Hassan: ಭೀಕರ ಅಪಘಾತದಲ್ಲಿ ತಂದೆ-ಮಗ ಸಾವು; ಈಜಲು ಹೋಗಿ ಇಬ್ಬರು ನೀರುಪಾಲು

ಹಾಸನ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ ತಂದೆ-ಮಗ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇತ್ತ ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ದುರ್ಮರಣ ಹೊಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸನ (ಜೂ 19): ಅವರೆಲ್ಲಾ ಗಾರೆ ಕೆಲಸ ಮಾಡುವವರು. ಕೆಲಸ ನೀಡುವ ಮೇಸ್ತ್ರಿಯ ಮನೆಯ ಮೌಲ್ಡಿಂಗ್ ಕೆಲಸವನ್ನು ಶನಿವಾರ ಪೂರ್ತಿ ಮುಗಿಸಿದ್ದರು. ಇದೇ ಕಾರಣಕ್ಕೆ ಮೇಸ್ತ್ರಿ ಎರಡು ಕಾರುಗಳಲ್ಲಿ ಹತ್ತು ಜನರನ್ನು ಕರೆದುಕೊಂಡು ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಿತ್ತು.‌ ಇಂದು ಮುಂಜಾನೆ ಹಾಸನ (Hassan) ಜಿಲ್ಲೆ, ಆಲೂರು ತಾಲ್ಲೂಕಿನ ಈಶ್ವರಹಳ್ಳಿ (EshwaraHalli) ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದರೆ. ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು ಇಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಎರಡು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ

ಆಂಜಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳು. ತಮಿಳುನಾಡು ಮೂಲದ ಹೊಸೂರು ತಾಲ್ಲೂಕಿನ ಹೊನಟ್ಟಿ, ಎಸ್.ಮುದುಗಂಡಪಲ್ಲಿ ಗ್ರಾಮದ ಹತ್ತು ಮಂದಿ ಎರಡು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದರು. ಆಲ್ಟೋ 800 ಕಾರನ್ನು ಹಾಸನ ಮುಂದಿನ ಕಾರಿನಲ್ಲಿದ್ದ ಯುವಕ ಚಲಾಯಿಸುತ್ತಿದ್ದರು. ಶಾಂತಿ ಗ್ರಾಮ ಟೋಲ್‌ನಲ್ಲಿ ಕಾರು ನಿಲ್ಲಿಸಿ ಚಹಾ ಕುಡಿದಿದ್ದಾರೆ‌. ನಂತರ ಲೈಸನ್ಸ್ ಇಲ್ಲದ ಕಾರಣ ಆಂಜಪ್ಪ ಕಾರು ಚಲಾಯಿಸಿಕೊಂಡು ಧರ್ಮಸ್ಥಳಕ್ಕೆ ಹೊರಟಿದ್ದಾರೆ.

ತಂದೆ -ಮಗ ಸ್ಥಳದಲ್ಲೇ ಸಾವು

ಇಂದು ಮುಂಜಾನೆ ಐದು ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಆಂಜಪ್ಪ, ಕಾರ್ತಿಕ್ (ತಂದೆ -ಮಗ) ಸಾವನ್ನಪ್ಪಿದರೆ, ಪುನೀತ್ (15), ಕಾರ್ತಿಕ್ (19), ಚಂದ್ರಪ್ಪ (40) ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಿಕ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru: ನಾಳೆ ವಾಹನ ಸವಾರರು ರಸ್ತೆಗಿಳಿಯೋ ಮುನ್ನ ಎಚ್ಚರ; ನಗರದಲ್ಲಿ ಹಲವೆಡೆ ಸಂಚಾರ ಬಂದ್

ಈಜಲು ಹೋಗಿದ್ದ ಇಬ್ಬರು ನೀರುಪಾಲು

ಹಾಸನ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅರಸೀಕೆರೆ ತಾಲ್ಲೂಕಿನ ಚಿಕ್ಕೂರು ಗ್ರಾಮದ ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಹಸುನೀಗಿದ್ದಾರೆ. ಹಾಸನದ ಸಿದ್ದಯ್ಯನಗರದ ಚಂದನ್ (20), ರಕ್ಷಿತ್ (20) ಮೃತ ದುರ್ದೈವಿಗಳು. ಒಟ್ಟು ಮೂವರು ಸ್ನೇಹಿತರು ಕಲ್ಯಾಣಿಯಲ್ಲಿ ಈಜಲು ಇಳಿದಿದ್ದಾರೆ ಇವರಲ್ಲಿ ಒಬ್ಬರಿಗೆ ಮಾತ್ರ ಈಜಲು ಬರುತ್ತಿದ್ದು ಈಜಿ ದಡ ಸೇರಿದ್ದಾರೆ. ಈಜು ಬಾರದ ರಕ್ಷಿತ್ ಹಾಗೂ ಚಂದನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ತಕ್ಷಣ ಶಾಸಕ ಕೆ.ಎಂ.ಶಿವಲಿಂಗೇಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಹೊರ ತೆಗೆಯುವವರೆಗು ಸ್ಥಳದಲ್ಲೇ ಇದ್ದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರು ಯುವಕರು ನೀರುಪಾಲು

ಚಿಕ್ಕಮಗಳೂರು: ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಅಣ್ಣೆಗೆರೆ ಗ್ರಾಮದಲ್ಲಿ ನಡೆದಿದೆ. ದರ್ಶನ್ (16), ರಾಕೇಶ್ (18) ಹಾಗೂ ಕಿರಣ್ (20) ಎಂಬುವರು ಮೃತಪಟ್ಟ ಯುವಕರಾಗಿದ್ದಾರೆ.
ಆರು ಜನ ಯುವಕರು ಕೆರೆಗೆ ಈಜಲು ತೆರಳಿದ್ದ ವೇಳೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕಡೂರು ತಾಲೂಕಿನ ಬಿಟ್ಟೇನಹಳ್ಳಿ ಗ್ರಾಮದವರಾಗಿದ್ದಾರೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನ ಶವಕ್ಕಾಗಿ ಶೋಧ ಮುಂದುವರೆದಿದೆ.

ಇದನ್ನೂ ಓದಿ: Mysuru: ನಾಳೆ ಅರಮನೆ ನಗರಿಗೆ ಮೋದಿ; ಚಾಮುಂಡಿ ಬೆಟ್ಟಕ್ಕೆ ಜನರಿಗಿಲ್ಲ ಎಂಟ್ರಿ; ಮಾಲ್ ಕ್ಲೋಸ್, ಎಲ್ಲೆಲ್ಲೂ ಪೊಲೀಸ್​

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಂಚನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published by:Pavana HS
First published: