ನಗರ ಸಂಚಾರ ದಟ್ಟಣೆ ತಡೆಗೆ ಫೆರಿಫೆರಲ್​​ ರಿಂಗ್​ ರಸ್ತೆ ನಿರ್ಮಾಣ: ಬ್ಯಾಲಕೆರೆ ರೈತರಿಂದ ಭಾರೀ ವಿರೋಧ

ಫೆರಿಫೆರಲ್ ರಸ್ತೆ ಕಳೆದ 15 ವರ್ಷಗಳಿಂದ ವಿಳಂಬವಾಗುತ್ತಿದೆ. ಹೀಗಾಗಿ ರೈತರು ಭೂಮಿಯಲ್ಲಿ ಏನು ಮಾಡುವದಕ್ಕೆ ಆಗುತ್ತಿಲ್ಲ. ಪರಿಹಾರ ಘೋಷಣೆ ಮಾಡುವವರೆಗೆ ಸರ್ವೇ ಮಾಡಲು ಬಿಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ರಿಂಗ್ ರೋಡ್​ ಮ್ಯಾಪ್​

ರಿಂಗ್ ರೋಡ್​ ಮ್ಯಾಪ್​

  • Share this:
ಬೆಂಗಳೂರು(ಡಿ.18): ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಫೆರಿಫೆರಲ್​ ರಿಂಗ್​ ರಸ್ತೆ ನಿರ್ಮಾಣಕ್ಕೆ ಬ್ಯಾಲಕೆರೆ ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ರಿಂಗ್​ ರಸ್ತೆ ನಿರ್ಮಾಣಕ್ಕೆ ಬಿಡಿಎ 1810 ಎಕರೆ ಭೂಮಿಯನ್ನು ಗುರುತಿಸಿದೆ. ಬಿಡಿಎ ಗುರುತಿಸಿರುವ ಭೂಮಿ ನೂರಾರು ರೈತರಿಗೆ ಸೇರಿದ್ದಾಗಿದೆ. ಹೀಗಾಗಿ ತಮ್ಮ ಭೂಮಿ  ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು ರಿಂಗ್​ ರಸ್ತೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ಧಾರೆ. ಬಿಡಿಎ ಅಧಿಕಾರಿಗಳು ಸರ್ವೇ ಮಾಡಲು ರೈತರು ಅವಕಾಶ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಬಿಡಿಎಗೆ ಕಗ್ಗಂಟಾಗಿ ಪರಿಣಮಿಸಿದೆ.

ರೈತರ ಜಮೀನಿಗೆ ದರ ನಿಗದಿ ಮಾಡದೆ ಬಿಡಿಎ ಅಧಿಕಾರಿಗಳು ಸರ್ವೇ ಮಾಡಲು ಬಂದಿದ್ದರು. ಹೀಗಾಗಿ ಮೊದಲು ಜಮೀನಿಗೆ ದರ ನಿಗದಿ ಮಾಡಿ ನಂತರ ಸರ್ವೇ ನಡೆಸಿ ಎಂದು ರೈತರು ಬಿಡಿಎ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಜಮೀನಿಗೆ ದರ ನಿಗದಿ ಮಾಡುವವರೆಗೆ ಸರ್ವೇ ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಸರ್ಕಾರಿ ದಾಖಲೆಗಳನ್ನು ತೆಗೆಯುವ ನಕಲಿ ಕೀ ಈಗ ನನ್ನ ಬಳಿ ಇಲ್ಲ, ಬೀಗ ತೆಗೆಯುವವರನ್ನು ಹುಡುಕುತ್ತಿದ್ದೇನೆ; ಎಚ್.ಡಿ.ರೇವಣ್ಣ

ಬಿಡಿಎ ಅಧಿಕಾರಿಗಳು ಭೂಮಿ ಸರ್ವೇ ಮಾಡಲು ಪೊಲೀಸ್​ ಭದ್ರತೆಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೂ ಸಹ ಬ್ಯಾಲಕೆರೆಯ ನೂರಾರು ರೈತರು ಬಿಡಿಎಗೆ ಸರ್ವೇ ಮಾಡಲು ಬಿಡದೆ  ದಿಗ್ಬಂದನ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಡಿಎ ಭೂಸ್ವಾಧೀನಾಧಿಕಾರಿ ಮಥಾಯಿ ಆಗಮಿಸಿದ್ದಾರೆ.

ಬಿಡಿಎ ಅಧಿಕಾರಿಗಳಿಗೆ ರೈತರು ತರಾಟೆ

ಜಮೀನಿಗೆ ಪರಿಹಾರ ನೀಡದ ಬಿಡಿಎ ಅಧಿಕಾರಿಗಳ ನಡೆ ಖಂಡಿಸಿ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡಿಎ ಅಧಿಕಾರಿಗಳಿಗೆ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಫೆರಿಫೆರಲ್ ರಸ್ತೆ ಕಳೆದ 15 ವರ್ಷಗಳಿಂದ ವಿಳಂಬವಾಗುತ್ತಿದೆ. ಹೀಗಾಗಿ ರೈತರು ಭೂಮಿಯಲ್ಲಿ ಏನು ಮಾಡುವದಕ್ಕೆ ಆಗುತ್ತಿಲ್ಲ. ಪರಿಹಾರ ಘೋಷಣೆ ಮಾಡುವವರೆಗೆ ಸರ್ವೇ ಮಾಡಲು ಬಿಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಬಿಡಿಎ ಭೂಸ್ವಾಧೀನಾಧಿಕಾರಿ ಮಥಾಯಿ ಮಾತನಾಡಿ, ಪಿಆರ್ ಆರ್ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. 65 ಕಿಲೋಮೀಟರ್ ವ್ಯಾಪ್ತಿಯ ಯೋಜನೆ ಮುಗಿಸುವುದು ಸರ್ಕಾರದ ಮೊದಲ‌ ಆದ್ಯತೆ. ರೈತರಿಗೆ ಪರಿಹಾರ ಮೊತ್ತದ ನಿಗದಿ ವಿಚಾರ ಇತ್ಯರ್ಥವಾಗುತ್ತಿಲ್ಲ.  ನಿಗದಿತ ಪರಿಹಾರದ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.  ಹಾಗಾಗಿ ಸರ್ವೆಗೆ ಅವಕಾಶ ನೀಡುತ್ತಿಲ್ಲ. ಹೆಚ್ಚಿನ ಪರಿಹಾರ ನೀಡಬೇಕೆನ್ನುವ ಬೇಡಿಕೆಯಿದೆ.
ಸರ್ಕಾರದ ಮಟ್ಟದಲ್ಲಿ ಇದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​

 
Published by:Latha CG
First published: