HOME » NEWS » State » FATHER IN LAW SHOOT HIS DAUGHTER IN LAW IN KODAGU SESR

ದನ ಕಟ್ಟುವ ವಿಚಾರಕ್ಕೆ ಸೊಸೆಯೊಂದಿಗೆ ಜಗಳ; ಗುಂಡು ಹಾರಿಸಿದ ಮಾವ

ಸೊಸೆ ಜೊತೆ ಮಾತಿನ ಚಕಮಕಿಯಿಂದ ಸಿಟ್ಟಾದ ಅಯ್ಯಪ್ಪ  ಸಿಂಗಲ್ ಬ್ಯಾರಲ್ ಗನ್ ನಿಂದ  ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಸೊಸೆ  ಎಡಗೈ ತೋಳಿಗೆ ಬಿದ್ದಿದ್ದರೆ, ಮತ್ತೊಂದು ಗುಂಡು ಎದೆ ಭಾಗಕ್ಕೆ ಹೊಕ್ಕಿದೆ.

news18-kannada
Updated:November 5, 2020, 9:39 PM IST
ದನ ಕಟ್ಟುವ ವಿಚಾರಕ್ಕೆ ಸೊಸೆಯೊಂದಿಗೆ ಜಗಳ; ಗುಂಡು ಹಾರಿಸಿದ ಮಾವ
ಸಾಂದರ್ಭಿಕ ಚಿತ್ರ
  • Share this:
ಕೊಡಗು(ನ.5): ದನ ಕಟ್ಟುವ ಕೊಟ್ಟಿಗೆ ವಿಚಾರಕ್ಕಾಗಿ ಮಾತಿನ ಚಕಮಕಿ ನಡೆದು ಸೊಸೆ ಮೇಲೆ ಮಾವ ಗುಂಡಿನ ದಾಳಿ ನಡೆಸಿರುವ ದಾರುಣ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೆಟ್ಟದ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಅಯ್ಯಪ್ಪ ಹಲ್ಲೆ ಮಾಡಿದ ವ್ಯಕ್ತಿ. ಸೊಸೆ ತೀರ್ಥ ಗಂಭೀರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಅಯ್ಯಪ್ಪ ತಮ್ಮಿಬ್ಬರು ಮಕ್ಕಳೊಂದಿಗೆ ತಲೆ ಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ದನಗಳನ್ನು ಕಟ್ಟುವ ವಿಚಾರಕ್ಕೆ ಆರಂಭವಾದ ಜಗಳ ಕಡೆಗೆ ಆಸ್ತಿವಿವಾದಕ್ಕೆ ತಿರುಗಿದೆ. ಇದರಿಂದ ಕೋಪಗೊಂಡ ಅಯ್ಯಪ್ಪ ಗುಂಡು ಹಾರಿಸಿದ್ದಾರೆ.  ಸೊಸೆಯ ಮಾತಿನಿಂದ ಸಿಟ್ಟಾದ ಅಯ್ಯಪ್ಪ  ಸಿಂಗಲ್ ಬ್ಯಾರಲ್ ಗನ್ ನಿಂದ  ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಸೊಸೆ  ಎಡಗೈ ತೋಳಿಗೆ ಬಿದ್ದಿದ್ದರೆ, ಮತ್ತೊಂದು ಗುಂಡು ಎದೆ ಭಾಗಕ್ಕೆ ಹೊಕ್ಕಿದೆ.

ತೋಟದ ಕಡೆಗೆ ಹೋಗಿದ್ದ ಪತಿ ಹೂವಯ್ಯ ಮನೆಗೆ ಕಡೆಗೆ ಬಂದು ನೋಡಿದಾಗ ಪತ್ನಿ ತೀರ್ಥ ರಕ್ತದ ಮಡುವಿನಲ್ಲಿ ಬಿದ್ದು ಹೊರಡುತ್ತಿದ್ದು ಕಂಡಿದೆ. ತಕ್ಷಣವೇ ಹೂವಯ್ಯ ತೀವ್ರ ರಕ್ತಸ್ರಾವವಾಗುತ್ತಿದ್ದ ಹೆಂಡತಿಯನ್ನು ಸೋಮವಾರಪೇಟೆ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಬಳಿಕ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನು ಓದಿ: ಮುಳಬಾಗಿಲು ನಗರಸಭೆಯಲ್ಲಿ ಜೆಡಿಎಸ್​ ಬೆಂಬಲಿಸಿದ ಸಚಿವ ನಾಗೇಶ್ ವಿರುದ್ಧ ತೆನೆ ನಾಯಕರು ಕಿಡಿ​

ಎಡಗೈ ತೋಳಿಗೆ ಗಂಭೀರ ಪೆಟ್ಟು ಬಿದ್ದಿರುವ ಕಾರಣ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಗುಂಡು ಹಾರಿಸಿರುವ ವಿಷಯ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ತೀರ್ಥ ಅವರ ಪತಿ ಹೂವಯ್ಯ ಅವರು ನೀಡಿರುವ ದೂರಿನ ಮೇರೆಗೆ ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಅಯ್ಯಪ್ಪನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Published by: Seema R
First published: November 5, 2020, 9:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories