ಹಾಸನ(ಫೆ.10): ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 1 ಲಕ್ಷದವರೆಗಿನ ರೈತರ ಎಲ್ಲಾ ಸಾಲಮನ್ನಾ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಸಾಲಮನ್ನಾ ಘೋಷಣೆ ಮಾಡಿಲ್ಲ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ಹೊರಹಾಕಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ವೈ ಮೊದಲು ರೈತರ ಸಾಲಮನ್ನಾ ಮಾಡಬೇಕು. ರೈತರ ಸಾಲಮನ್ನಾ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ನಂತರ ಬಡ್ಡಿ ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿ. ನಾವಿರುವ ಪರಿಸ್ಥಿತಿಯಲ್ಲಿ ಅಸಲು ಕಟ್ಟಲು ಸಾಧ್ಯವಿಲ್ಲ. ನೆರೆ ಬಂದು ಬೀದಿಪಾಲಾಗಿರುವವರಲ್ಲಿ ಸಾಲ ವಾಪಸ್ ಕೇಳ್ತೀರಾ. ರೈತರಿಗೆ ಸ್ವಾಮಿನಾಥನ್ ವರದಿ ಪ್ರಕಾರ ಯೋಗ್ಯ ಬೆಲೆ ಕೊಡಿ. ಯೋಗ್ಯ ಬೆಲೆ ಕೊಟ್ಟರೆ ಸಾಲ ವಾಪಸ್ ಕೇಳಲು ನಿಮಗೆ ನೈತಿಕತೆ ಇದೆ ಎಂದು ಕಿಡಿಕಾರಿದರು.
ತಿರುಪತಿಗೆ ಆಗಮಿಸಲಿರುವ ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷೆ; ಬಿಗಿ ಭದ್ರತೆ, ಅದ್ದೂರಿ ಸ್ವಾಗತಕ್ಕೆ ಸಿದ್ಧತೆ
ಮುಂದುವರೆದ ಅವರು, ನಮ್ಮನ್ನು ಬಜೆಟ್ ಪೂರ್ವ ಸಭೆಗೆ ಕರೆದಿದ್ದಾರೆ, ಅಲ್ಲಿ ಸಾಲಮನ್ನಾ ಕುರಿತು ಚರ್ಚಿಸುತ್ತೇನೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರೆಯಲಿದೆ ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ರೈತರು ಸಹಕಾರಿ ಬ್ಯಾಂಕ್ ಸಾಲದ ಅಸಲು ಮಾರ್ಚ್ ಒಳಗೆ ಕಟ್ಟಿದರೆ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಬಿಎಸ್ವೈ ಘೋಷಿಸಿದ್ದಾರೆ. ಆದರೆ ರೈತರ ಸಾಲ ವಸೂಲಿಗೆ ಬ್ಯಾಂಕ್ ಸಿಬ್ಬಂದಿಯನ್ನು ಬಿಟ್ಟು, ಈಗ ಆದೇಶ ವಾಪಸ್ ಪಡೆದಿದ್ದೇವೆ ಅಂತಾರೆ ಯಡಿಯೂರಪ್ಪ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಲ್ಲಾ ಬ್ಯಾಂಕ್ಗಳಲ್ಲಿನ 1 ಲಕ್ಷದವರೆಗಿನ ಸಾಲಮನ್ನಾ ಮಾಡುತ್ತೇನೆ ಎಂದು ಬಿಎಸ್ವೈ ಹೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಕುಮಾರಸ್ವಾಮಿಗೆ ಮುಂಚೆ ಮೂರು ದಿನ ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ರಿ. ಆದರೆ ಈಗ ಆರು ತಿಂಗಳಾದರೂ ಘೋಷಣೆ ಮಾಡಿಲ್ಲ. ಒಂದು ಲಕ್ಷ ಸಾಲಮನ್ನಾ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ನಂತರ ಬಡ್ಡಿಮನ್ನಾದ ಘೋಷಣೆ ಮಾಡಿ ಎಂದು ಆಗ್ರಹಿಸಿದರು.
ನಾನು ಸಿಎಂ ಬಳಿ ಕೇಳಿದ್ದ ಖಾತೆಯೇ ಬೇರೆ, ಆದ್ರೆ ವೈದ್ಯಕೀಯ ಖಾತೆ ಕೊಟ್ಟಿದ್ದಾರೆ; ಡಾ.ಸುಧಾಕರ್ ಬೇಸರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ