• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yadagiri: ನಿನ್ನೆ ಮಗ, ಇವತ್ತು ಅಪ್ಪ; ಪುತ್ರನ ಸಾವಿನ ಆಘಾತದಿಂದ ತಂದೆ ಆತ್ಮಹತ್ಯೆ

Yadagiri: ನಿನ್ನೆ ಮಗ, ಇವತ್ತು ಅಪ್ಪ; ಪುತ್ರನ ಸಾವಿನ ಆಘಾತದಿಂದ ತಂದೆ ಆತ್ಮಹತ್ಯೆ

ಮೃತ ಶಿವಕುಮಾರ್ ಮತ್ತು ಬಸವರಾಜ್

ಮೃತ ಶಿವಕುಮಾರ್ ಮತ್ತು ಬಸವರಾಜ್

ಇಂದು ಬೆಳಗಿನ ಜಾವ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ  ಭೀಮರಾಯನಗುಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Share this:

ಯಾದಗಿರಿ: ಪುತ್ರನ ಸಾವಿನಿಂದ (Son Death) ನೊಂದ ತಂದೆ ಆತ್ಮಹತ್ಯೆ (Father Suicide) ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ (Shahapur, Yadagiri) ತಾಲೂಕಿನ ಮದ್ದರಕಿ ಗ್ರಾಮದದಲ್ಲಿ ನಡೆದಿದೆ. ಬಸವರಾಜ್ ಬಿರಾದರ್ ಆತ್ಮಹತ್ಯೆಗೆ ಶರಣಾದ ತಂದೆ. ಇದು ಬೆಳಗಿನ ಜಾವ ಬಾವಿಗೆ ಜಿಗಿದು ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಬಸವರಾಜ್ ಪುತ್ರ ಶಿವಕುಮಾರ್ ಬಿರಾದರ್ (34) ಶುಕ್ರವಾರ ಗ್ರಾಮದ ಹೊರವಲಯದಲ್ಲಿ ನಡೆದ ಅಪಾಘತದಲ್ಲಿ ಮೃತರಾಗಿದ್ದರು. ಶುಕ್ರವಾರ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ (Bike Accident) ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಶಿವಕುಮಾರ್ ಸಾವನ್ನಪ್ಪಿದ್ದರು. ಶುಕ್ರವಾರ ಶಿವಕುಮಾರ್ ಅಂತ್ಯಕ್ರಿಯೆ (Funeral) ನಡೆಸಲಾಗಿತ್ತು. ಅಂತ್ಯಕ್ರಿಯೆ ವೇಳೆ ಮಗ ಹೋದ ಮೇಲೆ ನಾನು ಇರಲ್ಲ ಎಂದು ಬಸವರಾಜ್ ನೋವು ತೋಡಿಕೊಂಡಿದ್ದರು.


ಇಂದು ಬೆಳಗಿನ ಜಾವ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ  ಭೀಮರಾಯನಗುಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾರು ಧಗ ಧಗ


ಆಕಸ್ಮಿಕ ಬೆಂಕಿ ಬಿದ್ದು ಕಾರು ಸಂಪೂರ್ಣ ಬೆಂಕಿಗಾಹುತಿ ಆಗಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಸೇರುವೆಗಾರನ ಪಾಳ್ಯ ಗ್ರಾಮದ ಬಳಿ ನಡೆದಿದೆ. ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಚಾಕುವಿನಿಂದ ಇರಿದು ಮಹಿಳೆಯ ಕೊಲೆ


ಅಪರಿಚಿತರು ಮಹಿಳೆಯ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದ ಘಟನೆ ಬಾಗಲಕೋಟೆಯ ತೇರದಾಳದ ಹೊಸ ಪುರಸಭೆ ಹಿಂಭಾಗದಲ್ಲಿ ನಡೆದಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕಸ್ತೂರಿ ನಾಗಪ್ಪ ಹೊಸಟ್ಟಿ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ


ಚಾಕು ಇರಿತ ಪ್ರಕರಣ ಗುರುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದನ ಮೇಯಿಸಲು ಹೊಸ ಪುರಸಭೆ ಹಿಂದೆ ಹೋದಾಗ ಕೃತ್ಯ ನಡೆದಿದ್ದು ನಿಖರ ಕಾರಣ ತಿಳಿದಿಲ್ಲ. ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೃದ್ಧೆಯ ಮೇಲೆ ಅತ್ಯಾಚಾರ


ಗುಮ್ಮಟ ನಗರಿ ವಿಜಯಪುರ ನಗರದಲ್ಲಿ (Vijayapura City) ಅಮಾನವೀಯ ಕೃತ್ಯ ನಡೆದಿದೆ. ಫೆಬ್ರವರಿ 23ರಂದು 60 ವರ್ಷದ ವೃದ್ಧೆಯನ್ನು (60 Year Old Woman) ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ವಿಜಯಪುರ ಮಹಿಳಾ ಠಾಣೆಯ ಪೊಲೀಸರು (Viajayapura Woman Police Station) ಇಬ್ಬರು ಕಾಮುಕರನ್ನು (Accused Arrest) ಬಂಧಿಸಿ ಜೈಲಿಗಟ್ಟಿದ್ದಾರೆ.




ಬಂಧಿತರಿಬ್ಬರು ವಿಜಯಪುರ ನಗರದ ನಿವಾಸಿಗಳಾಗಿದ್ದಾರೆ. ವಿಜಯಪುರ ನಗರದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಹಾಗೂ ಬಸವ ನಗರ ನಿವಾಸಿ ರವಿ ಬಂಧಿತ ಆರೋಪಿಗಳು. ಇದೀಗ ಇಬ್ಬರು ಕಾಮುಕರು ಕತ್ತಲ ಕೋಣೆ ಸೇರಿದ್ದಾರೆ.


ಫೆಬ್ರವರಿ 23ರ ರಾತ್ರಿ ಸುಮಾರು 9.30ರ ಸಮಯದಲ್ಲಿ ವಿಜಯಪುರ ನಗರದ ವಾಟರ್ ಟ್ಯಾಂಕ್ ಬಳಿ ವೃದ್ಧೆ ಆಟೋ ಹತ್ತಿದ್ದರು. ಅಲ್ಲಿಗೆ ಬಂದ ಆಟೋ ಕಾಮುಕ ಆಟೋ ಚಾಲಕರು ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ರಾತ್ರಿ 10ರಿಂದ 11ರ ವರೆಗೆ ಅತ್ಯಾಚಾರ ಎಸಗಿ ವೃದ್ಧೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.


ಇದನ್ನೂ ಓದಿ: Crime News: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಪುರುಷ ನರ್ಸ್‌ ಬಂಧನ!


ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಕಾಮುಕರ ಬಂಧನ


ವೃದ್ಧೆ ನರಳಾಡೋದನ್ನು ಗಮನಿಸಿದ ಸ್ಥಳೀಯರು 112 ಸಹಾಯವಾಣಿ ಕರೆ ಮಾಡಿ ವಿಷಯ ತಿಳಿಸಲಾಗಿತ್ತು. ವಿಷಯ ತಿಳಿದ ಪೊಲೀಸರು ಸಂತ್ರಸ್ತೆ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ರು. ಈ ಸಂಬಂಧ ದೂರು ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದ  ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ವೃದ್ಧೆಯ ಮಾಹಿತಿ ಹಾಗೂ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ತನಿಖೆ ಕೈಗೊಂಡು ಕಾಮುಕರಿಬ್ಬರನ್ನು ಬಂಧಿಸಿದ್ದಾರೆ.

Published by:Mahmadrafik K
First published: