ಹಕ್ಕುಪತ್ರ ವಿತರಿಸುವಲ್ಲಿ ತಾರತಮ್ಯ; ಶಾಸಕ ಡಿಸಿ ತಮ್ಮಣ್ಣಗೆ ಘೇರಾವ್

ಮದ್ದೂರಿನ ಸಿದ್ದಾರ್ಥ ನಗರದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ಶಾಸಕ ಡಿಸಿ ತಮ್ಮಣ್ಣ ಆಗಮಿಸಿದ್ದರು. ಶಾಸಕರ ಕಾರನ್ನು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. 

news18-kannada
Updated:January 22, 2020, 3:35 PM IST
ಹಕ್ಕುಪತ್ರ ವಿತರಿಸುವಲ್ಲಿ ತಾರತಮ್ಯ; ಶಾಸಕ ಡಿಸಿ ತಮ್ಮಣ್ಣಗೆ ಘೇರಾವ್
ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ಡಿಸಿ ತಮ್ಮಣ್ಣ
  • Share this:
ಮಂಡ್ಯ (ಜ.22): ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶಾಸಕ ಡಿಸಿ ತಮ್ಮಣ್ಣ ಅವರಿಗೆ ಘೇರಾವ್ ಹಾಕಿದ್ದಾರೆ.

ಮದ್ದೂರಿನ ಸಿದ್ದಾರ್ಥ ನಗರದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ಶಾಸಕ ಡಿಸಿ ತಮ್ಮಣ್ಣ ಆಗಮಿಸಿದ್ದರು. ಶಾಸಕರ ಕಾರನ್ನು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ.

ಈ ವೇಳೆ ಹಕ್ಕುಪತ್ರ ವಿತರಿಸುವಲ್ಲಿ ಆಗಿರುವ ತಾರತಮ್ಯದ ಕುರಿತು ಡಿಎಸ್​ಎಸ್​ ಸಂಘಟನೆ ಜಿಲ್ಲಾಧ್ಯಕ್ಷ ಮರಳಿಗ ಶಿವರಾಜ್​ ಗಮನಕ್ಕೆ ತಂದಿದ್ದು, ಅವರಿಗೆ ಘೇರಾವ್​ ಹಾಕಿದ್ದಾರೆ.

ಕಾರ್ಯಕರ್ತರ ಈ ನಡೆಯಿಂದ ಆಕ್ರೋಶಗೊಂಡ ಶಾಸಕರು ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಅಲ್ಲದೇ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸಿರುವುದು ನಾನು. ನೀವಲ್ಲ ಎಂದು ಪ್ರತಿಭಟನಾಕಾರರಿಗೆ ತಿರುಗೇಟು ನೀಡಿದ್ದಾರೆ. ಈ ವೇಳೆ ಕ್ಷಣಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿದೆ.

ಇದನ್ನು ಓದಿ: ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕವಾದರೆ ಪಕ್ಷ ಸಂಘಟನೆಗೆ ಅನುಕೂಲ; ಎಚ್​ ಸಿ ಮಹದೇವಪ್ಪ

ಇದಾದ ಬಳಿಕ ಸಮಾಧಾನಗೊಂಡ ಕಾರ್ಯಕರ್ತರು, ಇನ್ನು 3 ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಇಲ್ಲದಿದ್ದರೆ ಮನೆ ಮುಂದೆ  ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ