ್ದ ಇದಕ್ಕೆ ಒಪ್ಪದ ಸಿದ್ದಪ್ಪ ನಾನು ಹಣ ಕೊಡಲ್ಲಾ ಈ ಹಣ ನನಗೆ ಸೇರಿದ್ದು ನನಗೆ ಹೇಗೆ ಬೇಕು ಹಾಗೆ ಖರ್ಚು ಮಾಡುತ್ತೆನೆಂದು ಅಪ್ಪ ಮಕ್ಕಳು ಇಬ್ಬರು ಸಹ ರಾತ್ರಿ ಜಗಳವಾಡಿದ್ದರು ಆದರೆ, ಇಷ್ಟಕ್ಕೆ ಸುಮ್ಮನಾಗದ ತಂದೆ ಸಿದ್ದಪ್ಪ ರಾತ್ರಿ ಮಲಗಿದ್ದ ವೇಳೆ ಕತ್ತಿಗೆ ಕೊಯಿತಾ (ಚಾಕು) ದಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ

ಇನ್ನು ಮಗನನ್ನ ಕೊಲೆ ಮಾಡಿದ ಪಾಪಿ ತಂದೆ ತಾನು ಏನೂ ಮಾಡಿಲ್ಲ ಎಂದು ಮನೆಯಲ್ಲಿ ಸುಮ್ಮನಿದ್ದ. ಬೆಳಿಗ್ಗೆ ತಾಯಿ ಮಗನನ್ನ ಎಬ್ಬಿಸಲು ಹೋದಾಗ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಎಷ್ಟೇ ಅತ್ತರು ಪಾಪಿ ತಂದೆ ಪಾತ್ರ ಬಾಯಿ ಬಿಟ್ಟಿರಲಿಲ್ಲಾ ಯಾವಾಗ ಪೊಲೀಸರು ತನಿಖೆ ಕೈಗೆತ್ತಿಕೊಂಡರೊ ಆವಾಗ ಆರೋಪಿ ಸಿದ್ದಪ್ಪನಿಗೆ ನಡುಕ ಶುರುವಾಗಿತ್ತು ಪೊಲೀಸ್ ಶ್ವಾನಗಳು ಸಹ ಆರೋಪಿ ಸಿದ್ದಪ್ಪ ಸುತ್ತಲೂ ಸುಳಿದಾಗ ಅನುಮಾನಗೊಂಡ ಪೊಲೀಸರು ಸಿದ್ದಪ್ಪನನ್ನ ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸರ ಮುಂದೆ ಕಳೆದ ರಾತ್ರಿ ತಾನೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ :  ಕೌಟುಂಬಿಕ ಕಲಹ: ಬೆಳಗಾವಿಯಲ್ಲಿ ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪಾಪಿ ಗಂಡ

ಒಟ್ಟಿನಲ್ಲಿ ಹಣ ಹೆಂಡದ ಆಸಗೆ ಪಾಪಿ ತಂದೆ ಹೆತ್ತ ಕರುಳನ್ನೆ ಬರ್ಬರವಾಗಿ ಹತ್ಯೆಗೈದಿದ್ದಾನೆ. ಇತ್ತ ಮಗನು ಇಲ್ಲದೆ ಇತ್ತ ಹಣವು ಇಲ್ಲದೆ ಪಾಪಿ ಜೈಲು ಪಾಲಾಗಿದ್ದಾನೆ. ಇನ್ನು ಗಂಡನನ್ನ ಕಳೆದುಕೊಂಡ ಹೆಂಡತಿ ಹಾಗೂ ತಾಯಿ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ. ಸದ್ಯ ಆರೋಪಿ ಸಿದ್ದಪ್ಪಾ ಅಂಕಲಿ ಪೊಲೀಸರ ಅತಿಥಿಯಾಗಿದ್ದಾನೆ.

 (ವರದಿ : ಲೋಹಿತ್​ ಶಿರೋಳ)

 
First published: February 15, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading