• Home
  • »
  • News
  • »
  • state
  • »
  • SSLC Results: ಮಗನ ಜೊತೆ ಅಭ್ಯಾಸ ಮಾಡಿ ಎಸ್ಎಸ್ಎಲ್ ಸಿ ಪರೀಕ್ಷೆ ಉತ್ತೀರ್ಣನಾದ ತಂದೆ

SSLC Results: ಮಗನ ಜೊತೆ ಅಭ್ಯಾಸ ಮಾಡಿ ಎಸ್ಎಸ್ಎಲ್ ಸಿ ಪರೀಕ್ಷೆ ಉತ್ತೀರ್ಣನಾದ ತಂದೆ

ತಂದೆ ಮತ್ತು ಮಗ

ತಂದೆ ಮತ್ತು ಮಗ

1993-94ರಲ್ಲಿ 9ನೇ ತರಗತಿಯಲ್ಲಿ ಅನುತ್ತೀರ್ಣರಾದ ನಂತರ ನನ್ನ ಶಿಕ್ಷಣವನ್ನು ನಿಲ್ಲಿಸಿದ್ದೆ. ನನ್ನ ಮಗ ನನ್ನೊಂದಿಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗುವಂತೆ ಹೇಳಿದ. ನನ್ನನ್ನು ಚೆನ್ನಾಗಿ ಓದುವಂತೆ ಮಾಡಿದ್ದಾನೆ. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗದಿದ್ದರೆ ಯಾವುದೇ ಮೌಲ್ಯವಿಲ್ಲ ಎಂದು ಮಗ ಹೇಳಿದ್ದನು ಅಂತ ರಹಮತುಲ್ಲಾ ಹೇಳುತ್ತಾರೆ.

ಮುಂದೆ ಓದಿ ...
  • Share this:

ಸಾಧನೆ (Achievement) ಮಾಡಲು ವಯಸ್ಸು ಮುಖ್ಯಲ್ಲ ಎಂಬುವುದು ಹಲವು ಬಾರಿ ಸಾಬೀತು ಆಗುತ್ತಲೇ ಇರುತ್ತದೆ. ಇಳಿ ವಯಸ್ಸಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ (SSLC Exams) ತೆಗೆದುಕೊಂಡು ಜನರು ಉತ್ತೀರ್ಣರಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಈ ವರ್ಷ ಮಗನ (Son) ಜತೆ ಅಭ್ಯಾಸ ಮಾಡಿದ ತಂದೆ (Father) 10ನೇ ತರಗತಿ ಪರೀಕ್ಷೆ ಬರೆದು 333 ಅಂಕ ಗಳಿಸಿದ್ದಾರೆ. ಮೈಸೂರಿನ ನಜರಾಬಾದ್ (Nazarabad, Mysuru) ನಲ್ಲಿ ವಾಸವಾಗಿರುವ ರಹಮತುಲ್ಲಾ (42) ಮತ್ತು ಮೊಹಮ್ಮದ್ ಫರಾನ್ (16) ತಂದೆ-ಮಗ ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಮೊಹಮ್ಮದ್ ಫರಾನ್ 625ಕ್ಕೆ 613 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.


ಮೊಹಮ್ಮದ್ ಫರಾನ್ 613 ಅಂಕ ಪಡೆದ್ರೆ, 1994ರಲ್ಲಿಯೇ ಶಿಕ್ಷಣ ಮೊಟಕುಗೊಳಿಸಿದ್ದ ರಹಮತುಲ್ಲಾ 333 ಅಂಕ ಪಡೆದುಕೊಂಡಿದ್ದಾರೆ. ಇನ್ನೂ ತಮ್ಮ ಸಾಧನೆಗೆ ಮಗನ ಪ್ರೋತ್ಸಾಹ ಕಾರಣ ಎಂದು ರಹಮತುಲ್ಲಾ ಹೇಳುತ್ತಾರೆ.


ಮೂರು ವಿಷಯದಲ್ಲಿ ನೂರಕ್ಕೆ ನೂರು ಅಂಕ


ಮೊಹಮ್ಮದ್ ಫರಾನ್ ಇಂಗ್ಲಿಷ್, ಗಣಿತ ಮತ್ತು ಸಮಾಜ ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾನೆ. ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ್ರೆ, ಹಿಂದಿಯಲ್ಲಿ 93 ಅಂಕಗಳನ್ನು ಪಡೆದುಕೊಂಡಿದ್ದಾನೆ.


ಇದನ್ನೂ ಓದಿ:  PU Colleges: ಜೂನ್ 9 ರಿಂದ ಪಿಯು ತರಗತಿ ಪ್ರಾರಂಭ; ಕಲಿಕಾ ಅಂತರ ಸರಿದೂಗಿಸಲು ಕಾಲೇಜುಗಳ ಪ್ರಯತ್ನ


ಪ್ರತಿದಿನ ಮಗನ ಜೊತೆ ಅಭ್ಯಾಸ


ನನ್ನ ತಂದೆ ರಹಮತುಲ್ಲಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾರೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬಯಸಿದ್ದರು. ಹಾಗಾಗಿ ಇಬ್ಬರು ಒಟ್ಟಿಗೆ ಪರೀಕ್ಷೆ ಬರೆಯಲು ಬಯಸಿದೇವು. ತಂದೆ ಕೆಲಸದಿಂದ ಬಂದ ನಂತರ ಮಧ್ಯ ರಾತ್ರಿ ನನ್ನ ಜೊತೆ ಪ್ರತಿನಿತ್ಯ ಎರಡ್ಮೂರು ಗಂಟೆ ಅಭ್ಯಾಸ ಮಾಡುತ್ತಿದ್ದರು ಎಂದು ಫರಾನ್ ಹೇಳುತ್ತಾನೆ.


ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ತಂದೆ


1993-94ರಲ್ಲಿ 9ನೇ ತರಗತಿಯಲ್ಲಿ ಅನುತ್ತೀರ್ಣರಾದ ನಂತರ ನನ್ನ ಶಿಕ್ಷಣವನ್ನು ನಿಲ್ಲಿಸಿದ್ದೆ. ನನ್ನ ಮಗ ನನ್ನೊಂದಿಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗುವಂತೆ ಹೇಳಿದ. ನನ್ನನ್ನು ಚೆನ್ನಾಗಿ ಓದುವಂತೆ ಮಾಡಿದ್ದಾನೆ. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗದಿದ್ದರೆ ಯಾವುದೇ ಮೌಲ್ಯವಿಲ್ಲ ಎಂದು ಮಗ ಹೇಳಿದ್ದನು ಅಂತ ರಹಮತುಲ್ಲಾ ಹೇಳುತ್ತಾರೆ.


ಮಗ ನನಗೆ ಶಿಕ್ಷಕರಂತೆ ಆತ್ಮವಿಶ್ವಾಸ ತುಂಬಿದನು. ಇದರಿಂದ ಇಂದು ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಸಾಧ್ಯವಾಗಿದೆ ಎಂದು ರಹಮತುಲ್ಲಾ ಸಂತೋಷ ಮತ್ತು ಪುತ್ರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಫರಾನ್ ವಿಜ್ಞಾನಿಯಾಗಲು ಬಯಸುತ್ತಾನೆ. ಆದ್ದರಿಂದ, ಕಂಪ್ಯೂಟರ್ ಸೈನ್ಸ್‌ ನಲ್ಲಿ ಡಿಪ್ಲೊಮಾಗೆ ಸೇರಿದ್ದಾನೆ.


ಎರಡು ಬಿಬಿಎಂಪಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ


ರಾಜಧಾನಿಯ ಬಿಬಿಎಂಪಿ (Bruhat Bengaluru Mahanagara Palike (BBMP)) ವ್ಯಾಪ್ತಿಗೆ ಒಳಪಡುವ ಎರಡು ಶಾಲೆಗಳು ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ (SSLC Results) ಶೂನ್ಯ ಸಾಧನೆ ಮಾಡಿವೆ. ಈ ಎರಡು ಶಾಲೆಗಳ ಮುಖ್ಯೋಪಾಧ್ಯಯರಿಗೆ ಕಾರಣ ಕೇಳಿ ಶೋಕಾಸ್ (Show Cause Notice) ನೀಡಲಾಗಿದೆ.


ಶಿಕ್ಷಕರು ಸೇವೆಯಿಂದ ವಜಾ


ಕೆಲ ಶಿಕ್ಷಕರನ್ನು (Teachers) ಸೇವೆಯಿಂದ ವಜಾಗೊಳಿಸಲಾಗಿದೆ. SSLC ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್ ನ 19 ಮತ್ತು ಕೆ.ಜಿ.ನಗರದ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರಿಣಾಮ ಎರಡೂ ಶಾಲೆಗಳು (Schools) ಶೂನ್ಯ ಫಲಿತಾಂಶ (Zero Result) ದಾಖಲಿಸಿವೆ.


ಇದನ್ನೂ ಓದಿ:  PUBG Death: ಪಬ್​​ಜಿ ಪ್ರತಾಪ! ಮಗನನ್ನು ಉಳಿಸಲು ಜೀವ ಬಲಿಕೊಟ್ಟ ತಾಯಿ, ಚಿಕ್ಕಮಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ


ಎರಡನೇ ಬಾರಿಗೆ ಶೂನ್ಯ ಫಲಿತಾಂಶ


ಕಳೆದ ವರ್ಷಗಳಿಗೆ ಹೋಲಿಸಿದ್ರೆ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದೆ. 2020ರಲ್ಲಿ ಶೇ.50.16, 2019ರಲ್ಲಿ ಶೇ.52, 2018ರಲ್ಲಿ ಶೇ. 51ರಷ್ಟು ಫಲಿತಾಂಶ ದಾಖಲಾಗಿತ್ತು. ಈ ವರ್ಷ ರಾಜ್ಯದಲ್ಲಿ ಶೇ.71.27ರಷ್ಟು  ಫಲಿತಾಂಶ ಬಂದಿದೆ. ಕೆಜಿ ನಗರ  ಶಾಲೆ 2020ರ ನಂತರ ಎರಡನೇ ಬಾರಿಗೆ ಶೂನ್ಯ ಫಲಿತಾಂಶ ಪಡೆದುಕೊಂಡಿದೆ.

Published by:Mahmadrafik K
First published: