ರೈತರ ಪರಿಹಾರ ಮೊತ್ತ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆಗೆ ಜಮಾ

ಈ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಯಾವ ಏರ್‌ಟೆಲ್ ಕಂಪನಿಗೆ ಹೋಗಿ ಕೇಳಬೇಕು? ಮೊದಲೇ ಲಾಕ್‌ಡೌನ್‌ನಿಂದ ನಾವು ತೊಂದರೆಗೆ ಒಳಗಾಗಿದ್ದೇವೆ. ನಮ್ಮಲ್ಲಿರುವುದು ಸಣ್ಣ ಫೋನ್. ಮೊಬೈಲ್‌ನಿಂದ ನಾವು ಹಿಂದೆ ಯಾವತ್ತೂ ಹಣ ವರ್ಗಾವಣೆ ಮಾಡಿಲ್ಲ. ಏರ್‌ಟೆಲ್ ಕಂಪನಿಯಲ್ಲಿ ಸಿಮ್ ತೆಗೆದುಕೊಂಡಿದ್ದು ನಿಜ ಎಂದು ಹಾವೇರಿಯ ರೈತರು ಹೇಳುತ್ತಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹಾವೇರಿ(ಜೂ.07): ಆಧಾರ್ ನಂಬರ್ ಅನ್ನು ಏರ್‌ಟೆಲ್‌ ಫೋನ್ ಸಂಖ್ಯೆಗೆ ಲಿಂಕ್ ಮಾಡಿಸಿದ್ದವರಿಗೆ ಬಹುದೊಡ್ಡ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.! ಸರ್ಕಾರ ನೀಡುವ ರೈತರ ಪರಿಹಾರ ಮೊತ್ತ ಹಾಗೂ ಸಬ್ಸಿಡಿ ಹಣವ ವಿವಿಧ ಗ್ರಾಹಕರ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆಗೆ ಜಮಾ ಆಗಿದೆ.  ಆದರೆ ರೈತರು ಮಾತ್ರ  ಏರ್‌ಟೆಲ್‌ನಲ್ಲಿ ಖಾತೆ ತೆರೆದೇ ಇಲ್ಲ.

ಹೌದು, ಹಾವೇರಿ ಜಿಲ್ಲೆಯಲ್ಲಿ ಬಹುತೇಕ ರೈತರ ಪ್ರಶ್ನೆ ಇದಾಗಿದೆ. ರೈತರ ಹಾಗೂ ಇತರೆ ಗ್ರಾಹಕರ ಸಬ್ಸಿಡಿ ಹಣ  ಜನರಿಗೆ ತಿಳಿಯದಂತೆ ಏರ್‌ಟೆಲ್‌ ಬ್ಯಾಂಕ್  ಖಾತೆಗೆ ಜಮಾ ಆಗಿವೆ. ಕೊರೋನಾ ವೈರಸ್, ಲಾಕ್‌ಡೌನ್‌ನಿಂದಾಗಿ ಜರ್ಜರಿತರಾಗಿದ್ದ ರೈತರಿಗೆ ಸರ್ಕಾರವೇ ಮತ್ತೊಂದು ಸಂಕಷ್ಟ ತಂದಿಟ್ಟಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರ ಖಾತೆಗೆ ಜಮೆಯಾಗಬೇಕಿದ್ದ ಪರಿಹಾರದ ಹಣ ಏರ್‌ಟೆಲ್ ಕಂಪನಿಗೆ ಜಮಾ ಆಗಿದೆ. ಇದರಿಂದಾಗಿ ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಮೊಬೈಲ್‌ ದೂರವಾಣಿ ಸಂಪರ್ಕ ಸೇವೆ ಒದಗಿಸುವ ಏರ್‌ಟೆಲ್ ಕಂಪನಿ ಸಿಮ್ ಕೊಡುವಾಗ ಗ್ರಾಹಕರಿಂದ ಆಧಾರ್ ಸಂಖ್ಯೆಯನ್ನು ದಾಖಲೆಗೆ ತೆಗೆದುಕೊಳ್ಳುತ್ತದೆ. ಆಧಾರ್ ಆಧಾರದ ಮೇಲೆ ಮೊಬೈಲ್ ಸಂಪರ್ಕವನ್ನು ಏರ್‌ಟೆಲ್‌ ಕೊಡುತ್ತದೆ. ಸ್ಮಾರ್ಟ್‌ ಫೋನ್ ಹೊಂದಿರುವವರು ಏರ್‌ಟೆಲ್ ಹಣ ವರ್ಗಾವಣೆ ಖಾತೆ ತೆರೆಯಬಹುದಾಗಿದೆ. ಸ್ಮಾರ್ಟ್‌ಫೋನ್ ಇಲ್ಲದ ರೈತರ ಹಣ ಕೂಡ ಏರ್‌ಟೆಲ್‌ ಕಂಪನಿಗೆ ಹೋಗಿರುವುದು ಅನುಮಾನ ಮೂಡಿಸಿದೆ.

ಸರ್ಕಾರ ನೀಡುವ ವಿವಿಧ ಸಬ್ಸಿಡಿ ಹಣ ಹಾಗೂ ಪರಿಹಾರ ಮೊತ್ತವು ರೈತರ ಖಾತೆಯ ಬದಲು ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಹೋಗಿದೆ.  ಏರ್‌ಟೆಲ್  ಯಾವುದೇ ಬ್ಯಾಂಕ್ ಶಾಖೆಗಳನ್ನು ಹೊಂದಿಲ್ಲ. ಆದರೂ ಏರ್‌ಟೆಲ್ ಔಟ್‌ಲೆಟ್‌ಗಳಿಗೆ ಹೋಗಿ ಹಣ ಪಡೆಯಬೇಕಾಗಿದೆ. ಸರ್ಕಾರಕ್ಕೆ, ರೈತರಿಗೂ ಮಾಹಿತಿ ಇಲ್ಲದೇ ಏರ್‌ಟೆಲ್ ಖಾತೆಗೆ ಹಣ ಜಮಾ ಆಗಿದ್ದು  ಹಾವೇರಿ ಜಿಲ್ಲೆಯಲ್ಲಿ  ಹಿರೇಕೆರೂರ ತಾಲ್ಲೂಕಿನ ಶಿರಗಂಬಿ ಗ್ರಾಮದ 60 ರೈತರ ಬೆಳೆ ಪರಿಹಾರ  ಹಣ ಏರ್‌ಟೆಲ್‌ ಕಂಪನಿ ಪಾಲಾಗಿದೆ.

ಶಾಲಾ-ಕಾಲೇಜುಗಳ ಮರು ಪ್ರಾರಂಭ ಯಾವಾಗ?; ದಿನಾಂಕ ಘೋಷಿಸಿದ ಕೇಂದ್ರ ಸಚಿವ

ಈ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಯಾವ ಏರ್‌ಟೆಲ್ ಕಂಪನಿಗೆ ಹೋಗಿ ಕೇಳಬೇಕು? ಮೊದಲೇ ಲಾಕ್‌ಡೌನ್‌ನಿಂದ ನಾವು ತೊಂದರೆಗೆ ಒಳಗಾಗಿದ್ದೇವೆ. ನಮ್ಮಲ್ಲಿರುವುದು ಸಣ್ಣ ಫೋನ್. ಮೊಬೈಲ್‌ನಿಂದ ನಾವು ಹಿಂದೆ ಯಾವತ್ತೂ ಹಣ ವರ್ಗಾವಣೆ ಮಾಡಿಲ್ಲ. ಏರ್‌ಟೆಲ್ ಕಂಪನಿಯಲ್ಲಿ ಸಿಮ್ ತೆಗೆದುಕೊಂಡಿದ್ದು ನಿಜ ಎಂದು ಹಾವೇರಿಯ ರೈತರು ಹೇಳುತ್ತಿದ್ದಾರೆ.

ಈಗ ಏರ್‌ಟೆಲ್‌ ಕಂಪನಿಯ ಯಾವ ಅಂಗಡಿಗೆ ಹೋಗಬೇಕು? ಲಾಕ್‌ಡೌನ್‌ನಿಂದ ಎಲ್ಲಿಯೂ ಹೋಗುವಂತಿಲ್ಲ. ಸರ್ಕಾರವೇ ಇದಕ್ಕೆ ಪರಿಹಾರ ಕೊಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಹನುಮಂತಪ್ಪ ಕಬ್ಬಾರಆಗ್ರಹಿಸುತ್ತಿದ್ದಾರೆ. ಸಬ್ಸಿಡಿ ಹಣ ಏರ್‌ಟೆಲ್ ಪೇಮೆಂಟ್‌ಗೆ ಬಿದ್ದದ್ದು ಹೇಗೆ?ಸರ್ಕಾರದ ಯಾವುದೇ ಪರಿಹಾರ ಹಣ ಹಾಗೂ ಸಬ್ಸಿಡಿ ಹಣ ನೇರವಾಗಿ ಆಧರ್ ಲಿಂಕ್ ಇರುವ ಖಾತೆಗೆ ಜಮಾ ಆಗುತ್ತವೆ.  ಹೀಗೆ ಹಣ ಹಾಕುವಾಗ ಕೊನೆಯಲ್ಲಿ ಆಧಾರ್ ಲಿಂಕ್ ಆದ ಬ್ಯಾಂಕ್ ಅಕೌಂಟ್‌ಗೆ ಹಣ ಹಾಕುವುದರಿಂದ ಸಬ್ಸಿಡಿ ಹಣ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ ಖಾತೆಗ ಜಮಾ ಆಗಿದೆ.
First published: