HOME » NEWS » State » FARMERS PROTEST AGAINST GOVERNMENT TO CONDEMN PARTIALITY OF UTTARA KARNATAKA DEVELOPMENT LG

ಉತ್ತರ ಕರ್ನಾಟಕ ಅಭಿವೃದ್ಧಿ ತಾರತಮ್ಯ ಖಂಡಿಸಿ ಪಾದಯಾತ್ರೆ ಅಂತ್ಯ; ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ರೈತರು

ಉತ್ತರ ಕರ್ನಾಟಕದವರೇ ಮುಂದೆ ಮುಖ್ಯಮಂತ್ರಿ ಆಗಬೇಕು. ಮಹದಾಯಿ ಹೋರಾಟಗಾರ ವಿರೇಶ್ ಸೊಬರದಮಠ ಮನವೊಲಿಕೆಯಿಂದ ಪಾದಯಾತ್ರೆ ಕೈಬಿಡಲಾಗಿದೆ,ಈ ಬಗ್ಗೆ ಮುಂದಿನ ದಿನಗಳಲ್ಲಿ ಕೋರ್ಟ್ ಪಿಐಎಲ್ ಹಾಕುವ ಮೂಲಕ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಯಾಸೀನ್ ಜವಳಿ ಹೇಳಿದರು.

news18-kannada
Updated:January 24, 2021, 9:58 PM IST
ಉತ್ತರ ಕರ್ನಾಟಕ ಅಭಿವೃದ್ಧಿ ತಾರತಮ್ಯ ಖಂಡಿಸಿ ಪಾದಯಾತ್ರೆ ಅಂತ್ಯ; ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ರೈತರು
ರೈತರ ಪ್ರತಿಭಟನೆ
  • Share this:
ಬಾಗಲಕೋಟೆ (ಜ.24): ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಪರ್ವ ಶುರುವಾಗಿದೆ. ಒಂದೆಡೆ ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ, ನ್ಯಾಯಕ್ಕಾಗಿ ಪಾದಯಾತ್ರೆ ಇದೀಗ ಅಂತ್ಯಗೊಂಡು ಕಾನೂನಾತ್ಮಕ ಹೋರಾಟಕ್ಕೆ ರೈತರು ಮುಂದಾಗಿದ್ದಾರೆ. ವಿಜಯಪುರದ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ(ರಿ) ಸಂಸ್ಥಾಪಕ ಅಧ್ಯಕ್ಷ ಯಾಸೀನ್ ಜವಳಿ ನೇತೃತ್ವದಲ್ಲಿ ಬಸವಣ್ಣನ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆ ಐದನೆ ದಿನಕ್ಕೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಬರೋಬರಿ 135ಕಿಲೋ ಮೀಟರ್ ಕ್ರಮಿಸಿ  ಬಂದಿದ್ದು,ಮಹದಾಯಿ ಹೋರಾಟಗಾರ ವಿರೇಶ್ ಸೊಬರದಮಠ ಅವರ ಮನವೊಲಿಕೆಯಿಂದ ಕೆರೂರು ಪಟ್ಟಣದಲ್ಲಿ ಯಾಸೀನ್ ಜವಳಿ ಹಾಗೂ ಹೋರಾಟಗಾರರಿಗೆ ಎಳೆ ನೀರು ಕುಡಿಸುವ ಮೂಲಕ  ಪಾದಯಾತ್ರೆ ಕೈಬಿಡಲಾಯಿತು.

ಪಾದಯಾತ್ರೆ ಮುಕ್ತಾಯ, ಕಾನೂನು ಹೋರಾಟಕ್ಕೆ ಅಣಿಯಾದ ರೈತರು

ಉತ್ತರ ಕರ್ನಾಟಕದ ಸರ್ವತೋಮುಖ ಪ್ರಗತಿಗಾಗಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಯಾಸೀನ್ ಜವಳಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ 9 ಬೇಡಿಕೆಯೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕೆರೂರು ಪಟ್ಟಣದ ಎ ಆರ್ ಹಿರೇಮಠ್ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ಮಾಡಲಾಯಿತು. ಈ ವೇಳೆ ರೈತ ಹೋರಾಟಗಾರರು ಮಾತನಾಡಿದರು.

ನೀರಾವರಿ, ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ , ನಿರುದ್ಯೋಗ ನಿವಾರಣೆಯಲ್ಲಿ ತಾರತಮ್ಯ, ಕೈಗಾರಿಕೆ, ರಾಜಕೀಯ ಕ್ಷೇತ್ರದಲ್ಲಿ ತಾರತಮ್ಯ, ಹಾಗೂ ಮತಕ್ಷೇತ್ರಗಳಲ್ಲಿ ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಮೂಲಭೂತ ಸೌಕರ್ಯ ಒದಗಿಸುವಲ್ಲಿ ತಾರತಮ್ಯ ಖಂಡಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.ಆದರೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪನವವರು ಸ್ಪಂದಿಸುತ್ತಿಲ್ಲ. ಕುರುಬರು ಎಸ್ ಟಿ ಮೀಸಲಾತಿಗಾಗಿ ಪಾದಯಾತ್ರೆ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಆಗ್ರಹಿಸಿ ಪಾದಯಾತ್ರೆ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.

ಸ್ವಾಮೀಜಿಗಳ ನಡಿಗೆಗೆ ಬೆಲೆ ಕೊಡುತ್ತಿಲ್ಲ, ಹಾಗಾಗಿ ನಾವು ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೋರಾಟವನ್ನು ಕಾನೂನಾತ್ಮಕವಾಗಿ ಕೋರ್ಟ್ ನಲ್ಲಿ ಹೋರಾಟ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಉತ್ತರ ಕರ್ನಾಟಕದವರೇ ಮುಂದೆ ಮುಖ್ಯಮಂತ್ರಿ ಆಗಬೇಕು. ಮಹದಾಯಿ ಹೋರಾಟಗಾರ ವಿರೇಶ್ ಸೊಬರದಮಠ ಮನವೊಲಿಕೆಯಿಂದ ಪಾದಯಾತ್ರೆ ಕೈಬಿಡಲಾಗಿದೆ,ಈ ಬಗ್ಗೆ ಮುಂದಿನ ದಿನಗಳಲ್ಲಿ ಕೋರ್ಟ್ ಪಿಐಎಲ್ ಹಾಕುವ ಮೂಲಕ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಯಾಸೀನ್ ಜವಳಿ ಹೇಳಿದರು.

ಕೊಡಗು: ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ ನಗರವಾಸಿಗಳು

ರಾಜ್ಯದಲ್ಲಿ ಆಡಳಿತ, ವಿರೋಧ ಪಕ್ಷಗಳು ಭ್ರಷ್ಟ ಪಕ್ಷಗಳಿವೆ. ಯಾಸೀನ್ ಜವಳಿ ನೇತೃತ್ವದಲ್ಲಿ ಬಸವನ ಬಾಗೇವಾಡಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.ಆದರೆ ಸರ್ಕಾರಕ್ಕೆ ಕಿವಿ ಇಲ್ಲ. ಮುಂದೆ ನಾವೆಲ್ಲ ರೈತರು ಕಾನೂನಾತ್ಮಕ ಹೋರಾಟಕ್ಕೆ ಅಣಿಯಾಗಲಿದ್ದೇವೆ.2018ರಲ್ಲಿ ನಂಜುಂಡಪ್ಪ ವರದಿ ಅನುಷ್ಠಾನ ಬಗ್ಗೆ ಕ್ಯಾಬಿನೆಟ್ ನಲ್ಲಿ ಅನುಮೋದನೆ ಆಗಿದೆ.ಆದರೆ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ನಂಜುಂಡಪ್ಪ ವರದಿ ಜಾರಿಗೆ ಬಂದರೆ 5ಲಕ್ಷ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ,ಎರಡನೇ ರಾಜಧಾನಿ ಬೆಳಗಾವಿಗೆ ಕಚೇರಿಗಳು ಸ್ಥಳಾಂತರ ಮಾಡಬೇಕೆಂದು ಮಹದಾಯಿ ಹೋರಾಟಗಾರ ವಿರೇಶ್ ಸೊಬರದಮಠ ಆಗ್ರಹಿಸಿದರು.ಕಳೆದ ಐದು  ದಿನಗಳಿಂದ ನೂರಾರು ರೈತ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಸಿರು ಶಾಲು ಹೊತ್ತು, ರೈತಪರವಾದ ಗೀತೆಗಳನ್ನು ಮೊಳಗಿಸುತ್ತಾ, ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿ, ಅನುದಾನ ಒದಗಿಸಿ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.ಬಸವಣ್ಣನ ಜನ್ಮ ಸ್ಥಳ ಬಸವನ ಬಾಗೇವಾಡಿಯಿಂದ ಕೋಲ್ಹಾರ್ ,ಬೀಳಗಿ,ಗದ್ದನಕೇರಿ ಕ್ರಾಸ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಸಂಜೆ ಆಗಮಿಸಿ, ಪಾದಯಾತ್ರೆ ಮುಕ್ತಾಯ ಮಾಡಲಾಯಿತು.

ಪಾದಯಾತ್ರೆಯಲ್ಲಿ ನ್ಯಾಯವಾದಿ ಎಂ.ಎಚ್. ರೋಜೆವಾಲೆ, ಮಾರುತಿ ಚವ್ಹಾಣ, ಸಲಾಹುದ್ದೀನ್ ಇಮಾರತವಾಲೆ, ವಿಷ್ಣು ಶಿಂಧೆ, ಶೋಯೆಬ್ ಪಠಾಣ, ಏಜಾಜ್ ಮುಲ್ಲಾ, ಅಲ್ಫಾನ್ ಸನದಿ, ಇಬ್ರಾಹಿಂ ಜವಳಿ ಸೇರಿದಂತೆ ಮಹಿಳೆಯರು ಸೇರಿದಂತೆ ಅನೇಕರು  ಪಾಲ್ಗೊಂಡಿದ್ದರು.
Published by: Latha CG
First published: January 24, 2021, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories