ಯಾರಿಗೆ ತಾನೇ ತಾವು ಕಳೆದುಕೊಂಡ ತುಂಬಾ ಅಮೂಲ್ಯವಾದ ವಸ್ತು ತುಂಬಾ ವರ್ಷಗಳ ನಂತರ ಮರಳಿ ಪಡೆದುಕೊಂಡರೆ ಖುಷಿ ಆಗುವುದಿಲ್ಲ ಹೇಳಿ? ಬೆಂಗಳೂರು ನಗರದಲ್ಲಿಯೂ (Bengaluru Urban) ಇದೇ ರೀತಿಯ ಘಟನೆಯೊಂದು ನಡೆದಿದೆ. ಇಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ (Retired Bank Officer) ಎನ್. ಶ್ರೀನಿವಾಸನ್ ಅವರು ತಮ್ಮ ಕಳೆದು ಹೋದ ಪ್ರೀತಿಯ ಮೋಟಾರ್ ಬೈಕ್ (Motor Bike) ಅನ್ನು 25 ವರ್ಷಗಳ ನಂತರ ಮತ್ತೆ ನೋಡುತ್ತಾರೆ ಎಂದು ತಮ್ಮ ಕನಸಿನಲ್ಲಿಯೂ ಸಹ ಊಹಿಸಿರಲಿಲ್ಲ ಎಂದೆನಿಸುತ್ತದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 25 ವರ್ಷಗಳ ಹಿಂದೆ ಕಳುವಾಗಿದ್ದ ಅವರ ಮೋಟಾರ್ ಬೈಕ್ ಅವನ ಮಗನ ನಿರಂತರ ಪ್ರಯತ್ನಗಳಿಂದ ಮತ್ತೆ ಅವರ ಕೈ ಸೇರಿದೆ. ಕಳೆದು ಹೋದ ಬೈಕ್ ತನ್ನ ಹೆಬ್ಬಾಳದಲ್ಲಿರುವ ಮನೆಯ ಮುಂದೆ ನಿಂತಿರುವುದನ್ನು ನೋಡಿದ ಶ್ರೀನಿವಾಸನ್ ಅವರಿಗೆ ಇದು ಕನಸೋ, ನನಸೋ ತಿಳಿಯದಾಗಿದೆ.
75 ವರ್ಷದ ಶ್ರೀನಿವಾಸನ್ 1971ರಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಖರೀದಿಸಿದ್ದರು. ಅವನು ಅದನ್ನು ತಾತ್ಕಾಲಿಕವಾಗಿ ಸ್ನೇಹಿತನಿಗೆ ನೀಡಿದ ನಂತರ, 1996ರಲ್ಲಿ ಅದನ್ನು ಯಾರೋ ಕಳುವು ಮಾಡಿಕೊಂಡು ಹೋಗಿದ್ದರು. ಅವರ ಸಾಫ್ಟ್ವೇರ್ ಎಂಜಿನಿಯರ್ ಮಗ, 1972ರಲ್ಲಿ ತೆಗೆಸಿಕೊಂಡ ಬೈಕಿನ ಕಪ್ಪು ಮತ್ತು ಬಿಳಿ ಛಾಯಾಚಿತ್ರ ಇಟ್ಟುಕೊಂಡು ಸುಮಾರು 15 ವರ್ಷಗಳ ಹಿಂದೆ ಶ್ರೀನಿವಾಸನ್ ಅವರ ದ್ವಿಚಕ್ರ ವಾಹನವನ್ನು ಹುಡುಕಲು ಶುರು ಮಾಡಿದರು.
2006ರಲ್ಲಿ ಇವರ ಮಗನಾದ ಅರುಣ್ ಶ್ರೀನಿವಾಸನ್ ಅವರು ತಮ್ಮ ತಂದೆಯ ಕಳೆದು ಹೋದ ಬೈಕಿನ ಬಗ್ಗೆ ಯೋಚಿಸಲು ಶುರು ಮಾಡಿದರು. 1971ರಲ್ಲಿ ಅವರ ತಂದೆ ಹಾಸನದಲ್ಲಿ ಕೆಲಸ ಮಾಡುತ್ತಿರುವಾಗ ಈ ಬೈಕ್ ಕೊಂಡು ಕೊಂಡಿದ್ದರು. ಅವರು ಆ ಬೈಕ್ ಮೇಲೆ ಕುಳಿತುಕೊಂಡು ತೆಗೆಸಿಕೊಂಡ ಒಂದು ಫೋಟೋ ಮಾತ್ರ ಅವರ ಬಳಿ ಇತ್ತು. ಅದರಲ್ಲಿ ಆ ಬೈಕ್ ಸಂಖ್ಯೆ ಚೆನ್ನಾಗಿ ಕಾಣುವಂತಿತ್ತು. ಆ ಬೈಕ್ನ ಸಂಖ್ಯೆ MYH 1731 ಆಗಿತ್ತು ಅಂತ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.
ಅರುಣ್ ಆ ಸಂಖ್ಯೆಯನ್ನು ಇಟ್ಟುಕೊಂಡು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿರುವ ಗ್ಯಾರೇಜ್ಗಳಲ್ಲಿ ಆ ಬೈಕ್ ಅನ್ನು ಹುಡುಕಿದರು. ಆರ್ಟಿಒದಲ್ಲಿ ಸಹ ಹೋಗಿ ಆ ಬೈಕ್ ಬಗ್ಗೆ ವಿಚಾರಿಸಿದರು. ಕೊನೆಗೆ ಪ್ರಯತ್ನದಿಂದಾಗಿ ಆ ಬೈಕ್ ಅರುಣ್ ಅವರಿಗೆ ಮತ್ತೆ ಸಿಕ್ಕಿದ್ದು, ಅದನ್ನು ಅವರ ತಂದೆಗೆ ನೀಡಿ ಅವರನ್ನು ತುಂಬಾನೇ ಖುಷಿ ಪಡೆಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೊನೆಗೆ ಪರಿವಾಹನ್ ಸೇವಾ ಪೋರ್ಟಲ್ ಸಹಾಯದಿಂದ ಕೊನೆಗೂ ಅರುಣ್ಗೆ ಅವರ ತಂದೆಯ ಕಳೆದು ಹೋದ ಬೈಕ್ ಸಿಕ್ಕಿದೆ.
“2021ರಲ್ಲಿ ನಾನು ಬೈಕ್ನ ನೋಂದಾಯಿಸಿದ ವಿವರಗಳನ್ನು ಕಲೆಹಾಕಿ ಅದನ್ನು ಹುಡುಕಾಡಿದೆ ಮತ್ತು ಆಗ ಈ ಬೈಕ್ ಮೇಲೆ ಮಾಡಿಸಿದ ವಿಮಾ ಪಾಲಿಸಿ ಇದ್ದದ್ದನ್ನು ನಾನು ನೋಡಿದೆ” ಎಂದು ಅರುಣ್ ಹೇಳಿದರು. ಆನಂತರ ಈ ಬೈಕ್ನ ಪ್ರಸ್ತುತ ಮಾಲೀಕರನ್ನು ಹುಡುಕಿಕೊಂಡು ಹೋಗಿ ಈ ಕಥೆಯೆಲ್ಲವನ್ನು ಅವರಿಗೆ ಹೇಳಿದರು. ಆಗ ಈ ಬೈಕ್ನ ಪ್ರಸ್ತುತ ಮಾಲೀಕರಾಗಿದ್ದ ಟಿ ನರಸೀಪುರದ ರೈತರೊಬ್ಬರು ಈ ಬೈಕ್ ಅನ್ನು ಅವರು 2015ರಲ್ಲಿ ಸ್ಥಳೀಯ ಆಟೋಮೊಬೈಲ್ ಡೀಲರ್ವೊಬ್ಬರಿಂದ ಖರೀದಿಸಿದೆ ಎಂದು ಹೇಳಿದರು.
ಆ ಡೀಲರ್ ಈ ಬೈಕನ್ನು ಪೊಲೀಸರು ನಡೆಸಿದ ಕಳುವಾದ ಬೈಕ್ಗಳನ್ನು ಪತ್ತೆಹಚ್ಚಿದಾಗ ಅದನ್ನು ಯಾರು ತೆಗೆದುಕೊಂಡು ಹೋಗದೆ ಇದ್ದ ಸಮಯದಲ್ಲಿ ಹರಾಜು ಮಾಡಲಾಗುತ್ತದೆ. ಆ ಹರಾಜಿನಲ್ಲಿ ಈ ಬೈಕ್ ಅನ್ನು ಕೊಂಡುಕೊಂಡಿದ್ದಾರೆ ಎಂದು ಹೇಳಿದರು.
ಆ ರೈತ ಈ ಬೈಕನ್ನು ಮಾರುವುದಾಗಿ ಹೇಳಿದಾಗ ಅರುಣ್ ಅದನ್ನು ಕೊಂಡು ಕೊಂಡು ಅದನ್ನು ರಿಪೇರಿ ಮಾಡಿಸಿ ತಂದು ತನ್ನ ತಂದೆಗೆ ಒಪ್ಪಿಸಿದ್ದಾನೆ. "ನನ್ನ ಮಗ ನನ್ನ ಕಳೆದುಹೋದ ಬೈಕ್ ಅನ್ನು ಮತ್ತೆ ನನಗೆ ತಂದು ಕೊಟ್ಟಿದ್ದು, ನನಗೆ ತುಂಬಾನೇ ಖುಷಿ ಟ್ಟಿದೆ" ಎಂದು ಟೈಮ್ಸ್ ಆಫ್ ಇಂಡಿಯಾಗೆ ಶ್ರೀನಿವಾಸನ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ