ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ; ನಟ ಚೇತನ್ ಸೇರಿ 300 ಪ್ರತಿಭಟನಾಕಾರರ ಬಂಧನ

Farmers Protest: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಆ ದಿನಗಳು ಖ್ಯಾತಿಯ ನಟ ಚೇತನ್ ಸೇರಿದಂತೆ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. 5 ಬಸ್​ಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ, ಕರೆದೊಯ್ಯಲಾಗಿದೆ.

news18-kannada
Updated:September 25, 2020, 12:57 PM IST
ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ; ನಟ ಚೇತನ್ ಸೇರಿ 300 ಪ್ರತಿಭಟನಾಕಾರರ ಬಂಧನ
ನಟ ಚೇತನ್
  • Share this:
ಬೆಂಗಳೂರು (ಸೆ. 25): ರೈತ ವಿರೋಧಿ ಕಾಯ್ದೆ ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದೆ. ರೈತರ ಪ್ರತಿಭಟನೆಗೆ ಸ್ಪಂದಿಸದ ಸರ್ಕಾರದ ನಡೆಯನ್ನು ವಿರೋಧಿಸಿ ಇಂದು ಅನೇಕ ರೈತ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಆ ದಿನಗಳು ಖ್ಯಾತಿಯ ನಟ ಚೇತನ್ ಸೇರಿದಂತೆ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. 5 ಬಸ್​ಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ, ಕರೆದೊಯ್ಯಲಾಗಿದೆ.

ರೈತರು, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಯಿತು. ಪ್ರತಿಭಟನಾ ಸ್ಥಳದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಷಣ ಮಾಡುತ್ತಿದ್ದರು. ಈ ವೇಳೆ ಭಾಷಣದ ಮಧ್ಯದಲ್ಲೇ ರೈತರನ್ನು ಪೊಲೀಸರು ಬಂಧಿಸಿ, ಬಸ್​ನಲ್ಲಿ ಕರೆದೊಯ್ದಿದ್ದಾರೆ. ಮೌರ್ಯ ಸರ್ಕಲ್​ನಿಂದ ಹೊರಟ ಅನ್ನದಾತರು ಪಾದಯಾತ್ರೆ ಮೂಲಕ ಮೈಸೂರು ಬ್ಯಾಂಕ್ ಸರ್ಕಲ್​ಗೆ ಆಗಮಿಸಿದ್ದರು.

ಇದನ್ನೂ ಓದಿ: Karnataka Bandh: ರೈತ ವಿರೋಧಿ ಕಾಯ್ದೆ ಖಂಡಿಸಿ ಇಂದು ರಸ್ತೆ ತಡೆ; ಎಲ್ಲೆಲ್ಲಿ ಪ್ರತಿಭಟನೆ ಬಿಸಿ?

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, 300ಕ್ಕೂ ಹೆಚ್ಚು ರೈತರು ಮತ್ತು ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು. ಈ ರೈತ ಹೋರಾಟಕ್ಕೆ ಆ ದಿನಗಳು ಚೇತನ್ ಸಾಥ್ ನೀಡಿದ್ದರು. ಆದರೆ, ನಟ ಚೇತನ್ ಜೊತೆ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಬಿಎಂಟಿಸಿ ಬಸ್​ಗಳಲ್ಲಿ ತುಂಬಿಕೊಂಡು ಕರೆದೊಯ್ದಿದ್ದಾರೆ. ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದ ಮಹಿಳೆಯರನ್ನು ಕೂಡ ಮಹಿಳಾ‌ ಪೊಲೀಸ್ ಕಾನ್​ಸ್ಟೇಬಲ್​ಗಳು ಕರೆದೊಯ್ದಿದ್ದಾರೆ.

ಪೊಲೀಸರು ಬಂಧನ ಮಾಡುತ್ತಿದ್ದಂತೆ ಕೋಪಗೊಂಡ ಪ್ರತಿಭಟನಾಕಾರರು ಬಸ್​ಗಳ ಕಿಟಕಿಗಳ ಗ್ಲಾಸ್ ಪುಡಿಪುಡಿ ಮಾಡಿ ಆಕ್ರೋಶ ಹೊರಹಾಕಿದರು. ಒಟ್ಟು ಐದು ಬಸ್ ಗಳಲ್ಲಿ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಂಧನದ ವೇಳೆ ಪ್ರತಿಭಟನಾಕಾರರು ಎರಡು ಬಸ್​ಗಳ ಕಿಟಕಿಗಳ ಗ್ಲಾಸ್ ಪುಡಿಪುಡಿ ಮಾಡಿದ್ದಾರೆ. ನಟ ಚೇತನ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಾಗೇಂದ್ರ, ಮಾರುತಿ ಮಾನ್ಪಡೆ, ಕುರುಬೂರು ಶಾಂತಕುಮಾರ್ ಸೇರಿದಂತೆ ಐಕ್ಯ ಹೋರಾಟ ಸಮಿತಿಯ ಮುಖಂಡರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರನ್ನು ಬಂಧಿಸಿದ ಬಳಿ ವಾಹನ ಸಂಚಾರಕ್ಕೆ ಮೈಸೂರು ಸರ್ಕಲ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ.
Published by: Sushma Chakre
First published: September 25, 2020, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading