Farmers Protest: ರೈತರಿಗೆ ಸದಾ ನಮ್ಮ ಬೆಂಬಲ ಇರುತ್ತದೆ: ಶಿವರಾಜ್​ಕುಮಾರ್​

ಈಗ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ರೈತರ ಹೋರಾಟದ ಬಗ್ಗೆ ಮಾತನಾಡಿದ್ದಾರೆ. 'ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ. ಯಾರೂ ಹೋರಾಟದ ಬಗ್ಗೆ ಕಮೆಂಟ್ ಮಾಡ್ತಿಲ್ಲ ಅಂತಾರೆ. ಕಮೆಂಟ್​ ಮಾಡಿದರೆ ಮಾತ್ರ ಬೆಂಬಲ ನೀಡಿದಂತೆ ಅಲ್ಲ' ಎಂದಿದ್ದಾರೆ. 

ಶಿವರಾಜ್​ಕುಮಾರ್​

ಶಿವರಾಜ್​ಕುಮಾರ್​

  • Share this:
ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ (Farmers Protest) ನಡೆಸುತ್ತಿರುವ ರೈತರಿಗೆ  ಹಲವರು ಬೆಂಬಲ ಸೂಚಿಸಿದರೆ. ಮತ್ತೆ ಕೆಲವರು ಅವರ ವಿರುದ್ಧವಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಕ್ತ ವಿಷಯಗಳ ಬಗ್ಗೆ ದನಿ ಎತ್ತುವ ಸ್ಟಾರ್​ಗಳು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂದು ಸಾಕಷ್ಟು ಮಂದಿ ಟೀಕಿಸಿದ್ದರು. ಇದರ ನಡುವೆಯೇ ಹಾಲಿವುಡ್​ (Hollywood) ಪಾಪ್​ ಸಿಂಗರ್ ರಿಹಾನ್ನಾ (Rihanna) ಸಹ ರೈತರಿಗೆ ಬೆಂಬಲ ನೀಡುತ್ತಾ ಟ್ವೀಟ್​ ಮಾಡಿದ್ದರು. ಇದಾದ ನಂತರ  ಸಾಮಾಜಿಕ ಜಾಲತಾಣದಲ್ಲಿ (Social Media) ಒಂದರ ಹಿಂದೆ ಒಂದರಂತೆ ಹಾಲಿವುಡ್​ ಸೆಲೆಬ್ರಿಟಿಗಳ ಟ್ವೀಟ್​ ಬರಲಾರಂಭಿಸಿತು. ರೈತರ ಪ್ರತಿಭಟನೆ ವಿಷಯದಲ್ಲಿ ಸರ್ಕಾರದ ವಿರುದ್ಧ ಟ್ವೀಟ್​ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಯಿತು. ಹಾಲಿವುಡ್​ ಸೆಲೆಬ್ರಿಟಿಗಳು ಟ್ವೀಟ್​ ಮಾಡುತ್ತಿದ್ದಂತೆಯೇ ಭಾರತದಲ್ಲೂ ಸಾಕಷ್ಟು ಮಂದಿ ಬಾಲಿವುಡ್ ಸ್ಟಾರ್​ಗಳು ರೈತರ ಪ್ರತಿಭಟನೆ ಪರವಾಗಿ ಟ್ವೀಟ್ ಮಾಡಲು ಶುರು ಮಾಡಿದರು. ಆಗ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳನ್ನು ಟೀಕಿಸುತ್ತಾ ಸಾಕಷ್ಟು ಮಂದಿ ನೆಟ್ಟಿಗರು ಪೋಸ್ಟ್​ ಮಾಡಲಾರಂಭಿಸಿದರು. 

ಈಗ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ರೈತರ ಹೋರಾಟದ ಬಗ್ಗೆ ಮಾತನಾಡಿದ್ದಾರೆ. 'ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ. ಯಾರೂ ಹೋರಾಟದ ಬಗ್ಗೆ ಕಮೆಂಟ್ ಮಾಡ್ತಿಲ್ಲ ಅಂತಾರೆ. ಕಮೆಂಟ್​ ಮಾಡಿದರೆ ಮಾತ್ರ ಬೆಂಬಲ ನೀಡಿದಂತೆ ಅಲ್ಲ' ಎಂದಿದ್ದಾರೆ.

Shivarajkumar
ಶಿವ ರಾಜ್​​ಕುಮಾರ್


'ನಮ್ಮ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳೋಕೆ ಆಗುತ್ತಿಲ್ಲ. ಅಂತದ್ರಲ್ಲಿ ನಮ್ಮ ಕೈಯಲ್ಲಿ ಏನಿದೆ. ರೈತರು ಕಷ್ಟ ಪಡೋದು, ರೋಡಲ್ಲಿ ಅಡುಗೆ ಮಾಡೋದೆಲ್ಲ ನೋಡಿದ್ರೆ ಪಾಪ‌ ಅನ್ಸುತ್ತೆ.  ಆದರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿ ಇಳಿಯೋದ್ರಿಂದ ಸಮಸ್ಯೆಗೆ ಪರಿಹಾರ ಆಗೋಲ್ಲ. ರೈತರು ಏನೇ ಮಾಡಿದ್ರು ನಮ್ಮ ಸಪೋರ್ಟ್ ಖಂಡಿತ ಇದೆ' ಎಂದಿದ್ದಾರೆ ಶಿವ ರಾಜ್​ಕುಮಾರ್​.

ಇನ್ನು ಸ್ಯಾಂಡಲ್​ವುಡ್​ ನಿರ್ದೇಶಕ ಕವಿ ರಾಜ್​ ಈ ಹಿಂದೆ ರೈತರ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಇವರದೆಲ್ಲಾ ಒಂದೇ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ದೇಶಪ್ರೇಮ ಉಕ್ಕಿ ಹರಿದು ಮಾಡಿದ ಸಹಜ ಟ್ವೀಟ್ ಗಳಲ್ಲ. ರಿಹಾನ ಟ್ವೀಟ್ ಇಂದ ಆದ ಡ್ಯಾಮೇಜ್...

Posted by Kavi Raj on Thursday, 4 February 2021


ಬಾಲಿವುಡ್​ ಸ್ಟಾರ್​ಗಳ ಟ್ವೀಟ್​ ವಾರ್​

ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಇತರೆ ಪ್ರಸಕ್ತ ವಿಷಯಗಳು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು ಎಂದು ಕರೆಯುವ ಮೂಲಕ ನಟಿ ಕಂಗನಾ ಅನೇಕರ ಟೀಕೆಗೆ ಗುರಿಯಾಗಿದ್ದರು.

ನಟಿ ತಾಪ್ಸಿ ಪನ್ನು (Taapsee Pannu) ಹಾಗೂ ಕಂಗನಾ ರನೌತ್ (Kangana Ranaut) ನಡುವೆ ಆಗಾಗ ಟ್ವೀಟ್​ ವಾರ್ ನಡೆಯುತ್ತಲೇ ಇರುತ್ತದೆ. ಈ ಹಿಂದೆಯೂ ಸಾಕಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಈ ನಟಿಯರು ಒಬ್ಬರನ್ನೊಬ್ಬರು ಟೀಕಿಸುತ್ತಾ ಟ್ವೀಟ್​ ಮಾಡಿದ್ದರು. ಸುಶಾಂತ್​ ಸಾವಿನ ವಿಷಯದಲ್ಲೂ ಕಂಗನಾ-ತಾಪ್ಸಿ ನಡುವೆ ಡೈಲಾಗ್​ಗಳ ವಿನಿಮಯವಾಗಿತ್ತು. ಇನ್ನು ರೈತರ ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ  ಮತ್ತೆ ನಟಿ ತಾಪ್ಸಿ ಪನ್ನುಕಂಗನಾ ಅವರ ಹೆಸರನ್ನು ಹೇಳದೆಯೇ ಪರೋಕ್ಷವಾಗಿ ಮಾಡಿದ್ದಾರೆ. ಅಲ್ಲದೆ ಆ ಟ್ವೀಟ್​ಗೆ ಕಂಗನಾ ಸಹ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿದ್ದರೂ ಭಾರತೀಯ ಸಂಪ್ರದಾಯ ಮರೆಯದ ಪ್ರಿಯಾಂಕಾ ಚೋಪ್ರಾ..!

ರೈತರ ಪ್ರತಿಭಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನ ಹಾಗೂ ಸೆಲೆಬ್ರಿಟಿಗಳು ಮಾಡುತ್ತಿರುವ ಕುರಿತಾಗಿಯೇ ತಾಪ್ಸಿ ಟ್ವೀಟ್​ ಮಾಡಿದ್ದಾರೆ. ಒಂದು ಟ್ವೀಟ್​ ನಿಮ್ಮ ಐಕ್ಯತೆಯನ್ನು ಒಡೆಯವುದಾದರೆ, ಒಂದು ಜೋಕ್​ ನಿಮ್ಮ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಾದರೆ ನೀವು ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಆದರ್ಶ ಪಾಠ ಮಾಡುವ ಶಿಕ್ಷಕರಾಗಬಾರದು ಎಂದು ಬರೆದುಕೊಂಡಿದ್ದಾರೆ.
Published by:Anitha E
First published: