HOME » NEWS » State » FARMERS PROTESTING IN MYSORE FOR NOT GIVING PERMISSION TO ENTER CITY SESR

ರೈತರ ಟ್ರಾಕ್ಟರ್​ಗಳಿಗೆ ತಡೆ; ಮೈಸೂರಿನಲ್ಲಿ ರಸ್ತೆ ತಡೆದು ರೈತರಿಂದ​ ಪ್ರತಿಭಟನೆ, ಬಿಗುವಿನ ವಾತಾವರಣ

ನಗರದ ಹೃದಯಭಾಗದ ರಾಮಸ್ವಾಮಿ ವೃತ್ತದ ನಾಲ್ಕು ರಸ್ತೆಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರೈತರನ್ನ ನಿಯಂತ್ರಿಸಲು ಪೋಲಿಸರ ಹರಸಾಹಸ ನಡೆಸಿದ್ದಾರೆ. 

news18-kannada
Updated:January 25, 2021, 8:00 PM IST
ರೈತರ ಟ್ರಾಕ್ಟರ್​ಗಳಿಗೆ ತಡೆ; ಮೈಸೂರಿನಲ್ಲಿ ರಸ್ತೆ ತಡೆದು ರೈತರಿಂದ​ ಪ್ರತಿಭಟನೆ, ಬಿಗುವಿನ ವಾತಾವರಣ
ಟ್ರ್ಯಾಕ್ಟರ್​ನಲ್ಲಿ ಬೆಂಗಳೂರಿಗೆ ಹೊರಟ ರೈತರು.
  • Share this:
ಮೈಸೂರು (ಜ. 25): ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ರೈತರು ನಾಳೆ ಗಣರಾಜ್ಯೋತ್ಸವದಂದು ಟ್ರಾಕ್ಟರ್​ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈ ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸಾವಿರಾರು ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸಲಿದ್ದಾರೆ. ರೈತರ ಈ ಟ್ರ್ಯಾಕ್ಟರ್ ಪೆರೇಡ್ ನಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧ ಗ್ರಾಮಗಳ ರೈತರು ನಗರದ ಮಹಾರಾಜ ಕಾಲೇಜಿನಲ್ಲಿ ಜಮಾವಣೆಯಾಗಿ ನಂತರ ಬೆಂಗಳೂರಿನತ್ತ ಹೊರಡಲು ಸಿದ್ಧತೆ ನಡೆಸಿದ್ದರು. ಆದರೆ, ವಿವಿಧ ತಾಲೂಕು, ಗ್ರಾಮಗಳಿಂದ ಆಗಮಿಸಿದ ರೈತರ ಟ್ರಾಕ್ಟರ್​ಗೆ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ರೈತರು ಟ್ರಾಕ್ಟರ್​ ಬಿಟ್ಟು ಕಾಲ್ನಡಿಗೆಯಲ್ಲಿ ಬಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಲ್ಲದೇ   ನಗರದ ಹೃದಯಭಾಗದ ರಾಮಸ್ವಾಮಿ ವೃತ್ತದ ನಾಲ್ಕು ರಸ್ತೆಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರೈತರನ್ನ ನಿಯಂತ್ರಿಸಲು ಪೋಲಿಸರ ಹರಸಾಹಸ ನಡೆಸಿದ್ದಾರೆ. 

ನಗರಕ್ಕೆ ಆಗಮಿಸುವ ಟ್ರಾಕ್ಟರ್​ಗೆ ಪ್ರವೇಶ ನೀಡದ ಹಿನ್ನಲೆ  ಮಹಾರಾಜ ಕಾಲೇಜು ಮೈದಾನನದ ಮುಂಭಾಗದ ರಸ್ತೆ ಸಂಪೂರ್ಣ ಬಂದ್  ಮಾಡಿ, ರೈತರು ರಸ್ತೆಯಲ್ಲಿಯೇ ಮಲಗಿ ಪ್ರತಿಭಟನೆ ಮಾಡಲು ಸಜ್ಜಾದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ರೈತ ಮಹಿಳೆಯರು ಹಸಿರು ಶಾಲು ತಿರುಗಿಸಿ ರೈತರ ಬಲ ತೋರಿಸಿದರು. ರೈತರ ಈ ಪ್ರತಿಭಟನೆಗೆ ಎಐಟಿಯುಸಿ ಸೇರಿ ಹಲವರು ಬೆಂಬಲ ನೀಡಿದರು.

ರೈತರ ಪೊಲೀಸರ ಮಧ್ಯೆ ಮಾತಿನ ಚಕಮಕಿ

ಈ ವೇಳೆ  ರೈತರನ್ನ ಸಮಾಧಾನ  ಡಿಸಿಪಿ ಪ್ರಕಾಶ್ ಗೌಡ ಮುಂದಾರು. ಈ ವೇಳೆ ನಮಗೆ ನ್ಯಾಯ ಸಿಗ್ತಿಲ್ಲ' ನಮಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು.ರೈತರ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.  ಮಹಾರಾಜ ಕಾಲೇಜು ಮೈದಾನದ ರಸ್ತೆ, ಕೃಷರಾಜ ಬುಲೇ ವಾರ್ಡ್  ರಸ್ತೆಯ ಎರಡು ಬದಿಯನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರತಿಭಟನೆ ತೀವ್ರವಾದ ಹಿನ್ನಲೆ ಎರಡು ಕಡೆಯ ಬಂದ್ ಮಾಡಲಾಗಿದೆ.  ಸ್ಥಳದಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನಲೆ ಸ್ಥಳಕ್ಕೆ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಹುಣಸೂರು ಮೈಸೂರು ಚೆಕ್ ಪೋಸ್ಟ್ ನಲ್ಲಿ ಟ್ರ್ಯಾಕ್ಟರ್ ಗಳನ್ನ ಪೊಲೀಸರು ತಡೆದಿದ್ದಾರೆ. ಈ ಹಿನ್ನಲೆ ಟ್ರಾಕ್ಟರ್​ ತೊರೆದ ರೈತರು  ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ.

ತಡಿರಿ ನೋಡೋಣ ಎಂದು ಸವಾಲ್​ ಎಸೆದ ರೈತ ಮಹಿಳೆ 

ಟ್ರಾಕ್ಟರ್​ಗಳಿಗೆ ಪ್ರವೇಶ ನಿರಾಕರಿಸಿದ ಹಿನ್ನಲೆ ರೈತ ಮಹಿಳೆ ನೇತ್ರಾವತಿ, ತಾವೇ ಟ್ರಾಕ್ಟರ್​ ಏರಿ ಚಾಲನೆ ಮಾಡಲು ಮುಂದಾದರು. ಈ ವೇಳೆ ನಾನೇ ಟ್ರಾಕ್ಟರ್ ಓಡಿಸುತ್ತೇನೆ ಯಾರು ತಡಿತಾರೆ ನೋಡೋಣ ಎಂದು ಸವಾಲ್​ ಹಾಕಿದರು.
Published by: Seema R
First published: January 25, 2021, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories