Vijayapura: ಜಮೀನು ಮಾರಲು ಒಪ್ಪದ ಪತ್ನಿ; ಎಗ್ ರೈಸ್ ತಿನ್ನಿಸಿ 2 ವರ್ಷದ ಮಗನನ್ನ ಕೊಂದ ತಂದೆ, ಮಗಳು ಗಂಭೀರ

ಚಂದ್ರಶೇಖರ್ ಮಕ್ಕಳಿಗೆ ಎಗ್ ರೈಸ್ ತಂದುಕೊಟ್ಟಿದ್ದಾನೆ. ಸಾವಿತ್ರಿ ಮಕ್ಕಳಿಬ್ಬರಿಗೂ ಎಗ್  ರೈಸ್ ತಿನ್ನಲು ನೀಡಿ ಮನೆಗೆಲಸದಲ್ಲಿ ತೊಡಗಿಕೊಂಡಿದ್ದರು. ಎಗ್ ರೈಸ್ ತಿಂದ ಮಕ್ಕಳ ಬಾಯಿಂದ ನೊರೆ, ವಾಂತಿ  ಮಾಡಿಕೊಳ್ಳಲಾರಂಭಿಸಿದ್ದಾರೆ.

ಆರೋಪಿ ಚಂದ್ರಶೇಖರ್

ಆರೋಪಿ ಚಂದ್ರಶೇಖರ್

  • Share this:
ಜಮೀನು ಮಾರಲು ಪತ್ನಿ (Wife) ಒಪ್ಪದಿದ್ದಕ್ಕೆ ಕೋಪಗೊಂಡ ಪತಿ ಎಗ್  ರೈಸ್ ನಲ್ಲಿ ವಿಷ (Poison) ಬೆರಿಸಿ ಮಕ್ಕಳಿಗೆ (Children) ತಿನ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ (Talikoti, Vijayapura) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ಮಕ್ಕಳಲ್ಲಿ 2 ವರ್ಷದ ಮಗ (Son) ಸಾವನ್ನಪ್ಪಿದ್ರೆ, ಐದು ವರ್ಷದ ಮಗಳ (Daughter) ಆರೋಗ್ಯ ಗಂಭೀರವಾಗಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ತಾಳಿಕೋಟೆ ನಿವಾಸಿ ಚಂದ್ರಶೇಖರ್ ಅಗಸನಾಳ ಮಕ್ಕಳಿಗೆ ವಿಷ ಹಾಕಿದ ತಂದೆ. ಚಂದ್ರಶೇಖರ್ ಮೂಲತಃ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದವನು. ಸದ್ಯ ಪತ್ನಿ ಸಾವಿತ್ರಿ ನೀಡಿದ ದೂರಿನ ಅನ್ವಯ ಪತಿ ಚಂದ್ರಶೇಖರ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಚಂದ್ರಶೇಖರ್ ಕುಟುಂಬದೊಂದಿಗೆ ತಾಳಿಕೋಟಿಯಲ್ಲಿ ವಾಸವಾಗಿದ್ದನು. ಇಬ್ಬರು ಮಕ್ಕಳನ್ನು ಪತ್ನಿಯ ತವರೂರಾದ ಗೋನಾಳ ಹೆಚ್ ಎಸ್ ನಲ್ಲಿ ಬಿಟ್ಟಿದ್ದರು. ಕೆಲ ದಿನಗಳಿಂದ ಸಾವಿತ್ರಿ ತವರು ಮನೆಯಲ್ಲಿದ್ದರು. ಚಂದ್ರಶೇಖರ್ ಸಾಲ ಮಾಡಿಕೊಂಡಿದ್ದರಿಂದ ಆತ ತನ್ನ ಸೋದರರಾದ ಮೌನೇಶ್ ಮತ್ತು ಹನುಮಂತು ಜೊತೆ ಗೋನಾಳಕ್ಕೆ ಬಂದಿದ್ದನು.

ಪತ್ನಿಯ ಮನೆಯಲ್ಲಿಯೇ ಉಳಿದುಕೊಂಡ ಚಂದ್ರಶೇಖರ್

ಈ ವೇಳೆ ಎಲ್ಲರೂ ತಮ್ಮ ಆಸ್ತಿ ಮಾರಲು ಮುಂದಾಗಿದ್ದರು. ಆದ್ರೆ ಸಾವಿತ್ರಿ ಆಸ್ತಿ ಮಾರಾಟ ಮಾಡಲು ಒಪ್ಪಿರಲಿಲ್ಲ. ದುಡಿದು ಸಾಲ ತೀರಿಸೋದಾಗಿ ಸಾವಿತ್ರಿ ಹೇಳಿದ್ದರಿಂದ ಚಂದ್ರಶೇಖರ್ ಸೋದರರು ಹಿಂದಿರುಗಿದ್ದರು. ಆದ್ರೆ ಚಂದ್ರಶೇಖರ್ ಪತ್ನಿಯ ಮನೆಯಲ್ಲಿಯೇ ಉಳಿದುಕೊಂಡಿದ್ದನು.

ಇದನ್ನೂ ಓದಿ:  Love Breakup: ಪ್ರೀತ್ಸೇ ಅಂದವನು ಪ್ರಾಣ ತೆಗೆಯೋಕೆ ಬಂದ! ಪಾಗಲ್ ಪ್ರೇಮಿ ಗತಿ ಏನಾಯ್ತು ಗೊತ್ತಾ?

ಮಕ್ಕಳಿಗೆ ವಿಷ ಬೆರಸಿದ ಎಗ್ ರೈಸ್ ಕೊಟ್ಟ ಗಂಡ

ಸಂಜೆ ಸುಮಾರು 4 ಗಂಟೆಗೆ ಚಂದ್ರಶೇಖರ್ ಮಕ್ಕಳಿಗೆ ಎಗ್ ರೈಸ್ ತಂದುಕೊಟ್ಟಿದ್ದಾನೆ. ಸಾವಿತ್ರಿ ಮಕ್ಕಳಿಬ್ಬರಿಗೂ ಎಗ್  ರೈಸ್ ತಿನ್ನಲು ನೀಡಿ ಮನೆಗೆಲಸದಲ್ಲಿ ತೊಡಗಿಕೊಂಡಿದ್ದರು. ಎಗ್ ರೈಸ್ ತಿಂದ ಮಕ್ಕಳ ಬಾಯಿಂದ ನೊರೆ, ವಾಂತಿ  ಮಾಡಿಕೊಳ್ಳಲಾರಂಭಿಸಿದ್ದಾರೆ. ಕೂಡಲೇ  ಸಾವಿತ್ರಿ ಕುಟುಂಬಸ್ಥರ ಸಹಾಯದಿಂದ ಮಕ್ಕಳನ್ನು ಮುದ್ದೇಬಿಹಾಳದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಎರಡು ವರ್ಷದ ಶಿವರಾಜ್ ಸಾವನ್ನಪ್ಪಿದ್ದು, 5 ವರ್ಷದ ರೇಣುಕಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ರೇಣುಕಾಳನ್ನು ಹೆಚ್ಚಿನ ಚಿಕಿತ್ಸೆ ಕರೆದೊಯ್ಯುವಂತೆ ಹೇಳಿದ್ದಾರೆ. ಸದ್ಯ ರೇಣುಕಾಳಿಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆ ಮಾಡಿದ್ದು ನಾನೇ ಎಂದ ನೀಚ

ಜೂನ್ 4ರಂದು ತಾಯಿ ಜೊತೆ ಮಗಳ ಚಿಕಿತ್ಸೆಗೆ ಹಣ  ಹೊಂದಿಸುತ್ತಾ ಸಾವಿತ್ರಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಚಂದ್ರಶೇಖರ್, ಎಗ್ ರೈಸ್ ನಲ್ಲಿ ವಿಷ ಬೆರೆಸಿದ್ದಾಗಿ ಹೇಳಿದ್ದಾನೆ. ನಿಮಗೆ ಮೂವರಿಗೆ ತಿನ್ನಿಸಿ, ನಾನು ತಿಂದು ಸಾಯಬೇಕು ಅಂತ ಮನಸ್ಸು ಮಾಡಿದ್ದೆ  ಎಂದು ಹೇಳಿದ. ನಾವೆಲ್ಲರೂ ಮಕ್ಕಳನ್ನು ಕೊಲೆ ಮಾಡಲು ಹೇಗೆ ಮನಸು ಬಂತು ಎಂದು ಬೈದೆವು ಎಂದು ಸಾವಿತ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  Honour Killing: ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ; ಪೋಷಕರಿಂದಲೇ ಹತಳಾದ ಅಪ್ರಾಪ್ತ ಮಗಳು

ಜೂನ್ 2ರಂದು ಪತಿ ನೀಡಿದ ವಿಷ ಮಿಶ್ರಿತ ಎಗ್ ರೈಸ್ ತಿಂದು ಮಗ ಸಾವನ್ನಪ್ಪಿದ್ದಾನೆ. ಸದ್ಯ ಮಗಳು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ನಾನು ಮತ್ತು ನನ್ನ ಮಕ್ಕಳನ್ನು ಸಾಯಿಸಲು ಗಂಡ ಚಂದ್ರಶೇಖರ್ ಪ್ಲಾನ್ ಮಾಡಿದ್ದ. ಅವನಿಂದಲೇ ಮಗನನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ಪತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಾವಿತ್ರಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
Published by:Mahmadrafik K
First published: