news18-kannada Updated:January 20, 2021, 5:10 PM IST
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು; ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನ ವಿರೋಧಿ, ರೈತ ವಿರೋಧಿ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲು ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ತೈಲ ಬೆಲೆ ಜಾಸ್ತಿಯಾಗಿದೆ. ಇದರಿಂದ ಬೇರೆ ಎಲ್ಲ ಬೆಲೆಗಳು ಜಾಸ್ತಿಯಾಗಿದೆ. ಕೊರೋನಾ ಸಮಯದಲ್ಲಿ 20 ಸಾವಿರ ಕೋಟಿ ಕೊಡ್ತೀವಿ ಅಂದ್ರು ಅದು ಶೇ. 20 ಕೂಡ ಜನರಿಗೆ ತಲುಪಿಲ್ಲ. ರೈತರು ರಸ್ತೆಗೆ ಇಳಿದು 50-60 ದಿನ ಹೋರಾಟ ಮಾಡ್ತಿದ್ದಾರೆ. ಇದು ದೇಶಕ್ಕೆ ದೊಡ್ಡ ಅಪಾಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕಾಂಗ್ರೆಸ್ ರಾಜಭವನ ಚಲೋ ಕಾರ್ಯಕ್ರಮ ಆಯೋಜಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಇವತ್ತು ಹೋರಾಟಕ್ಕೆ ಬರುವ ಜನರನ್ನು ರಸ್ತೆಗಳಲ್ಲಿ ಅಡ್ಡಗಟ್ಟಿ ತಡೆದಿದ್ದಾರೆ. ರಾಜ್ಯಪಾಲರಿಗೆ ಅನೇಕ ಅಂಶಗಳನ್ನು ಮನವರಿಕೆ ಮಾಡಿದ್ದೇವೆ. ಅವರು ಅದನ್ನು ತಾಳ್ಮೆಯಿಂದ ಆಲಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಅತೀ ಹೆಚ್ಚು ಲಸಿಕೆ ಹಂಚಿದ ಕರ್ನಾಟದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ ಲಸಿಕಾ ಅಭಿಯಾನ!
ನಾವು ನಿರುದ್ಯೋಗಿಗಳು, ಡಬಲ್ ಇಂಜಿನ್ ಸರ್ಕಾರ ಏನ್ ಮಾಡ್ತಿದೆ. ಜನರನ್ನೆಲ್ಲಾ ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಆ ಜನರ ಧ್ವನಿಯಾಗಿ ನಾವಿದ್ದೇವೆ ಎಂದು ಡಿಕೆಶಿ, ತೈಲ ಬೆಲೆ ಕಡಿಮೆಯಾದರೂ ಕೂಡ ಪೆಟ್ರೋಲ್, ಡೀಸೆಲ್ ದರ ಇಳಿಸಿಲ್ಲ. ಇದರ ಲಾಭವನ್ನ ಸರ್ಕಾರ ಪಡೆಯುತ್ತಿದೆ. ಇದರಿಂದ ಎಲ್ಲ ದರ ಹೆಚ್ಚಳವಾಗಿದೆ. ಕೊರೋನಾ ಸಂದರ್ಭದಲ್ಲಿ ಎಲ್ಲರಿಗೂ ಅನ್ಯಾಯವಾಗಿದೆ. 1,700 ಕೋಟಿ ಧನ ಸಹಾಯ ಮಾಡೋದಾಗಿ ಹೇಳಿದ್ದರು. ಆದರೆ ಯಾರಿಗೂ ಕೊಟ್ಟಿಲ್ಲ. ಜನರ ಅಭಿಪ್ರಾಯ ಪಡೆದಿದ್ದೇವೆ ಎಂದು ಹೇಳಿದರು.
Published by:
HR Ramesh
First published:
January 20, 2021, 5:10 PM IST