ಅಶೋಕ ಸಂಧಾನ ಯಶಸ್ವಿ; ನ. 11ಕ್ಕೆ ಡೆಡ್​ಲೈನ್ ಕೊಟ್ಟು ಪ್ರತಿಭಟನೆ ಕೈಬಿಟ್ಟ ರೈತರು

ತಾವು ಪ್ರತಿಭಟನೆ ನಿಲ್ಲಿಸಿರುವುದು ತಾತ್ಕಾಲಿಕ ಮಾತ್ರ. ನವೆಂಬರ್ 11ರಂದು ಸರ್ಕಾರದ ಜೊತೆ ಮತ್ತೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ರೈತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

news18
Updated:November 7, 2019, 4:45 PM IST
ಅಶೋಕ ಸಂಧಾನ ಯಶಸ್ವಿ; ನ. 11ಕ್ಕೆ ಡೆಡ್​ಲೈನ್ ಕೊಟ್ಟು ಪ್ರತಿಭಟನೆ ಕೈಬಿಟ್ಟ ರೈತರು
ರೈತರ ಪ್ರತಿಭಟನೆ
  • News18
  • Last Updated: November 7, 2019, 4:45 PM IST
  • Share this:
ಬೆಂಗಳೂರು(ನ. 07): ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದ ರಾಜ್ಯ ಸರ್ಕಾರ ತಾನು ಕೊಟ್ಟ ಮಾತನ್ನು ತಪ್ಪಿದೆ ಎಂದು ಆರೋಪಿಸಿ ಪ್ರತಿಭಟನೆಗಿಳಿದಿದ್ದ ರೈತ ಸಂಘಟನೆಗಳ ಮುಖಂಡರೊಂದಿಗೆ ಆರ್. ಅಶೋಕ್ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರತಿಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿ ಭರವಸೆ ನೀಡಿದ ಬಳಿಕ ರೈತರು ತಮ್ಮ ಪ್ರತಿಭಟನೆ ಕೈಬಿಡಲು ನಿರ್ಧರಿಸಿದರು.

ಕೇಂದ್ರ ಸರ್ಕಾರದಿಂದ ಬರುವ ಎನ್​ಡಿಆರ್​ಎಫ್ ಪರಿಹಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಆರ್. ಅಶೋಕ್ ನೀಡಿದ ವಾಗ್ದಾನದಿಂದ ಸದ್ಯಕ್ಕೆ ಸಮಾಧಾನಪಟ್ಟ ರೈತರ ಮುಖಂಡರು ನವೆಂಬರ್ 11ರವರೆಗೆ ಕಾದು ನೋಡಲು ನಿಶ್ಚಯಿಸಿದರು.

ತಾವು ಪ್ರತಿಭಟನೆ ನಿಲ್ಲಿಸಿರುವುದು ತಾತ್ಕಾಲಿಕ ಮಾತ್ರ. ನವೆಂಬರ್ 11ರಂದು ಸರ್ಕಾರದ ಜೊತೆ ಮತ್ತೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ರೈತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ರಾಕ್ಷಸರಿಂದ ರಾಜ್ಯ ರಕ್ಷಿಸಲು ವಿಷಕಂಠರಾದೆವು; ರಾಜೀನಾಮೆಯ ಕಾರಣ ಬಿಚ್ಚಿಟ್ಟ ಅನರ್ಹ ಶಾಸಕ ಬಿ.ಸಿ. ಪಾಟೀಲ್

ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ರೈತರು ಇಂದು ನಗರದಲ್ಲಿ ಮತ್ತೆ ಪ್ರತಿಭಟನೆಗೆ ಇಳಿದಿದ್ದವು.. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ ರೈತರು ಮೌರ್ಯ ಸರ್ಕಲ್​ನಲ್ಲಿ ಅಹೋರಾತ್ರಿ ಧರಣಿ ಕುಳಿತಿದ್ದರು..

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ ರೈತರು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದವರೆಗೂ ಪಾದಯಾತ್ರೆ ಮಾಡಲು ಯತ್ನಿಸಿದರು. ಈ ವೇಳೆ ಬ್ಯಾರಿಕೇಡ್​ಗಳನ್ನು ಹಾಕಿ ರೈತರನ್ನು ಪೊಲೀಸರು ತಡೆದರು.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ರೈತರ ಪ್ರತಿಭಟನೆಗೆ ಬೆಂಬಲವಾಗಿ ನಿಂತಿದ್ದವು. ಮುಖ್ಯಮಂತ್ರಿಗಳು ಸ್ಥಳಕ್ಕೆ ಬರುವವರೆಗೂ ಅಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕೂತಿದ್ದರು. ಈ ವೇಳೆ, ಆರ್. ಅಶೋಕ್ ಅವರು ಸರ್ಕಾರದ ಪರವಾಗಿ ರೈತರ ಬಳಿ ಸಂಧಾನ ನಡೆಸಿ ಪ್ರತಿಭಟನೆ ನಿಲ್ಲಿಸುವಲ್ಲಿ ಯಶಸ್ವಿಯಾದರು.ಇದನ್ನೂ ಓದಿ: ಮೈಸೂರಲ್ಲಿ ಸಿದ್ದು ಕೋಟೆ ಭೇದಿಸಿದ ‘ಕನಕಪುರ ಬಂಡೆ’; ಸಿದ್ದರಾಮಯ್ಯರಿಂದ ಬೆಳೆದ ನಾಯಕರಿಂದ ಡಿಕೆಶಿ ಗುಣಗಾನ

ಕಳೆದ ಅಕ್ಟೋಬರ್ 10ರಂದು ರಾಜ್ಯದ ವಿವಿಧೆಡೆಯಿಂದ ರೈತರು ನಗರದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟ ಬಳಿಕ ಪ್ರತಿಭಟನೆ ನಿಲ್ಲಿಸಿ ರೈತರು ವಾಪಸ್ಸಾಗಿದ್ದರು. ಆಗ ಕೊಟ್ಟ ಭರವಸೆ ಯಾವುದೂ ಈಡೇರುವ ಲಕ್ಷಣ ತೋರದ್ದರಿಂದ ರೈತರು ಇಂದು ಮತ್ತೆ ಪ್ರತಿಭಟನೆಗೆ ಅಡಿ ಇಟ್ಟಿದ್ದರು.

ರೈತರ ಬೇಡಿಕೆಗಳೇನು?
1) ನಿರಾಶ್ರಿತರಿಗೆ ಮನೆ ಕಟ್ಟಿಕೊಡಬೇಕು.
2) ಮುಳುಗಡೆ ಆದ ಪ್ರದೇಶಗಳನ್ನು ಬೇರೆಡೆ ಸ್ಥಳಾಂತರ ಮಾಡಿಕೊಡಬೇಕು.
3) ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ಕಟ್ಟುವಂತೆ ಕಿರುಕುಳ ಕೊಡುತ್ತಿದ್ದಾರೆ. ಅದನ್ನ ನಿಲ್ಲಿಸಬೇಕು.
4) ಒಂದು ಕಡೆ ನೆರೆ, ಮತ್ತೊಂದು ಕಡೆ ಬರ. ಎರಡಕ್ಕೂ ಪರಿಹಾರ ಕೊಡಬೇಕು.

(ವರದಿ: ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 7, 2019, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading