ವಿನಾಃ ಕಾರಣ ಮಕ್ಕಳನ್ನೇ ಕೊಂದ ಪಾಪಿ ತಂದೆ; ರಾಜಧಾನಿಯಲ್ಲೊಂದು ಅಮಾನವೀಯ ಘಟನೆ

ಕೇರಳ ಮೂಲಕ ಜತಿನ್ ತಮಿಳುನಾಡು ಮೂಲದ ಟೆಕ್ಕಿ ಲಕ್ಷ್ಮಿ ಶಂಕರಿಯನ್ನು ಪ್ರೀತಿಸಿ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಲಕ್ಷ್ಮಿ ಕೆಲಸಕ್ಕೆ ಹೋಗುತ್ತಿದ್ದರೆ,  ಈತ ಮಾತ್ರ ಎಲ್ಲೂ ಹೋಗದೆ ಮನೆಯಲ್ಲೇ ಸೈಕೋ ರೀತಿ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಗಂಡ ಹೆಂಡತಿ ನಡುವೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾರ್ಚ್ 21); ಮಕ್ಕಳು ಹೇಳಿದಂತೆ ಕೇಳುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ ಉಸಿರು ಗಟ್ಟಿಸಿ ಕೊಲೆ ಮಾಡಿರುವ ಹೇಯ ಕೃತ್ಯ ರಾಜಧಾನಿಯ ಹುಲಿಮಾವಿನಲ್ಲಿ ನಡೆದಿದೆ. 

ಹುಳಿಮಾವು ಠಾಣೆಯ ಅಕ್ಷಯನಗರದ ಹನಿ ಡೀವ್ ಅಪಾರ್ಟ್ಮೆಂಟ್ ನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು,  ತೌಶಿನಿ( 3) ಮತ್ತು ಶಾಸ್ತಾ(1) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಜತಿನ್ (35) ಮಕ್ಕಳನ್ನು ಧಾರುಣವಾಗಿ ಕೊಲೆ ಮಾಡಿರುವ ಸೈಕೋ ಪೀಡಿತ ತಂದೆ.

ಕೇರಳ ಮೂಲಕ ಜತಿನ್ ತಮಿಳುನಾಡು ಮೂಲದ ಟೆಕ್ಕಿ ಲಕ್ಷ್ಮಿ ಶಂಕರಿಯನ್ನು ಪ್ರೀತಿಸಿ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಲಕ್ಷ್ಮಿ ಕೆಲಸಕ್ಕೆ ಹೋಗುತ್ತಿದ್ದರೆ,  ಈತ ಮಾತ್ರ ಎಲ್ಲೂ ಹೋಗದೆ ಮನೆಯಲ್ಲೇ ಸೈಕೋ ರೀತಿ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಗಂಡ ಹೆಂಡತಿ ನಡುವೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ.

ನಿನ್ನೆಯೂ ಸಹ ಲಕ್ಷ್ಮಿ ಕೆಲಸಕ್ಕೆ ಹೋಗಿದ್ದಾರೆ. ಆದರೆ, ಮನೆಯಲ್ಲೇ ಇದ್ದ ಜತಿನ್ ಮಕ್ಕಳು ತಾನು ಹೇಳಿದ್ದು ಕೇಳಿಲ್ಲ ಎಂಬ ಕಾರಣಕ್ಕೆ ಕತ್ತು ಹಿಸುಕಿ ಧಾರುಣವಾಗಿ ಕೊಲೆ ಮಾಡಿದ್ದಾನೆ.  ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ಕೊರೋನಾ ಸೋಂಕಿಗೆ ಇಟಲಿಯಲ್ಲಿ ಒಂದೇ ದಿನ 600 ಸಾವು; ತುತ್ತು ಅನ್ನಕ್ಕೂ ಪರದಾಟ
First published: