ಪ್ರೀತಿಸಿ ಮದುವೆಯಾದ ಮಗಳ ಜುಟ್ಟು ಹಿಡಿದು ಎಳೆದಾಡಿದ ತಂದೆ- ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು, ವಿಡಿಯೋ ನೋಡಿ

Viral Video: ತಾವೂ ಎಷ್ಟೇ ವಿರೋಧಿಸಿದರೂ ಸಹ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾದ ಮಗಳನ್ನು ಕಂಡು ಕೆಂಡಾಮಂಡಲಗೊಂಡ ಬಸವರಾಜ ಈ ರೀತಿಯಾಗಿ ವರ್ತಿಸಿದ್ದರೂ ಸಹ ತಂದೆಯ ಆರ್ಭಟಕ್ಕೆ ಹೆಸರದ ಮಗಳು ಸಾರ್ವಜನಿಕರ ನೆರವಿನೊಂದಿಗೆ ಅಪ್ಪನಿಂದ ತಪ್ಪಿಸಿಕೊಂಡು ಗಂಡನನ್ನ ಸೇರಿಕೊಂಡಿದ್ದಾಳೆ.

ಪ್ರೀತಿಸಿ ಮದುವೆಯಾದ ಜೋಡಿ

ಪ್ರೀತಿಸಿ ಮದುವೆಯಾದ ಜೋಡಿ

  • Share this:
ಸಾಮಾನ್ಯವಾಗಿ ನೀವು ಫಿಲ್ಮಗಳಲ್ಲಿ (Film) ಮಗಳ ಪ್ರೇಮಕ್ಕೆ (Daughter Love Story) ವಿರೋಧಿಸಿ, ರಸ್ತೆಯಲ್ಲಿಯೇ ಎಳೆದು ಬಡಿದಾಡಿದ ಸೀನ್​ಗಳನ್ನು ನೋಡಿರುತ್ತೇವೆ. ಆದರೆ ಇಂಥಹದ್ದೇ ಒಂದು ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ. ಪ್ರೀತಿಸಿ ವಿವಾಹವಾದ (Love Marriage) ಮಗಳ ಜುಟ್ಟುಹಿಡಿದು ಎಳೆದಾಡಿ, ಮಗಳ ತಾಳಿ ಕಿತ್ತೆಸೆದ  ಅಪ್ಪನ ವಿರುದ್ದವೇ ಮಗಳು ದೂರು ಕೊಟ್ಟಿದ್ದಾಳೆ.  ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ಚೈತ್ರಾ‌, ಹಲ್ಲರೆ ಗ್ರಾಮದ ಮಹೇಂದ್ರ ಎಂಬಾತನನ್ನ ಕಳೆದ ಒಂದೂವರೆ ವರ್ಷದಿಂದ ಒಬ್ಬರನೊಬ್ಬರನ್ನು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಚೈತ್ರಾಳ ತಂದೆಯೇ ದೊಡ್ಡ ವಿಲನ್ ಎಂದರೆ ತಪ್ಪಾಗಲಾರದು.  

ಏನಿದು ಕಥೆ? ಇಬ್ಬರ ಪ್ರೀತಿಗೆ ತಂದೆ ವಿರೋಧಿಸಿದ್ದರೂ ಸಹ, ಚೈತ್ರಾ ಡಿಸೆಂಬರ್ 8ರಂದು ತಾನು ಪ್ರೀತಿಸುತ್ತಿದ್ದ ಮಹೇಂದ್ರನ ಜೊತೆ‌ ಮದುವೆಯಾಗಿದ್ದಾರೆ, ಆದರೆ ಮಗಳು ತಮ್ಮ ಮಾತು ವಿರೋಧಿಸಿ ಮದುವೆಯಾ ವಿಚಾರ ತಿಳಿದ ತಂದೆ ವಿವಾಹ ನೋಂದಣಿ ಮಾಡಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ಧಾಗ ಆಗ ಅಲ್ಲಿ ಹೈಡ್ರಾಮ ಮಾಡಿದ್ದಾರೆ.  ಕಚೇರಿಯಿಂದ ಆಗಮಿಸಿ ಕೆಲಸ ಮುಗಿಸಿ ಹೊರ ಬರುತ್ತಿದ್ದಂತೆಯೇ ಚೈತ್ರಾಳ ತಂದೆ ಬಸವರಾಜ ನಾಯ್ಕ ಕಚೇರಿ ಎದುರು ಬಂದು ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಹಾಕಿ, ಅವರ ಜುಟ್ಟು ಹಿಡಿದು ಎಳೆದಾಡಿದ್ದು, ಮರಳಿ ಮನೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಇಳಿಕೆ, ಪೆಟ್ರೋಲ್​ ಬೆಲೆ ಸ್ಥಿರ, ಹೆಚ್ಚಾದ ಚಳಿ; ಬೆಳಗಿನ ಟಾಪ್​​ ನ್ಯೂಸ್​​ಗಳು

ರಕ್ಷಣೆ ಕೋರಿ ಪೊಲೀಸರಿಗೆ ದೂರು ನೀಡಿದ ಚೈತ್ರಾ

ತಾವೂ ಎಷ್ಟೇ ವಿರೋಧಿಸಿದರೂ ಸಹ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾದ ಮಗಳನ್ನು ಕಂಡು ಕೆಂಡಾಮಂಡಲಗೊಂಡ ಬಸವರಾಜ ಈ ರೀತಿಯಾಗಿ ವರ್ತಿಸಿದ್ದರೂ ಸಹ ತಂದೆಯ ಆರ್ಭಟಕ್ಕೆ ಹೆಸರದ ಮಗಳು ಸಾರ್ವಜನಿಕರ ನೆರವಿನೊಂದಿಗೆ ಅಪ್ಪನಿಂದ ತಪ್ಪಿಸಿಕೊಂಡು ಗಂಡನನ್ನ ಸೇರಿಕೊಂಡಿದ್ದಾಳೆ. ಇಷ್ಟೇ ಅಲ್ಲದೇ ತಂದೆ ಮತ್ತೆ ಸಮಸ್ಯೆಯನ್ನು ಮಾಡಬಹುದು ಎಂದು ಹೆದರಿಕೊಂಡಿರುವ ಚೈತ್ರ  ತನ್ನ ತಂದೆಯಿಂದ ರಕ್ಷಣೆ ಬೇಕೆಂದು ಸಾರ್ವಜನಿಕವಾಗಿಯೇ ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ಕೊಡಗಿಗೆ ಓಮೈಕ್ರಾನ್ ಹರಡಲು ಸಂಪಾಜೆ ಚೆಕ್ ಪೋಸ್ಟ್ ರಹದಾರಿ ಆಗುತ್ತಾ..!?

ತಮ್ಮ ಮದುವೆಗೆ ಪೋಷಕರ ವಿರೋಧವಿದೆ, ಈ ಮಧ್ಯೆ ಬೆದರಿಕೆಯನ್ನು ಸಹ ಹಾಕಿದ್ದಾರೆ, ನಮಗೆ ಭಯವಾಗುತ್ತಿದೆ ಎಂದು ಪ್ರಿಯತಮನನ್ನ ತಬ್ಬಿಹಿಡಿದು ಆತಂಕ ವ್ಯಕ್ತಪಡಿಸಿರುವ ಚೈತ್ರಾ ತನ್ನ ತಂದೆಯಿಂದ ತನಗೆ ರಕ್ಷಣೆ ನೀಡುವಂತೆ ನಂಜನಗೂಡು ಪೊಲೀಸ್ ಠಾಣೆಗೆ ದೂರನ್ನೂ ಸಹ ನೀಡಿದ್ದಾರೆ.
Published by:Sandhya M
First published: