ಮಳೆಗಾಗಿ ದೇವರ ಮೊರೆ ಹೋದ ರೈತರು

news18
Updated:August 7, 2018, 1:21 PM IST
ಮಳೆಗಾಗಿ ದೇವರ ಮೊರೆ ಹೋದ ರೈತರು
news18
Updated: August 7, 2018, 1:21 PM IST
- ಶರಣಪ್ಪ ಬಾಚಲಾಪುರ,  ನ್ಯೂಸ್ 18 ಕನ್ನಡ 

ರಾಯಚೂರು( ಆಗಸ್ಟ್ 07) :  ಸತತ ಭೀಕರ ಬರಗಾಲದಿಂದ ಬಿಸಿಲೂರು ಜನತೆ ತತ್ತರಿಸಿದ್ದರೆ. ಪ್ರಸಕ್ತ ಸಾಲಿನಲ್ಲಿ ವರುಣ ದೇವನ ಕೃಪೆಯಿಂದ ಮುಂಗಾರು ಕೈ ಹಿಡಿಯಬಹುದೆಂದು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆಯಿಲ್ಲದೆ ಬೆಳೆ ಒಣಗುತ್ತಿವೆ. ಮಳೆಯ ಕೃಪೆಗಾಗಿ ಹೋಮ, ಹವನ, ನಡೆಯುತ್ತಿರುವ ಮಧ್ಯೆ ರೈತರು ವರುಣ ಕೃಪೆಗಾಗಿ ಸಪ್ತ ಭಜನೆ ಮಾಡುವ ಮೂಲಕ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.

ಈ ದೃಶ್ಯ ಕಂಡು ಬಂದಿದ್ದು, ರಾಯಚೂರು ತಾಲೂಕಿನ ಕಾನಾಪುರ ಉಡಮಕಲ್ ಗ್ರಾಮದಲ್ಲಿ, ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯವಾಗಿದೆ, ಜಿಲ್ಲೆಯಲ್ಲಿ ಶೇ 52 ರಷ್ಟು ಮಳೆ ಕೊರತೆಯಾಗಿದೆ, ಆದರೆ ರಾಯಚೂರು ತಾಲೂಕಿನ ಹಲವು ಕಡೆ ಮಳೆಯಾಗದೆ ಬಿತ್ತನೆ ಮಾಡಿಲ್ಲ, ಬಿತ್ತನೆ ಮಾಡಿದ ಭೂಮಿಯಲ್ಲಿ ಬೆಳೆಯು ಮಳೆ ಕೊರತೆಯಿಂದಾಗಿ ಬೆಳೆ ನಾಶವಾಗುತ್ತಿದೆ.

ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದರೆ, ಇನ್ನೊಂದು ಕಡೆ ಗ್ರಾಮ ದೇವರಲ್ಲಿ ಗ್ರಾಮದ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ, ಉಡಮಕಲ್ ನಲ್ಲಿ ಗ್ರಾಮದ ದೇವರ ಗುಡಿಯಲ್ಲಿ ದಿನದ 24 ತಾಸು ನಿರಂತರ ಭಜನೆಯನ್ನು ಮಾಡುತ್ತಿದ್ದಾರೆ,

ಭಜನೆಗೆ ಬರುವ ಮುನ್ನ ನೀರನ್ನು ಸುರಿದುಕೊಂಡು ಹಸಿ ಬಟ್ಟೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದವರು ವಿಭೂತಿ ಬಳಿದುಕೊಂಡು ತಾಳಗಳೊಂದಿಗೆ ಭಜನೆ ಮಾಡುತ್ತಿದ್ದಾರೆ, ನಿನ್ನ ಬಳಿ ಪ್ರಾರ್ಥಿಸುತ್ತಿದ್ದೇವೆ, ನಮ್ಮ ಗ್ರಾಮಕ್ಕೆ ಮಳೆ ಸುರಿದು ನಮ್ಮನ್ನು ಕಾಪಾಡು ಎಂದು ಬೇಡಿಕೆಕೊಳ್ಳುತ್ತಿದ್ದಾರೆ. ಒಂದು ವಾರ ಕಾಲ ನಿರಂತರ ಭಜನೆ ಮಾಡುತ್ತಿದ್ದಾರೆ, ಈ ಪ್ರಾರ್ಥನೆಯ ನಂತರ ಮಳೆ ಬರುತ್ತದೆ ಎಂಬ ನಂಬಿಕೆ ರೈತರಲ್ಲಿದೆ

ಉಡಮಕಲ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ, ಇವರ ಪ್ರಾರ್ಥನೆಯ ಮೋರೆ ದೇವರಿಗೆ ಕೇಳಿ ಮಳೆ ಸುರಿಯುತ್ತಾ ಕಾದು ನೋಡಬೇಕು.

 
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ