• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mahadayi Project ಕಾಮಗಾರಿ ಆರಂಭವಾಗುವರೆಗೆ ಸರಣಿ ಉಪವಾಸ ಸತ್ಯಾಗ್ರಹ; ಹೋರಾಟ ಹೈಜಾಕ್ ಮಾಡಿದ್ರಾ ಕೋನರೆಡ್ಡಿ?

Mahadayi Project ಕಾಮಗಾರಿ ಆರಂಭವಾಗುವರೆಗೆ ಸರಣಿ ಉಪವಾಸ ಸತ್ಯಾಗ್ರಹ; ಹೋರಾಟ ಹೈಜಾಕ್ ಮಾಡಿದ್ರಾ ಕೋನರೆಡ್ಡಿ?

ಪ್ರತಿಭಟನೆ

ಪ್ರತಿಭಟನೆ

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಯೋಜನೆ ಕಾಮಗಾರಿ ಆರಂಭವಾಗುವರೆಗೆ ನಮ್ಮ ಉಪವಾಸ ಸತ್ಯಾಗ್ರಹ ನಿರಂತರವಾಗಿರುತ್ತದೆ ಎಂದರು.

  • Share this:

ಧಾರವಾಡ : ಮಹದಾಯಿ ಹಾಗೂ ಕಳಸಾಬಂಡೂರಿ ನಾಲಾ ನೀರು ವಿವಾದಕ್ಕೆ (Mahadayi And Kalasabanduri) ಸಂಬಂಧಿಸಿದಂತೆ ನ್ಯಾಯಾಧೀಕರಣ ಮಧ್ಯಂತರ ತೀರ್ಪು ನೀಡಿ ನಾಲ್ಕು ವರ್ಷಗಳೇ ಗತಿಸುತ್ತಿವೆ. ಆದ್ರೆ ಸರ್ಕಾರ  ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು ಬಿಟ್ರೆ ಬೇರೆನೂ ಮಾಡಿಯೇ ಇಲ್ಲ.  ಹೀಗಾಗಿ ಪುನಃ ಈಗ ರೈತರು (Farmers) ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದ್ದು, ನವಲಗುಂದದಲ್ಲಿ (Navalagunda) ನಡೆದ 42ನೇ ರೈತ ಹುತಾತ್ಮ ದಿನಾಚರಣೆ ವೇದಿಕೆಯಲ್ಲೇ ಸರಣಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗಿದ್ದು, ಇದು ಮತ್ತೊಂದು ಮಹದಾಯಿ ಬಂಡಾಯದ ಮುನ್ಸೂಚನೆ ನೀಡಿದೆ. ಹೌದು ಮಹದಾಯಿ ವಿವಾದಕ್ಕೆ (Mahadayi Controversy) ಸಂಬಂಧಿಸಿದಂತೆ 2018ರ ಅಗಸ್ಟ್ ನಲ್ಲಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ನೀಡಿತ್ತು. ಬಳಿಕ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದಿದ್ದ ರೈತರ ಹೋರಾಟ ನಿಂತು ಹೋಗಿತ್ತು.


ಹೋರಾಟ ನಿಂತು ಈಗ ನಾಲ್ಕು ವರ್ಷ ಆಗೋಕೆ ಬಂದಿದೆ. ಆದ್ರೆ ತೀರ್ಪು ಬಂದ ಬಳಿಕ ಸರ್ಕಾರ ಏನು ಮಾಡಿಲ್ಲ. ಹೀಗಾಗಿ ಇದು ಈಗ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.


ಸರಣಿ ಉಪವಾಸ ಸತ್ಯಾಗ್ರ ಹ


ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದ ರೈತ ಬಂಡಾಯದ 42ನೇ ಹುತಾತ್ಮ ದಿನಾಚರಣೆಯ ವೇದಿಕೆಯಲ್ಲಿಯೇ ಮಹದಾಯಿಗಾಗಿ ಮಹಾವೇದಿಕೆ ಮೂಲಕ ಸರಣಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗಿದ್ದು, ನಿತ್ಯ ಐವರು ರೈತರು ನವಲಗುಂದದಲ್ಲಿ ಸರಣಿ ಉಪವಾಸಕ್ಕೆ ಕುಳಿತುಕೊಳ್ಳಲಿದ್ದಾರೆ. ಮಹದಾಯಿ ಯೋಜನೆಯ ಕಾಮಗಾರಿ ಶುರು ಆಗೋವರೆಗೂ ಈ ಸರಣಿ ಉಪವಾಸ ಸತ್ಯಾಗ್ರಹ ನಿರಂತವಾಗಿ ನಡೆಯಲಿದೆ.


ಇದನ್ನೂ ಓದಿ:  Sri Siddalinga Swamiji: ಇಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳ ಜನ್ಮದಿನ


ಈ ಕುರಿತು ಮಾತನಾಡಿದ‌ ಮಹದಾಯಿ ಹೋರಾಟಗಾರರಾದ ಲೋಕನಾಥ್ ಹೆಬಸೂರ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹದಾಯಿ ಯೋಜನೆಯನ್ನು ತಮ್ಮ ರಾಜಕೀಯವಾಗಿ ಬಳಕೆ ಮಾಡಿಕೋಳ್ಳುತ್ತಿದೆ. ಮೊದಲು ಬಸವರಾಜ್ ಬೊಮ್ಮಾಯಿ, ಶಂಕರಪಾಟೀಲ್ ಮುನೇಕೊಪ್ಪ, ಸಿ. ಸಿ. ಪಾಟೀಲ ಸೇರಿದಂತೆ‌ ಹಲವರಿಗೆ ರಾಜಕೀಯ ಬದುಕು ಕಟ್ಟಿಕೊಟ್ಟಿರೊದೇ ಈ ಹೋರಾಟ. ಆದ್ರೆ ಇದೇ ಹೋರಾಟದ‌ ಮೂಲಕ ಬಂದಿರೊ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇತ್ತ ತಿರುಗಿ ಸಹ ನೋಡುತ್ತಿಲ್ಲ.


Farmers protest over Mahadayi row in navalagunda myd mrq
ಪ್ರತಿಭಟನೆ


ಬಿಜೆಪಿ ಸರ್ಕಾರ ಇದ್ರೂ ಪ್ರಯೋಜನ ಆಗ್ತಿಲ್ಲ


ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಯೋಜನೆ ಕಾಮಗಾರಿ ಆರಂಭವಾಗುವರೆಗೆ ನಮ್ಮ ಉಪವಾಸ ಸತ್ಯಾಗ್ರಹ ನಿರಂತರವಾಗಿರುತ್ತದೆ ಎಂದರು.


ರೈತ ಹುತಾತ್ಮ ದಿನಾಚರಣೆ ವೇದಿಕೆಯಲ್ಲಿ ಲೋಕನಾಥ್ ಹೆಬಸೂರ ಆಮರಣ ಉಪವಾಸ ಸತ್ಯಾಗ್ರಹವನ್ನೇ ಆರಂಭಿಸಿದ್ದರು. ಅದನ್ನೇ ಮುಂದುವರಿಸೋದಾಗಿಯೂ ಹೇಳಿದ್ದರು. ಆದ್ರೆ ಆ ಬಳಿಕ ಅವರ ಮೇಲೆ ಒತ್ತಡ ಹಾಕಿ ಸರಣಿ ಉಪವಾಸ ಸತ್ಯಾಗ್ರಹ ಮಾತ್ರ ನಡೆಸುವಂತೆ ಕೇಳಿಕೊಳ್ಳಲಾಗಿದೆಯಂತೆ.


Farmers protest over Mahadayi row in navalagunda myd mrq
ಪ್ರತಿಭಟನೆ


ಮಹದಾಯಿ ಹೋರಾಟ ಹೈಜಾಕ್ ?


ಹೀಗಾಗಿ ನವಲಗುಂದದಲ್ಲಿ ಈಗ ಮೊದಲಿನಂತೆಯೇ ನಿರಂತರವಾಗಿ ಮತ್ತೆ ಮಹದಾಯಿ ಹೋರಾಟ ಶುರುವಾಗುತ್ತಿದೆ. ಆದ್ರೆ ಮತ್ತೊಂದೆಡೆ ವಿಧಾನಸಭೆ ಚುನಾವಣೆ ಬರುತ್ತಿರೋ ಕಾರಣಕ್ಕೆ ರಾಜಕೀಯ ಪಕ್ಷಗಳು ಮಹದಾಯಿ ಹೋರಾಟ ಹೈಜಾಕ್ ಮಾಡೋಕೆ ಪ್ರಯತ್ನಿಸ್ತಾ ಇವೆ ಅನ್ನೋ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ:  Madikeri: ಪದೇ ಪದೇ ಜಲಸ್ಫೋಟ! ಕೊಡಗಿನ ರಾಮಕೊಲ್ಲಿಯ ಬೆಟ್ಟವೇ ಕುಸಿಯುವ ಆತಂಕ


ಮುಖ್ಯವಾಗಿ ಇಲ್ಲಿಯವರೆಗೂ ರೈತರೊಂದಿಗೆ ಇದ್ದ, ಈ ಹೋರಾಟದ ಮೂಲಕವೇ ಜೆಡಿಎಸ್ ನಿಂದ ನವಲಗುಂದ ಕ್ಷೇತ್ರ ಗೆದ್ದಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಈಗ ಕಾಂಗ್ರೆಸ್ ಸೇರಿದ್ದಾರೆ. ಈಗ ಅವರು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟು, ತಮ್ಮದೇ ಪ್ರತ್ಯೇಕವಾದ ಮಹದಾಯಿ ಮತ್ತೊಂದು ಹೋರಾಟ ವೇದಿಕೆ ಮಾಡಿಕೊಂಡಿದ್ದಾರೆ.


Farmers protest over Mahadayi row in navalagunda myd mrq
ಪ್ರತಿಭಟನೆ


ರೈತರಿಗೆ ಸಿಗಬೇಕಾದ ನೀರು ಸಿಗಬೇಕು


ಈ ಬಗ್ಗೆ ಮಾಜಿ ಶಾಸಕ ಎನ್.ಹೆಚ್.ಕೊನರಡ್ಡಿ ಮಾತನಾಡಿ, ಮಹದಾಯಿ ಹೋರಾಟವನ್ನು ನಾವು ನಮ್ಮ ಸ್ನೇಹಿತರು ಸೇರಿ ಆರಂಭ ಮಾಡಿದ್ದೇವೆ. ಯಾವುದೇ ರಾಜಕೀಯ ಪಕ್ಷಕ್ಕೆ‌ ಸಿಮಿತವಾಗದೇ ರೈತರ ಒಳಿತಿಗೆ ಈ ಹೋರಾಟ ಇದೆ.  ಮಹದಾಯಿ ಹೋರಾಟ ಹೈಜಾಕ್ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿದೆ. ಆದ್ರೆ ನಾವೇಕೆ ಹೈಜಾಕ್‌ ಮಾಡಬೇಕು, ಹೋರಾಟಗಾರರ ಒಪ್ಪಿಗೆ ಮೇರೆಗೆ ಪ್ರತ್ಯೇಕ ಹೋರಾಟ ವೇದಿಕೆ ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ನಮ್ಮ ರೈತರಿಗೆ ಸಿಗಬೇಕಿದ್ದ‌ ನೀರು ಸಿಗಬೇಕು. ಅದಕ್ಕೆ ನಮ್ಮ‌ ಹೋರಾಟ ಎಂದರು.


ಈಗಾಗಲೇ ನಮ್ಮ ರಾಜ್ಯಕ್ಕೆ 3.90 ಟಿಎಂಸಿ ಕುಡಿಯುವ ನೀರು ಹಂಚಿಕೆ ಮಾಡಿದ್ದರೂ ಇದಕ್ಕಾಗಿ ಇನ್ನುವರೆಗೂ ಡಿಪಿಆರ್ ಸಹ ಮಾಡಿಲ್ಲ. ಇದಕ್ಕಾಗಿ ಸರ್ಕಾರ ಮೀಸಲಿಟ್ಟ 1677 ಕೋಟಿ ರೂಪಾಯಿಯೂ ಹಾಗೆಯೇ ಉಳಿದು ಬಿಟ್ಟಿದೆ. ಹೀಗಾಗಿ ಈಗ ರೈತರ ಆಕ್ರೋಶದ ಕಟ್ಟೆ ನಿಧಾನಕ್ಕೆ ಒಡೆಯುತ್ತಿದ್ದು, ಈಗ ಆರಂಭಗೊಂಡಿರೋ ಸರಣಿ ಉಪವಾಸ ಸತ್ಯಾಗ್ರಹ ಮತ್ತೊಂದು ಮಹದಾಯಿ ಬಂಡಾಯಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.

Published by:Mahmadrafik K
First published: