Mandya Murder: ಅಯ್ಯೋ ಪಾಪಿಗಳ.. ಆಸ್ತಿ, ಹಣಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ ಮಕ್ಕಳು..!

ಜಮೀನು ಮಾರಲು ಮರಿಕಾಳಯ್ಯ ಮನಸ್ಸು ಮಾಡಿದ ಬಳಿಕ ಒಂದು ಎಕರೆ ಜಮೀನು 30 ಲಕ್ಷಕ್ಕೆ ವ್ಯಾಪಾರವಾಗಿತ್ತು. ಈ ವೇಳೆ ಮಕ್ಕಳಿಗೆ ಮರಿಕಾಳಯ್ಯ ಒಂದು ಕಂಡಿಷನ್ ಹಾಕಿದ್ದಾರೆ. 30 ಲಕ್ಷದಲ್ಲಿ ಇಬ್ಬರು ಮಕ್ಕಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ತಮಗೆ 10 ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ್ದಾರೆ.

ತಂದೆಯ ಕೊಲೆ ಆರೋಪಿ ಮಕ್ಕಳು

ತಂದೆಯ ಕೊಲೆ ಆರೋಪಿ ಮಕ್ಕಳು

  • Share this:
ಮಂಡ್ಯ: ಹೆತ್ತ ತಂದೆ-ತಾಯಿಯೇ  (Father and Mother)  ದೇವರು (God) ಅನ್ನೊ ಕಾಲ ಬದಲಾಗಿದೆ. ಹಣ (Money) ನೋಡಿದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಕಾಲ ಬಂದು ಬಿಟ್ಟಿದೆ.  ಇದಕ್ಕೆ ತಾಜಾ ಉದಾಹರಣೆ ಅಂದರೆ ಜಿಲ್ಲೆಯ ಕೆರೆಮೇಗಳಕೊಪ್ಪಲು ಗ್ರಾಮದಲ್ಲಿ ಆಸ್ತಿಗಾಗಿ (Property) ಸ್ವಂತ ತಂದೆಯನ್ನೇ  ಇಬ್ಬರು ಮಕ್ಕಳು ಬರ್ಬರವಾಗಿ ಹತ್ಯೆ (Murder) ಮಾಡಿದ್ದಾರೆ. ಇಷ್ಟಕ್ಕೂ ಈ ಹತ್ಯೆ ನಡೆದಿರೋದು ಆಸ್ತಿ, ಹಣಕ್ಕಾಗಿ. ಕಾಲ ಬದಲಾಗಿದೆ. ಮಕ್ಕಳು, ಮೊಮ್ಮಕ್ಕಳು ಅಂತ ಸಿಕ್ಕಾಪಟ್ಟೆ ಆಸ್ತಿ ಮಾಡೋರಿಗೆ ಈ ಘಟನೆ ನಿಜಕ್ಕೂ ಆತಂಕ ಉಂಟು ಮಾಡಲಿದೆ. ಯಾಕಂದ್ರೆ  ಕಷ್ಟ ಪಟ್ಟು ಮಾಡಿದ ಆಸ್ತಿಯೇ ಮುಂದೊಂದು ದಿನ ನಿಮಗೆ ಮುಳುವಾಗಬಹುದು. ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಯೇ ನಿಮ್ಮ ನೆಮ್ಮದಿಯನ್ನ ಕಿತ್ತುಕೊಳ್ಳಬಹುದು. ಇದಕ್ಕೆ ಉದಾಹರಣೆ ಎಂಬಂತೆ ಶ್ರೀರಂಗಪಟ್ಟಣದ ಕೆರೆಮೇಗಳಕೊಪ್ಪಲು ಗ್ರಾಮದ ಮರಿಕಾಳಯ್ಯ ತಮ್ಮ ಸ್ವಂತ ಮಕ್ಕಳಿಂದಲೇ ಹತ್ಯೆಗೀಡಾಗಿದ್ದಾರೆ. ಹಣ, ಆಸ್ತಿಯ ದಾಹಕ್ಕೆ ಬಿದ್ದ ಮಕ್ಕಳು ಅಪ್ಪನ ಕಥೆ ಮುಗಿಸಿದ್ದಾರೆ. 

ಇದನ್ನೂ ಓದಿ: Hubli: ಕಟ್ಟಿಗೆ ತರಲು ಬಂದ ಕುರಿಗಾಹಿ ಮಹಿಳೆ.. ನಿರ್ಜನ ಪ್ರದೇಶದಲ್ಲಿ ನಡೆಯಬಾರದ್ದು ನಡೆದೇ ಹೋಯ್ತು!

ಅಪ್ಪನ ಜಮೀನಿನ ಮೇಲೆ ಮಕ್ಕಳ ಕಣ್ಣು 

ಬೆಂಗಳೂರಿನಲ್ಲಿ ಡ್ರೈವರ್ ಆಗಿದ್ದ ಮರಿಕಾಳಯ್ಯ ವಯಸ್ಸಾದ ಹಿನ್ನೆಲೆ ಕೆಲ ವರ್ಷಗಳ ಹಿಂದೆಯೇ ತಮ್ಮ ಸ್ವಗ್ರಾಮವಾದ ಕೆರೆಮೇಗಳಕೊಪ್ಪಲು ಗ್ರಾಮಕ್ಕೆ ಬಂದು ಸೆಟೆಲ್ ಆಗಿದ್ದರು. ಬೆಂಗಳೂರಿನಲ್ಲಿ ಇದ್ದಾಗ ಒಂದಷ್ಟು ಹಣ ಸಂಪಾದಿಸಿಕೊಂಡು ಆ ಹಣದಲ್ಲಿ ಊರಿನಲ್ಲಿ ಜೀವನ ಸಾಗಿಸ್ತಿದ್ರು. ಇದರ ಜೊತೆಗೆ ಮರಿಕಾಳಯ್ಯ ಅವರಿಗೆ ಪಿತ್ರಾರ್ಜಿತವಾಗಿ ಸುಮಾರು 7 ರಿಂದ 8 ಎಕರೆ ಜಮೀನು ಸಹ ಬಂದಿತ್ತು. ಹೀಗಾಗಿ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಾ ನೆಮ್ಮದಿ ಜೀವನ ಸಾಗಿಸುತ್ತಿದ್ರು. ಆದ್ರೆ ಈ ನಡುವೆ ಮರಿಕಾಳಯ್ಯ ಅವರ ಇಬ್ಬರು ಮಕ್ಕಳಾದ ಶಶಿಕುಮಾರ್ ಮತ್ತು ರಾಜೇಶ್ ಜಮೀನು ಮಾರಿ ಹಣ ನೀಡುವಂತೆ ಮರಿಕಾಳಯ್ಯ ಅವರನ್ನ ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದ ಮರಿಕಾಳಯ್ಯ ಸುಮಾರು ಒಂದು ಎಕರೆ ಜಮೀನು ಮಾರಾಟ ಮಾಡಲು ನಿರ್ಧರಿಸಿದ್ದರು.

ತಂದೆಯನ್ನೇ ಕೊಂದ ಪಾಪಿ ಮಕ್ಕಳು

ಇನ್ನು ಜಮೀನು ಮಾರಲು ಮರಿಕಾಳಯ್ಯ ಮನಸ್ಸು ಮಾಡಿದ ಬಳಿಕ ಒಂದು ಎಕರೆ ಜಮೀನು 30 ಲಕ್ಷಕ್ಕೆ ವ್ಯಾಪಾರವಾಗಿತ್ತು. ಈ ಸಂದರ್ಭ ಮಕ್ಕಳ ಬಳಿ ಮರಿಕಾಳಯ್ಯ ಒಂದು ಕಂಡಿಷನ್ ಹಾಕಿದ್ದಾರೆ. 30 ಲಕ್ಷದಲ್ಲಿ ಇಬ್ಬರು ಮಕ್ಕಳಿಗೆ ತಲಾ ಹತ್ತು ಲಕ್ಷ ರೂಪಾಯಿ ಹಾಗೂ ತಮಗೆ ಹತ್ತು ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ್ದಾರೆ. ಇದಾದ ಬಳಿಕ ಶ್ರೀರಂಗಪಟ್ಟಣದ ಉಪ ನೊಂದಣಿ ಕಚೇರಿ ಬಳಿ ರಿಜಿಸ್ಟ್ರೇಷನ್ ಸಂದರ್ಭ ಮಕ್ಕಳು ತನ್ನ ಪಾಲಿನ ಹಣ ಕೊಡದಿದ್ದಾಗ ಮರಿಕಾಳಯ್ಯ ಅಲ್ಲಿಂದ ವಾಪಸ್ಸ್ ಊರಿಗೆ ಆಗಮಿಸಿದ್ದಾರೆ. ನಂತರ ಮಕ್ಕಳ ಬಗ್ಗೆ ತಿಳಿಸಿದಿದ್ದ ಮರಿಕಾಳಯ್ಯ, ಅರಕೆರೆ ಪೊಲೀಸ್ ಠಾಣೆಗೆ ತೆರಳಿ ಮಕ್ಕಳಿಂದ ಅಪಾಯ ಇರುವುದಾಗಿ ದೂರನ್ನ ಸಹ ನೀಡಿದ್ದರು. ಇದಾದ ಬಳಿಕ ಗ್ರಾಮಕ್ಕೆ ಬಂದ ಮಕ್ಕಳಿಬ್ಬರು ಚಾಕುವಿನಿಂದ ಮರಿಕಾಳಯ್ಯನ ಹೊಟ್ಟೆ ಭಾಗಕ್ಕೆ ಎರಡ್ಮೂರು ಬಾರಿ ಇರಿದಿದ್ದಾರೆ.

ಇದನ್ನೂ ಓದಿ: "ನನಗೆ ಇರುವ AIDS ನನ್ನ ಹೆಂಡ್ತಿಗೂ ಬರಲಿ" ಅಂತ ಈ ಪಾಪಿ ಮಾಡಿದ್ದೇನು? ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ!

ಇನ್ನು ಚಾಕು ಇರಿತಕ್ಕೊಳಗಾದ ಮರಿಕಾಳಯ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ಕಂಡ ಗ್ರಾಮಸ್ಥರು, ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮರಿಕಾಳಯ್ಯ ಮೃತಪಟ್ಟಿದ್ದಾರೆ‌. ಇನ್ನು ಸ್ವಂತ ಅಪ್ಪನಿಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಮಕ್ಕಳು ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು. ಆದ್ರೆ ಮಂಡ್ಯ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.  ಮಕ್ಕಳೇ ತಂದೆಯನ್ನು ಕೊಲೆ ಮಾಡಿರುವುದಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

(ವರದಿ: ಸುನೀಲ್ ಗೌಡ )
Published by:Kavya V
First published: