• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದ ಧಾರವಾಡ ಜಿಲ್ಲಾಡಳಿತ; ಸ್ಥಳದಲ್ಲಿಯೇ ಪರಿಹಾರ ನೀಡಿದ ಡಿಸಿ

ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದ ಧಾರವಾಡ ಜಿಲ್ಲಾಡಳಿತ; ಸ್ಥಳದಲ್ಲಿಯೇ ಪರಿಹಾರ ನೀಡಿದ ಡಿಸಿ

ಭೂ ಸ್ವಾಧೀನ ಪ್ರಕ್ರಿಯೆ

ಭೂ ಸ್ವಾಧೀನ ಪ್ರಕ್ರಿಯೆ

ಪ್ರತಿ ಎಕರೆಗೆ 55 ಲಕ್ಷ ರೂ.ಗಳಂತೆ ಈಗಾಗಲೇ 11 ಜನ ರೈತರಿಂದ 30 ಎಕರೆ 36 ಗುಂಟೆ ಜಮೀನು ಖರೀದಿಸಿ 14.51 ಕೋಟಿ ರೂ ಪಾವತಿಸಲಾಗಿದೆ. 

  • Share this:

ಧಾರವಾಡ(ಅ.14) : ಅದು ಫಲವತ್ತಾತ ಭೂಮಿ‌, ಈ ಜಮೀನುಗಳನ್ನೇ‌ ನಂಬಿ ಬದುಕು ಸಾಗಿಸುತ್ತಿದ್ದ ರೈತರು ಆದ್ರೆ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು,ಕೈಗಾರಿಕೆ ವಸಾಹತುಗಳ ಸ್ಥಾಪನೆ ಮತ್ತಿತರ ಮಹತ್ವದ ಕೆಲಸಗಳ ಅನುಷ್ಠಾನಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತದೆ. ಆದ್ರೆ ಸರ್ಕಾರ ಭೂಸ್ವಾಧಿನ ಮಾಡಿಕೊಂಡರು ರೈತರಿಗೆ ಸೂಕ್ತ ಸಮಯಕ್ಕೆ‌ ಪರಿಹಾರದ ಹಣ ತಲುಪುವುದಿಲ್ಲ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರೈತರ ಬಳಿ ಇರುವ ದಾಖಲೆಗಳ ಕ್ರೋಢೀಕರಣ ಮತ್ತು ಪರಿಹಾರ ಒದಗಿಸುವ ಕಾರ್ಯವನ್ನು ಸರಳ ಮತ್ತು ತ್ವರಿತಗೊಳಿಸಲು ಧಾರವಾಡ ಜಿಲ್ಲಾಡಳಿತ ಮುಂದಾಗಿದೆ. ಕಂದಾಯ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಭೂ ದಾಖಲೆಗಳ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಹಾಗೂ  ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರು ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮಕ್ಕೆ ತೆರಳಿ ಇಟಿಗಟ್ಟಿ ಹಾಗೂ ಗಾಮನಗಟ್ಟಿ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕೆ  ಪ್ರದೇಶಕ್ಕೆ ಅಗತ್ಯವಿರುವ ಸುಮಾರು 587  ಎಕರೆ  ಭೂಮಿಯನ್ನು ರೈತರಿಂದ ಪಡೆಯುವ ಕಾರ್ಯವನ್ನು ಸರಳ ಮತ್ತು ತ್ವರಿತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.


ಇಟಿಗಟ್ಟಿ ಗ್ರಾಮದಲ್ಲಿ  97 ರೈತರಿಗೆ ಸೇರಿದ ಸುಮಾರು 473 ಎಕರೆ ಜಮೀನನ್ನು  ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಪ್ರತಿ ಎಕರೆಗೆ 55 ಲಕ್ಷ ರೂ.ಗಳಂತೆ ಈಗಾಗಲೇ 11 ಜನ ರೈತರಿಂದ 30 ಎಕರೆ 36 ಗುಂಟೆ ಜಮೀನು ಖರೀದಿಸಿ 14.51 ಕೋಟಿ ರೂ ಪಾವತಿಸಲಾಗಿದೆ.  ಗಾಮನಗಟ್ಟಿ ಗ್ರಾಮ ವ್ಯಾಪ್ತಿಯಲ್ಲಿಯೂ ಸಹ 21 ರೈತರಿಗೆ ಸೇರಿದ 114 ಎಕರೆ 35 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದೆೆ.


ಎರಡೂ ಇಲಾಖೆಗಳ ನಡುವೆ ಸಮನ್ವಯತೆ ತರಲು ಸಿಎಂ ಸೂಚಿಸಿದ್ದಾರೆ; ಸಚಿವ ಡಾ.ಕೆ. ಸುಧಾಕರ್


ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ನೇರವಾಗಿ ರೈತರ ಬಳಿ ತೆರಳಿದ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಂದ ಭೂಮಿಯ ದಾಖಲೆಗಳು, ಬ್ಯಾಂಕ್ ಖಾತೆ ಪುಸ್ತಕ, ನಷ್ಟಪೂರ್ತಿ ಕಾಗದ (Indemnity Bond), ಒಪ್ಪಂದ ದಾಖಲೆ ( Agreement Bond) , ಆಧಾರ್ ಕಾರ್ಡ್​​, ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದಿದ್ದಾರೆ.


ಅಗತ್ಯ ದಾಖಲೆ ಹಾಗೂ ಮಾಹಿತಿ ಒದಗಿಸಿದ ಏಳು ಜನ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಬಿಡುಗಡೆಗೊಳಿಸಿ, ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಇನ್ನುಳಿದ ರೈತರಿಂದ ಕೆಲವು ದಾಖಲೆಗಳನ್ನು ತ್ವರಿತವಾಗಿ ಪಡೆದು ಪರಿಹಾರ ವರ್ಗಾವಣೆ ಮಾಡಲು ನಿರ್ದೇಶನ ನೀಡಿದರು.


ಗಾಮನಗಟ್ಟಿ ಗ್ರಾಮದಲ್ಲಿಯೂ ಸಹ ಇದೇ ರೀತಿ ಕಾರ್ಯ ಕೈಗೊಂಡು ರೈತರಿಗೆ ತ್ವರಿತ ಪರಿಹಾರ ಒದಗಿಸುವುದಾಗಿ ಜಿಲ್ಲಾಧಿಕಾರಿ ನಿತೇಶ್ ಕೆ‌ ಪಾಟೀಲ ಭರವಸೆ ನೀಡಿದ್ದಾರೆ.

top videos
    First published: