KPTCL Exam Scam: ಕೆಪಿಟಿಸಿಎಲ್‌ ಪರೀಕ್ಷೆಯಲ್ಲೂ ನಡೆಯಿತಾ ಅಕ್ರಮ? ಪ್ರಶ್ನೆ ಪತ್ರಿಕೆ ಲೀಕ್, ತಂದೆ-ಮಗ ಲಾಕ್!

ಕೆಪಿಟಿಸಿಎಲ್‌ (KPTCL) ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಆಗಿರೋ ಆರೋಪಕ್ಕೆ ಪುಷ್ಟಿ ಸಿಕ್ಕಿದೆ. ಗದಗದಲ್ಲಿ (Gadag) ತಂದೆ ಹಾಗೂ ಮಗನ (Father and Son) ಮೇಲೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಆರೋಪ ಕೇಳಿ ಬಂದಿದೆ.

ಆರೋಪಿ ತಂದೆ-ಮಗ

ಆರೋಪಿ ತಂದೆ-ಮಗ

  • Share this:
ಗದಗ: 2021ರ ಅಕ್ಟೋಬರ್ 3ರಂದು ನಡೆದಿದ್ದ ಪಿಎಸ್ಐ ಪರೀಕ್ಷೆಯಲ್ಲಿ (PSI Exam) ಭಾರೀ ಗೋಲ್ಮಾಲ್ ನಡೆದಿತ್ತು. ಕೋಟಿ ಕೋಟಿ ರೂಪಾಯಿಗಳ ಹಗರಣ (Scam) ನಡೆದು, ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಎಡಿಜಿಪಿ ಅಮೃತ್ ಪೌಲ್ (ADGP Amrit Paul) ಸೇರಿದಂತೆ ಪ್ರಮುಖ ಹುದ್ದೆಯಲ್ಲಿದ್ದವರೇ ಅಕ್ರಮದಲ್ಲಿ ಶಾಮೀಲಾಗಿದ್ದು ಬೆಳಕಿಗೆ ಬಂದಿದ್ದು, ಇದೀಗ ಸಿಐಡಿ ಅಧಿಕಾರಿಗಳು (CID Officers) ತನಿಖೆ (Investigation) ಮುಂದುವರೆಸಿದ್ದಾರೆ. ಅದಾದ ಮೇಲೆ ಬೇರೆ ಬೇರೆ ವಿಭಾಗದ ಹಲವು ನೇಮಕಾತಿ ಪರೀಕ್ಷೆಗಳಲ್ಲಿ (Recruitment Exam) ಅಕ್ರಮ ನಡೆದಿರುವ ಸಂಶಯ ವ್ಯಕ್ತವಾಯಿತು. ಹೀಗಿರುವಾಗಲೇ ಇದೇ ತಿಂಗಳ 7ರಂದು ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ (KPTCL Exam) ಅಕ್ರಮ ನಡೆದಿರುವ ಸಂಶಯ ಬಹುತೇಕ ಸ್ಪಷ್ಟವಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ನಾಯಕ (Congress Leader) ಪ್ರಿಯಾಂಕ್ ಖರ್ಗೆ (Priyank Kharge) ಕೆಪಿಟಿಸಿಎಲ್ ಪರೀಕ್ಷೆಯಲ್ಲಿ 300 ಕೋಟಿಯಷ್ಟು ಅಕ್ರಮ ನಡೆದಿದೆ ಅಂತ ಆರೋಪಿಸಿದ್ದರು. ಈ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೆಪಿಟಿಸಿಎಲ್‌ ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಆಗಿರೋ ಆರೋಪಕ್ಕೆ ಪುಷ್ಟಿ ಸಿಕ್ಕಿದೆ. ಗದಗದಲ್ಲಿ (Gadag) ತಂದೆ ಹಾಗೂ ಮಗನ (Father and Son) ಮೇಲೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಆರೋಪ ಕೇಳಿ ಬಂದಿದೆ.

ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ರಾ ಅಪ್ಪ, ಮಗ?

ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ಇದೇ ಆಗಸ್ಟ್ 7ರಂದು ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿ ಬಂದಿತ್ತು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗದಗದ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ಲೀಕ್ ಮಾಡಿದ್ದಾರೆ ಎನ್ನಲಾಗಿದೆ.

ಪತ್ರಕರ್ತರ ಸೋಗಿನಲ್ಲಿ ಪರೀಕ್ಷಾ ಹಾಲ್‌ಗೆ ಬಂದಿದ್ದ ಮಗ!


ಪರೀಕ್ಷೆ ನಡೆಯುತ್ತಿರುವಾಗ ಸಮೀತ್ ಕುಮಾರ್ ಪತ್ರಕರ್ತರ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟಿದ್ದ. ಈ ವೇಳೆ ತನ್ನ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆಯ ಫೊಟೋ ಕ್ಲಿಕ್ಕಿಸಿದ್ದಾನೆ. ಬಳಿಕ ಅದನ್ನು ರಾಜ್ಯದ ಬೇರೆ ಬೇರೆ ಕಡೆ ಕಳುಹಿಸಿದ್ದಾನೆ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ: Priyank Kharge: ನೌಕರಿ ಯುವಕರಿಗೆ ಬೇಕಾದ್ರೆ ಲಂಚ, ಯುವತಿಯರಿಗೆ ಬೇಕಾದ್ರೆ ಮಂಚ! ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸೈಬರ್ ಕ್ರೈಂ ಪೊಲೀಸರಿಂದ ತಂದೆ, ಮಗ ಬಂಧನ

ಗದಗ-ಬೆಟಗೇರಿ ಅವಳಿ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಅದರ ಪೈಕಿ ಮುನ್ಸಿಪಲ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಬೆಳಗಾವಿರ ಸೈಬರ್ ಕ್ರೈಂ ಪೊಲೀಸರು ಪ್ರಶ್ನೆ ಪತ್ರಿಕೆ ಲೀಕ್ ನ ಜಾಡು ಹಿಡಿದು ಮುನ್ಸಿಪಲ್ ಕಾಲೇಜಿಗೆ ಬಂದು, ವಿಚಾರಣೆ ಕೈಗೊಂಡರು. ಈ ವೇಳೆ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಸಮೀತ ಕುಮಾರ್ ನ ಮೊಬೈಲ್ ಫೋನ್ ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ ಅಂತ ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ಕಣ್ಣೀರಿಟ್ಟ ಕಾಲೇಜ್ ಪ್ರಾಚಾರ್ಯ

ಸೈಬರ್ ಪೊಲೀಸರು, ಕಾಲೇಜ್ ಪ್ರಾಚಾರ್ಯ ಕುಲಕರ್ಣಿ ಅವರನ್ನು ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಕುಲಕರ್ಣಿ ಅವರು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Girl Murder: 11ರ ಬಾಲಕಿ ಪಾಲಿಗೆ ಯಮನಾದ 50ರ ಅಂಕಲ್! ಆಕೆಯನ್ನು ಕೊಂದು, ತಾನು ಸೂಸೈಡ್‌ ಮಾಡಿಕೊಂಡಿದ್ದೇಕೆ ಈ ಪಾಪಿ?

ಅಕ್ರಮದ ಬಗ್ಗೆ ಆರೋಪಿಸಿದ್ದ ಪ್ರಿಯಾಂಕ್ ಖರ್ಗೆ

ಪಿಎಸ್ಐ ಪರೀಕ್ಷೆಯಂತೆಯೇ ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ ಭಾರೀ ಅಕ್ರಮ ನಡೆದಿದೆ ಅಂತ ಕಾಂಗ್ರೆಸ್ ನಾಯಕ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. “ಇದು ಲಂಚ, ಮಂಚದ ಸರ್ಕಾರ. ಯುವಕರಿಗೆ ನೌಕರಿ ಬೇಕು ಅಂದ್ರೆ ಅವರು ಲಂಚ ಕೊಡಬೇಕು. ಅದೇ ರೀತಿ ಯುವತಿಯರಿಗೆ ನೌಕರಿ ಬೇಕು ಅಂದ್ರೆ ಅವರು ಮಂಚ ಹತ್ತಬೇಕು” ಅಂತ ಆರೋಪಿಸಿದ್ದರು.
Published by:Annappa Achari
First published: