ಬೆಳೆ ಸಮೀಕ್ಷೆ ಆ್ಯಪ್​: ತಂತ್ರಜ್ಞಾನ ತಿಳಿಯದೇ ಪರದಾಡುತ್ತಿರುವ ರೈತರು; ಬೇಕಿದೆ ತರಬೇತಿ

ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಆಗುತ್ತಿರುವುದು ಒಳ್ಳೆಯ ಬೆಳೆವಣಿಗೆ. ಆದರೆ, ಈ ತಂತ್ರಜ್ಞಾನ  ರೈತರಿಗೆ  ಒಗ್ಗುತ್ತಿಲ್ಲ.ಈ ಬಗ್ಗೆ ಕೃಷಿಕರಿಗೆ ಸ್ವಲ್ಪ ತರಬೇತಿ ಅವಶ್ಯಕತೆ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ (ಅ.7):  ರೈತರ ಬೆಳೆ ಸಮೀಕ್ಷೆ ಸುಲಭ ಮಾಡುವ ಉದ್ದೇಶದಿಂದ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದೆ. ಇದಕ್ಕಾಗಿ ಮೊಬೈಲ್​ ಮೂಲಕವೇ ಬೆಳೆ ಸರ್ವೆ ಆಪ್ ಅಭಿವೃದ್ದಿಪಡಿಸಿದೆ. ಈ ಮೂಲಕ ರೈತರು ಸುಲಭವಾಗಿ ಬೆಳೆ ಸರ್ವೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದರೆ ಬಹುತೇಕ ರೈತರಿಗೆ ಇದು ಸಮಸ್ಯೆಯಾಗಿದೆ. ಕಾರಣ ರೈತ ವರ್ಗದವರಲ್ಲಿ ಸ್ಮಾರ್ಟ್​ ಫೋನ್​ ಇಲ್ಲದಿರುವದರ ಜೊತೆಗೆ ಈ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದು ಸಮಸ್ಯೆಯಾಗಿದೆ. ರೈತರಲ್ಲಿ ಬಹುತೇಕ ಮಂದಿ ಅನಕ್ಷರಸ್ಥರಿದ್ದು, ಈ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಾಗದೇ ತಲೆ ಮೇಲೆ ಕೈ ಹೊತ್ತು ಕೂರುವಂತೆ ಆಗಿದೆ. ಆಡಳಿತವನ್ನು ಡಿಜಿಟಲೀಕರಣ ಮಾಡಲು ಹೊರಟಿರುವ ಸರ್ಕಾರ ಈ ಮೂಲಕ ಆಡಳಿತದ ಪಾರದರ್ಶಕವಾಗಿರಲಿದೆ ಎಂಬ ವಾದ ಮಂಡಿಸಿದೆ. ಆದರೆ, ಈ ತಂತ್ರಜ್ಞಾನಕ್ಕೆ ಒಗ್ಗಿಗೊಳ್ಳಲಾಗದೇ ರೈತರು ಕಷ್ಟಪಡುವಂತೆ ಆಗಿದೆ. 

ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಈ ಆಪ್​ ಮೂಲಕ ರೈತರೇ ನೇರವಾಗಿ ತಮ್ಮ ಬೆಳೆ ಸರ್ವೆಯನ್ನು ಮಾಡಿ ಡಾಟಾ ಅಪ್ಲೋಡ್​​ ಮಾಡಬಹುದು. ಇದರಿಂದ ಯಾವುದೇ ಅತಿವೃಷ್ಟ, ಅನಾವೃಷ್ಠಿ, ಬೇರೆ ಏನಾದರೂ ಆದಲ್ಲಿ ಬೆಳೆ ಪರಿಹಾರ ಸಿಗುವುದು ಸುಲಭವಾಗಲಿದೆ. ಆದರೆ ಉತ್ತರ ಕರ್ನಾಟಕದ ಬಹುತೇಕ ರೈತರಿಗೆ ಈ ತಂತ್ರಜ್ಞಾನ ಅಳವಡಿಕೆ ಅಷ್ಟು ಸುಲಭವಾಗಿಲ್ಲ.

ಅನೇಕ ರೈತರು ಬೆಳೆ ಸರ್ವೆ ಆಪ್ ಹಾಕಿಕೊಳ್ಳಲಾಗದೇ, ಹಾಕಿಕೊಂಡರೆ ಅದನ್ನು ನಿರ್ವಹಣೆ ಮಾಡಲಾಗದೇ ಕಂಗಲಾಗಿದ್ದಾರೆ. ಇದಕ್ಕಾಗಿ ಬೇರೆಯವರ ಮೇಲೆ ಅವಲಂಬಿತವಾಗಬೇಕಾಗಿದ್ದು, ಇದಕ್ಕಿಂತ ಮೊದಲಿದ್ದ ಪದ್ಧತಿಯೇ ಉತ್ತಮ ಎನ್ನುತ್ತಿದ್ದಾರೆ.

ಇದನ್ನು ಓದಿ: ಬಸ್​ ನಿಲ್ದಾಣವೇ ಶಾಲೆಯಾದಾಗ: ನೆಟ್​ವರ್ಕ್​ಗಾಗಿ ಕಾರವಾರ ಗ್ರಾಮೀಣ ಪ್ರದೇಶದ ಮಕ್ಕಳ ಅಲೆದಾಟ

ಜಿಲ್ಲೆಯಲ್ಲಿ 903547 ಪ್ಲಾಟಗಳಲ್ಲಿ ರೈತರ ಬೆಳೆ ಸಮೀಕ್ಷೆ ಆಗಬೇಕಿದೆ. ಇರದಲ್ಲಿ ಕೇವಲ 230392 ಪ್ಲಾಟ್​ಗಳ ಬೆಳೆ ಮಾತ್ರ ಸಮೀಕ್ಷೆ ನಡೆಸಲಾಗಿದೆ.  ಗೋಕಾಕನಲ್ಲಿ 96061 ರಲ್ಲಿ ಕೇವಲ 22361, ಮೂಡಲಗಿಯಲ್ಲಿ72101 ಪ್ಲಾಟಗಳ ಪೈಕಿ 15992ಪ್ಲಾಟ್, ಅಥಣಿಯಲ್ಲಿ 139499 ರ ಪೈಕಿ 40365 ಪ್ಲಾಟ್, ಚಿಕ್ಕೋಡಿಯಲ್ಲಿ 148575 ಪ್ಲಾಟಗಳ ಪೈಕಿ ಕೇವಲ 31718 ಪ್ಲಾಟಗಳ ಸಮೀಕ್ಷೆ ಕಾರ್ಯ ಮುಗಿದಿದೆ. ಇದರಿಂದ ಬಹಳಷ್ಟು ರೈತರು ಬೆಳೆ ಸಮೀಕ್ಷೆ ಕಾರ್ಯದಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಪ್ರತಿಬಾರಿ ಕಂದಾಯ ಇಲಾಖೆ, ಮತ್ತು ಎನ್ ಜಿ ಒ ಗಳ ಸಹಾಯದಿಂದ ನಡೆಯುತ್ತಿದ್ದ ಸಮೀಕ್ಷೆ ಲೋಪದೋಷಗಳಿಂದ ಕೂಡಿರುತ್ತಿತ್ತು ಎಂಬ ಆರೋಪ ಕೇಳಿಬರುತ್ತಿತ್ತು.  ಇದರ ನಿರ್ವಹಣೆಗಾಗಿ   ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಆಗುತ್ತಿರುವುದು ಒಳ್ಳೆಯ ಬೆಳೆವಣಿಗೆ. ಆದರೆ, ಈ ತಂತ್ರಜ್ಞಾನ  ರೈತರಿಗೆ  ಒಗ್ಗುತ್ತಿಲ್ಲ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳನ್ನ ಕೇಳಿದರೆ, ಸರ್ಕಾರ ತಂದಿರುವ ನಿಯಮದ ಪ್ರಕಾರವೇ ಸಮೀಕ್ಷೆ ಆಗಬೇಕಾಗಿದೆ. ಇದು ರೈತಸ್ನೇಹಿ ಇದೆ. ಕೃಷಿಕರಿಗೆ ಸ್ವಲ್ಪ ತರಬೇತಿ ಅವಶ್ಯಕತೆ ಇದೆ ಎನ್ನುತ್ತಾರೆ.
Published by:Seema R
First published: