HOME » NEWS » State » FARMERS PROTEST FARMERS RALLY AGAINST UNION GOVERNMENT ACTS IN BENGALURU TODAY TRAFFIC JAM AREAS SCT

Farmers Protest: ಬೆಂಗಳೂರಿನಲ್ಲಿ ಇಂದು ರೈತರ ಬೃಹತ್ ಪ್ರತಿಭಟನೆ; ವಾರದ ಮೊದಲ ದಿನವೇ ಟ್ರಾಫಿಕ್ ಜಾಮ್ ಸಾಧ್ಯತೆ

Bangalore Farmers Protest: ಇಂದು ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ರೈತರ ರ್ಯಾಲಿ ಹೊರಡಲಿದೆ. ಆ ಬಳಿಕ‌ ರೈತರು ವಿಧಾನಸೌಧ ಚಲೋ ನಡೆಸಲಿದ್ದಾರೆ. ಸುಮಾರು 25 ಸಾವಿರ ಮಂದಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ

news18-kannada
Updated:March 22, 2021, 8:05 AM IST
Farmers Protest: ಬೆಂಗಳೂರಿನಲ್ಲಿ ಇಂದು ರೈತರ ಬೃಹತ್ ಪ್ರತಿಭಟನೆ; ವಾರದ ಮೊದಲ ದಿನವೇ ಟ್ರಾಫಿಕ್ ಜಾಮ್ ಸಾಧ್ಯತೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾ. 22): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ರೈತರ ಬೃಹತ್ ಹೋರಾಟ ನಡೆಯಲಿದೆ. ದೆಹಲಿ ರೈತ ನಾಯಕರ ನೇತೃತ್ವದಲ್ಲಿ ರೈತರ ರಣಕಹಳೆ ಮೊಳಗಲಿದ್ದು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿಧಾನಸೌಧ ಚಲೋ ರ್ಯಾಲಿ ನಡೆಯಲಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ, ಕೃಷಿ ಕಾಯ್ದೆ, ಖಾಸಗೀಕರಣವನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಯಲಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರ್ಯಾಲಿ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ರೈತರ ವಿಧಾನಸೌಧ ಚಲೋ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಗೆ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್, ಡಾ. ಸುದರ್ಶನ್ ಪಾಲ್, ಯುದ್ದವೀರ್ ಸಿಂಗ್ ಭಾಗಿಯಾಗಲಿದ್ದಾರೆ.

ಸಂಯುಕ್ತ ಹೋರಾಟ ಮತ್ತು ಕರ್ನಾಟಕ ಸಂಘಟನೆ ಮೂಲಕ ರೈತರ ರ್ಯಾಲಿ ಆಯೋಜನೆ ಮಾಡಲಾಗಿದೆ. ರೈಲು ನಿಲ್ದಾಣ, ಆನಂದ ರಾವ್ ಫ್ಲೈಓವರ್, ಶೇಷಾದ್ರಿ ರಸ್ತೆ, ಕೆ ಅರ್ ರಸ್ತೆ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ವಿಧಾನ ಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್​ನಲ್ಲಿ ಸಮಾವೇಶ ನಡೆಸಲು ಪೊಲೀಸರು ಅವಕಾಶ ನೀಡಿದ್ದಾರೆ.

ಇದನ್ನೂ ಓದಿ: Ripped Jeans: ಹರಿದ ಜೀನ್ಸ್ ವಿವಾದ; 70ರ ದಶಕದಲ್ಲೇ ಶುರುವಾಗಿತ್ತು ಸೀಳಿದ ಜೀನ್ಸ್ ಟ್ರೆಂಡ್

ಇಂದಿನ ರ್ಯಾಲಿಯಲ್ಲಿ ಸುಮಾರು 25 ಸಾವಿರ ರೈತರು ಭಾಗವಹಿಸುತ್ತಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ದಲಿತ ಸಂಘಟನೆಗಳು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ಸೇರಿ ಹಲವು ರೈತ ನಾಯಕರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

ಹೀಗಾಗಿ, ವಾರದ ಮೊದಲ ದಿನವೇ ಸಿಲಿಕಾನ್ ಸಿಟಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆಯಿದೆ. ರೈತರ ಬೃಹತ್ ರ್ಯಾಲಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಮೆಜೆಸ್ಟಿಕ್ ಸಂಪರ್ಕಿಸುವ ರಸ್ತೆಗಳು, ಶೇಷಾದ್ರಿ ರಸ್ತೆ, ಕೆ ಜಿ ರಸ್ತೆ, ಕೆ ಅರ್ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಓಕಳಿಪುರಂ ಜಂಕ್ಷನ್ ಮಲ್ಲೇಶ್ವರಂ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.

ರಾಜ್ಯದ ಎಲ್ಲಾ ಭಾಗಗಳಿಂದ ರೈತರು ಆಗಮಿಸೋ ಸಾಧ್ಯತೆಯಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ರೈತರ ರ್ಯಾಲಿ ಹೊರಡಲಿದೆ. ಆ ಬಳಿಕ‌ ರೈತರು ವಿಧಾನಸೌಧ ಚಲೋ ನಡೆಸಲಿದ್ದಾರೆ.
Youtube Video

ಸುಮಾರು 25 ಸಾವಿರ ಮಂದಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರರಿಂದ ಮಾಹಿತಿ ನೀಡಿದ್ದಾರೆ.
Published by: Sushma Chakre
First published: March 22, 2021, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories