Drone in Agriculture: ಮದ್ದು ಸಿಂಪಡಣೆಗೆ ಡ್ರೋನ್ ಬಳಕೆ; ಗಂಟೆಗೆ ಎಷ್ಟು ಬೆಲೆ ಗೊತ್ತಾ?

ಡ್ರೋನ್ ಬಳಕೆ

ಡ್ರೋನ್ ಬಳಕೆ

ಕೃಷಿಕರು ಡ್ರೋನ್ ಮೂಲಕ ಮದ್ದು ಸಿಂಪಡಣೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಗಂಟೆಗೆ 700 ರೂಪಾಯಿ ಚಾರ್ಜ್ ಮಾಡಲಾಗುತ್ತಿದ್ದು, 1 ಎಕರೆ ಅಡಿಕೆ ತೋಟಕ್ಕೆ ಕೇವಲ 20 ನಿಮಿಷದಲ್ಲಿ ಮದ್ದು ಬಿಡುತ್ತಿದೆ.

  • Share this:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಅಡಿಕೆಗೆ (Areca Nut crop) ಎಲೆಚುಕ್ಕಿ ರೋಗ ಅಡಿಕೆ ಬೆಳೆಗಾರರನ್ನು (Farmers) ಕಂಗೆಡಿಸಿದೆ. ಚಿಕ್ಕ ಅಡಿಕೆ ಗಿಡಗಳಿಂದ ಹಿಡಿದು ದೊಡ್ಡ ಅಡಿಕೆ ಮರದವರೆಗೆ ಈ ಎಲೆಚುಕ್ಕಿ ರೋಗ ಆವರಿಸಿದ್ದು, ಎಕರೆಗಟ್ಟಲೆ ಅಡಿಕೆ ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಮೊದಲಿಗೆ ಅಡಿಕೆ ಗಿಡದ ಎಲೆಯಲ್ಲಿ ಚುಕ್ಕಿ ಕಂಡು ಬಂದು, ಬಳಿಕ ಆ ಚುಕ್ಕಿ ಇಡೀ ಎಲೆಯನ್ನು ಆವರಿಸುತ್ತದೆ. ಇದರಿಂದಾಗಿ ಅಡಿಕೆ ಮರದ ಎಲೆಯಲ್ಲಾ ಒಣಗಿ ಹೋಗಿ, ಅಡಿಕೆ ಮರಕ್ಕೆ (Nut Tree) ಪೋಷಕಾಂಶಗಳ ಪೂರೈಕೆ ನಿಂತು ಹೋಗುವಂತಾಗುತ್ತದೆ. ಇದರಿಂದ ಇಡೀ ಮರವೇ ನಾಶವಾಗುತ್ತಿದ್ದು, ಭಾರೀ ನಷ್ಟ (Crop Loss) ಅನುಭವಿಸುತ್ತಿದ್ದಾರೆ. ಈ ರೋಗಕ್ಕೆ ಶಿಲೀಂಧ್ರಗಳು (Fungus) ಕಾರಣವಾಗಿದ್ದು, ಇದಕ್ಕೆ ಶಿಲೀಂಧ್ರ ನಾಶಕ ರಾಸಾಯನಿಕವನ್ನು (Chemicals) ಬಿಡಲು ಕೃಷಿಕರು (Farmers) ಮುಂದಾಗಿದ್ದಾರೆ.


ಒಂದು ಕಡೆ ಅಡಿಕೆ ಕೊಯ್ಲು, ಇನ್ನೊಂದೆಡೆ ರೋಗ ನಿಯಂತ್ರಣಕ್ಕೆ ಮದ್ದು ಸಿಂಪಡಣೆ ಮಾಡಬೇಕಾದ ಕಾರಣ ನುರಿತ ಕಾರ್ಮಿಕರು ಸಿಗದೆ ಕೃಷಿಕರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕೆಲಸವನ್ನು ನಿರ್ವಹಿಸುವ ಡ್ರೋನ್ ಅನ್ನು ಇದೀಗ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ತೋಟಗಳಲ್ಲಿ ಪರಿಚಯಿಸಲಾಗುತ್ತಿದೆ.


ಮೊದಲ ಬಾರಿಗೆ ಔಷಧಿ ಸಿಂಪಡಣೆ ಕಾರ್ಯ


ಅಡಿಕೆ ಎಲೆಚುಕ್ಕಿ ರೋಗಕ್ಕೆ ಔಷಧಿ ಸಿಂಪಡಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರೋನ್‌ ಪ್ರಯೋಗ ನಡೆಯುತ್ತಿದ್ದು. ಈಗಾಗಲೇ ಸುಳ್ಯ ತಾಲೂಕಿನ ಕಳಂಜದ ಕೋಟೆಮುಂಡುಗಾರಿನಲ್ಲಿ ಮೊದಲ ಬಾರಿಗೆ ಔಷಧಿ ಸಿಂಪಡಣೆ ಕಾರ್ಯ ನಡೆಯಿತು. ಈ ಸಂದರ್ಭ ಕೃಷಿಕರು ಡ್ರೋನ್‌ ಬಗ್ಗೆ ಮಾಹಿತಿ ಪಡೆದುಕೊಂಡರು.


Farmers uses Drones For Spraying Chemicals In nut tree psud mrq
ಡ್ರೋನ್ ಬಳಕೆ


ಈಗಾಗಲೇ ಸುಳ್ಯದ ಹಲವು ಅಡಿಕೆ ತೋಟಗಳಲ್ಲಿ ಡ್ರೋಣ್ ಮೂಲಕವೇ ಶಿಲೀಂದ್ರ ನಾಶಕ ರಾಸಾಯನಿಕ ಸಿಂಪಡನೆ ನಡೆಯುತ್ತಿದ್ದು, ಅಡಿಕೆ ಎಲೆಚುಕ್ಕಿ ರೋಗಕ್ಕೆ ಔಷಧಿ ಸಿಂಪಡಣೆಗೆ ಕಾರ್ಮಿಕರ ಕೊರತೆಯಿಂದ ಈ ಭಾಗದ ಕೃಷಿಕರು ಡ್ರೋಣ್ ಮೊರೆ ಹೋಗಿದ್ದಾರೆ.


ಡ್ರೋನ್‌ ಬಳಕೆ ಪ್ರಯತ್ನ


ಶೃಂಗೇರಿ, ತೀರ್ಥಹಳ್ಳಿ ಮೊದಲಾದ ಕಡೆಗಳಲ್ಲಿ ಕೂಡಾ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಡ್ರೋನ್‌ ಮೂಲಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡ್ರೋನ್‌ ಬಳಕೆ ಪ್ರಯತ್ನ ನಡೆದಿದೆ.




ಬೆಂಗಳೂರು ಮೂಲದ ಮಲ್ಟಿಪ್ಲೆಕ್ಸ್‌ .ಎಂ. ಡ್ರೋನ್‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಡಿಕೆ ಗಿಡಗಳಿಗೆ ಮದ್ದು ಬಿಡುವ ಕಾರ್ಯವನ್ನು ಮಾಡುತ್ತಿದೆ. ಕಾರ್ಮಿಕರು ಮಾಡಲು ಕಷ್ಟಸಾಧ್ಯವಾದ ಮರಗಳ ತುದಿಗೂ ಅನಾಯಾಸವಾಗಿ ಡ್ರೋನ್​ಗಳು ಮದ್ದು ಸಿಂಪಡಿಸುತ್ತಿರುವುದರಿಂದ ಈ ರೀತಿಯ ಸಿಂಪಡಣೆ ರೋಗಬಾಧಕ ಶಿಲೀಂದ್ರಗಳ ನಿಯಂತ್ರಣಕ್ಕೂ ಪರಿಣಾಮಕಾರಿಯಾಗಲಿದೆ.


ಡ್ರೋನ್‌ ಬಳಕೆ ಪ್ರಯತ್ನ


ಈ ಕಾರಣಕ್ಕಾಗಿ ಜಿಲ್ಲೆಯ ಕೃಷಿಕರು ಡ್ರೋನ್ ಕಾರ್ಯಕ್ಷಮತೆಯನ್ನು ವೀಕ್ಷಿಸಿರುವ ಕೃಷಿಕರು ಮದ್ದು ಸಿಂಪಡಣೆ ಕೆಲಸದಿಂದ ಸಂತುಷ್ಟರಾಗಿದ್ದಾರೆ. ಈ ಕಾರಣಕ್ಕಾಗಿ ಹೆಚ್ಚಿನ ಕೃಷಿಕರು ಡ್ರೋನ್ ಮೂಲಕ ಮದ್ದು ಸಿಂಪಡಣೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಗಂಟೆಗೆ 700 ರೂಪಾಯಿ ಚಾರ್ಜ್ ಮಾಡಲಾಗುತ್ತಿದ್ದು, 1 ಎಕರೆ ಅಡಿಕೆ ತೋಟಕ್ಕೆ ಕೇವಲ 20 ನಿಮಿಷದಲ್ಲಿ ಮದ್ದು ಬಿಡುತ್ತಿದೆ.


ಇದನ್ನೂ ಓದಿ:  Aatmanirbhar Bharat: ಕೊರೊನಾದಿಂದ ಉದ್ಯಮಿಗಳಾದ ದಂಪತಿ; ತೆಂಗಿನ ಗೆರಟೆಯಲ್ಲಿಅರಳಿದ ಕಲಾಕೃತಿಗಳು


ಇಬ್ಬರು ಬೈಕ್‌ ಸವಾರರ ದುರ್ಮರಣ


ಟಿಪ್ಪರ್​ ಲಾರಿ ಹಾಗೂ ಬೈಕ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಲೋಹೀತ್ ಫಕೀರಪ್ಪ ಹಾಗೂ ಶ್ರೀನಿವಾಸ್ ಮಾರುತಿ ಮೃತ ದುರ್ದೈವಿಗಳು. ಈ ಕುರಿತು ಶಿರಾಳಕೊಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Published by:Mahmadrafik K
First published: