• Home
  • »
  • News
  • »
  • state
  • »
  • Belagavi Bypass Road Work: ಆತ್ಮಹತ್ಯೆಗೆ ಯತ್ನಿಸಿದ ರೈತನ ಮಗ; ಭೂಮಿ ಉಳಿಸಿಕೊಳ್ಳಲು ತೀವ್ರ ಹೋರಾಟ

Belagavi Bypass Road Work: ಆತ್ಮಹತ್ಯೆಗೆ ಯತ್ನಿಸಿದ ರೈತನ ಮಗ; ಭೂಮಿ ಉಳಿಸಿಕೊಳ್ಳಲು ತೀವ್ರ ಹೋರಾಟ

ಬೆಳಗಾವಿ ಭೈಪಾಸ್ ರಸ್ತೆ ಕಾಮಗಾರಿ

ಬೆಳಗಾವಿ ಭೈಪಾಸ್ ರಸ್ತೆ ಕಾಮಗಾರಿ

ಇದೇ ವೇಳೆ ಅಮಿತ್ ಅಜ್ಜಿ ಸುಮಿತ್ರಾ ಮತ್ತು ಆತ ಜಮೀನು ಹೋಗುತ್ತಿದೆ ಅಂತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಮನೆಯವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಹತ್ತು ಕೋಟಿ ಪರಿಹಾರ ಕೊಟ್ರು ಬೇಡ ನಮಗೆ ನಮ್ಮ ಜಮೀನು ಬೇಕು ಅಂತಾ ಕಣ್ಣೀರಿಡುತ್ತಿದ್ದಾರೆ‌.

ಮುಂದೆ ಓದಿ ...
  • Share this:

ಬೆಳಗಾವಿ:  ಬೆಳೆದು ನಿಂತ ಕಬ್ಬಿನ ಗದ್ದೆಯಲ್ಲಿ ಜೆಸಿಬಿಗಳ (JCB) ಘರ್ಜನೆ, ಜಮೀನು ಉಳಿಸಿಕೊಳ್ಳಲು ರೈತರಿಂದ ಹೋರಾಟ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ‌ ರೈತನ ಪುತ್ರ (Farmer Son). ಮರವೇರಿ ಕುಳಿತು ಕಾಮಗಾರಿ ನಿಲ್ಲಿಸಿ ಎಂದು ಮನವಿ ಮಾಡ್ತಿರುವ ಮತ್ತೋರ್ವ ಮಗ, ಕಣ್ಣ ಮುಂದೆ ಜಮೀನು ರಸ್ತೆಯಾಗುತ್ತಿರುವುದನ್ನ ಕಂಡು ಗೋಳಾಡಿದ ವೃದ್ಧೆ ಈ ಎಲ್ಲಾ ಘಟನೆ ಬೆಳಗಾವಿ (Belagavi) ತಾಲೂಕಿನ ಮಚ್ಚೆ ಗ್ರಾಮದಲ್ಲಿ. ಈ ಗ್ರಾಮ ಗುರುವಾರ ರಣಾಂಗಣವಾಗಿ ಮಾರ್ಪಟ್ಟಿತು. ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 2009ರಲ್ಲಿ ಅಂದಿನ ಸರ್ಕಾರ ಬೈಪಾಸ್ ರಸ್ತೆಯನ್ನ (Belagavi Bypass Road Work) ಮಂಜೂರು ಮಾಡಿ ಭೂಸ್ವಾಧೀನ ಪ್ರಕ್ರಿಯೆ ಶುರು ಮಾಡುವಂತೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೇಳಿತ್ತು. ಅದರಂತೆ ಅಂದಿನಿಂದ ಆರಂಭವಾದ ಭೂಸ್ವಾಧೀನ ಪ್ರಕ್ರಿಯೆ ಹತ್ತು ವರ್ಷಗಳಾದ್ರೂ ಮುಗಿದಿರಲಿಲ್ಲ. ಒಟ್ಟು ಒಂಬತ್ತೂವರೆ ಕಿಮೀ ಉದ್ದದ ರಸ್ತೆಗೆ 110ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.


ಇನ್ನೂ ಎಕರೆಗೆ ಇಪ್ಪತ್ತು ಮೂವತ್ತು ನಲವತ್ತು ಲಕ್ಷ ರೂಪಾಯಿ ಕೊಟ್ಟು ಭೂ ಸ್ವಾಧೀನ ಪಡಿಸಿಕೊಂಡಿದ್ದಾರೆ. 400ಕ್ಕೂ ಹೆಚ್ಚು ರೈತರು ಪರಿಹಾರವನ್ನ ಪಡೆದುಕೊಂಡಿದ್ದು ಇನ್ನೂ 80ಜನ ರೈತರು ಪರಿಹಾರ ತೆಗೆದುಕೊಳ್ಳದೇ ಕೋರ್ಟ್ ಮೆಟ್ಟಿಲೇರಿದ್ದರು ಈ ಕಾರಣಕ್ಕೆ ಕೆಲಸ ಸ್ಥಗಿತಗೊಂಡಿತ್ತು.


ಇನ್ನೂ ಕೋರ್ಟ್ ನಲ್ಲಿ ಅಧಿಕಾರಿಗಳು ಕ್ಲಿಯರ್ ಮಾಡಿಕೊಂಡಿದ್ದು ಕೆಲಸ ಆರಂಭಿಸಲು ಬಂದ್ರೂ ರೈತರು ವಿರೋಧ ಮಾಡಿಕೊಂಡು ಬಂದಿದ್ದರು. ಇದಕ್ಕೆ ಸುಮ್ಮನಿದ್ದ ಜಿಲ್ಲಾಡಳಿತ ಸರ್ಕಾರದ ಸೂಚನೆ ಬಂದ ಹಿನ್ನೆಲೆ ಕಳೆದ ವರ್ಷ ಜಮೀನು ನೀಡಲು ವಿರೋಧ ಮಾಡಿದ್ದ ಪ್ರದೇಶಗಳಿಗೆ ಖುದ್ದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಭೇಟಿ ಮಾಡಿ‌ ಮನವೊಲಿಸುವ ಕೆಲಸ ಮಾಡಿದ್ದರು.


150ಕ್ಕೂ ಪೊಲೀಸರ ಭದ್ರತೆಯಲ್ಲಿ ಅಧಿಕಾರಿಗಳ ಎಂಟ್ರಿ


ಇದಾದ ಬಳಿಕ ಸರ್ಕಾರ ರಸ್ತೆ ಕಾಮಗಾರಿ ಯಾಕೆ ಆರಂಭಿಸಿಲ್ಲ ಅಂತಾ ಜಿಲ್ಲಾಡಳಿತಕ್ಕೆ ತರಾಟೆಗೆ ತೆಗೆದುಕೊಂಡಿದ್ದು ಈ ಹಿನ್ನೆಲೆ ಇಂದು ಏಕಾಏಕಿ ಸರ್ವೆ ಮಾಡಿದಂತೆ ರಸ್ತೆ ಕಾಮಗಾರಿ ಆರಂಭಿಸಲು ಆಗಮಿಸಿದ್ದರು.


ಇದನ್ನೂ ಓದಿ:  BJP Tweet: ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ?: ಬಿಜೆಪಿ ಸಾಲು ಸಾಲು ಟ್ವೀಟ್


ರೈತರು ಕಾಮಗಾರಿಗೆ ವಿರೋಧ ಮಾಡ್ತಾರೆ ಅಂತಾ ಮೊದಲೇ ತಿಳಿದಿದ್ದ ಅಧಿಕಾರಿಗಳು 150ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ಜಮೀನಿಗೆ ಎಂಟ್ರಿಯಾಗಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಜೆಸಿಬಿಗಳು ಜಮೀನಿಗೆ ಬರ್ತಿದ್ದಂತೆ ಕಾಮಗಾರಿಯನ್ನ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆಗೆ ಮುಂದಾಗ್ತಾರೆ. ಆಗ ಪೊಲೀಸರು ವಿರೋಧ ಮಾಡ್ತಿದ್ದ ಎಲ್ಲರನ್ನ ಎಳೆದಾಡಿ ಒತ್ತಾಯಪೂರ್ವಕವಾಗಿ ವಶಕ್ಕೆ ಪಡೀತಾರೆ.


ಮಹಿಳಾ ರೈತರ ಮಧ್ಯ ಪ್ರವೇಶ


ಈ ವೇಳೆ ಮಹಿಳಾ ರೈತರು ಕೂಡ ಎಂಟ್ರಿಯಾಗ್ತಾರೆ ಆಗ ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನೂ ತಳ್ಳಿ ಸೀರೆಯನ್ನ ಹರಿದು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಈ ಎಲ್ಲ‌ ಹೈಡ್ರಾಮ‌ಅ ಮುಗಿಯುತ್ತಿದ್ದಂತೆ ಜಮೀನು ಮಾಲೀಕ ಅನಿಲ್ ಅನಗೋಳಕರ್ ಪುತ್ರ ಆಕಾಶ್ ಅನಗೊಳಕರ ಕೆಲಸ ನಿಲ್ಲಿಸುವಂತೆ ಒತ್ತಾಯಿಸಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ.


ಇದನ್ನೂ ಓದಿ:  ಬಸ್ಸಲ್ಲಿ ಜೋರಾಗಿ ಹಾಡು ಹಾಕಿದ್ರೆ ಬೀಳುತ್ತೆ ಕೇಸ್: KKRTC ಹೊಸ ಸುತ್ತೋಲೆಯಲ್ಲಿ ಏನಿದೆ?


ಮರವೇರಿದ ಯುವಕ


ಕಬ್ಬಿನ ಗದ್ದೆಯೊಳಗಿಂದಲೇ ಪೆಟ್ರೋಲ್ ಸುರಿದುಕೊಂಡು ಹೊರ ಬಂದ ಆಕಾಶ್ ನನ್ನ ಸ್ಥಳೀಯರು ಹಾಗೂ ಪೊಲೀಸರು ಎಚ್ಚೆತ್ತುಕೊಂಡ ಆಕಾಶ್ ನನ್ನ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಆತ್ಮಹತ್ಯೆಗೆ ಯತ್ನಿಸಿದ ಆಕಾಶ್ ಸಹೋದರ ಅಮಿತ್ ಮರವೇರಿ ಕುಳಿತು ಕೆಲಸ ನಿಲ್ಲಿಸಿ ಇಲ್ಲ ಮರದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡುತ್ತಿದ್ದ. ಆಗ ಪೊಲೀಸರು ಆತನ ಮನವೊಲಿಸಿ ಕೆಳಗಿಳಿಸಿದ್ರು.


ಇದೇ ವೇಳೆ ಅಮಿತ್ ಅಜ್ಜಿ ಸುಮಿತ್ರಾ ಮತ್ತು ಆತ ಜಮೀನು ಹೋಗುತ್ತಿದೆ ಅಂತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಮನೆಯವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಹತ್ತು ಕೋಟಿ ಪರಿಹಾರ ಕೊಟ್ರು ಬೇಡ ನಮಗೆ ನಮ್ಮ ಜಮೀನು ಬೇಕು ಅಂತಾ ಕಣ್ಣೀರಿಡುತ್ತಿದ್ದಾರೆ‌.


ಅಧಿಕಾರಿಗಳ ಸಮ್ಮುಖದಲ್ಲೇ ಕೆಲಸ ಆರಂಭ


ಪೊಲೀಸರು ಮತ್ತು ರೈತರ ನಡುವೆ ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಡಿಸಿಪಿ ವಿಕ್ರಂ ಆಮಟೆ ಮತ್ತು ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಸಮ್ಮುಖದಲೇ ಜೆಸಿಬಿಗಳು ಕೆಲಸವನ್ನ ಆರಂಭಿಸಿದವು.


ಕಷ್ಟಪಟ್ಟು ಬೆಳೆದ ಕಬ್ಬನ್ನ ತೆಗೆದು ನೆಲಸಮ ಮಾಡುವಾಗ ವೃದ್ದೆ ಬಿಕ್ಕಿ ಬಿಕ್ಕಿ ಅತ್ತು ಜಮೀನು ಉಳಿಸಿ ಅಂತಾ ಗೋಳಾಡಿದಳು. ನಂತರ ವೃದ್ಧೆಯನ್ನೂ ಪೊಲೀಸರು ಮನವೊಲಿಸಿ ಮನೆಗೆ ಕಳುಹಿಸುವ ಕೆಲಸ ಮಾಡಿದರು.


ಈ ಕುರಿತು ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ರವೀಂದ್ರ ಈಗಾಗಲೇ ಶೇಕಡಾ ತೊಂಬತ್ತರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು ಕೆಲವರು ಪರಿಹಾರ ಬೇಡ ಅಂದಿದ್ದು ಈಗ ಅವರನ್ನೂ ಮನವೊಲಿಸಿ ಪರಿಹಾರ ನೀಡುತ್ತೇವೆ. ಪರಿಹಾರ ವಿತರಣೆ ವಿಚಾರದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ರೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

Published by:Mahmadrafik K
First published: