Bagalakote: ಮಳೆ-ಬಿಸಿಲಿನಾಟದಿಂದ ಬೆಳೆ ಹಾಳು! ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು

ಜಿಲ್ಲೆಯಾದ್ಯಂತ ಸುಮಾರು 5% ರಿಂದ 10 ಪ್ರತಿಶತದಷ್ಟು ಹೆಸರು ಬೆಳೆ ನಷ್ಟವಾಗಿದೆ. ತುಂತುರು ಮಳೆ, ಜೊತೆಗೆ ಮೋಡ ಮುಸುಕಿದ ವಾತಾವರಣದಿಂದಾಗಿ ಹೆಸರು ಬೆಳೆಗೆ ಹಳದಿ ರೋಗದ ಕಾಟ ಶುರುವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಗಲಕೋಟೆ(ಜು.28): ಮುಂಗಾರು ಬಿತ್ತನೆ ಮಾಡಿ, ಭರಪೂರ ಬೆಳೆ (Crop) ನಿರಿಕ್ಷೆಯಲ್ಲಿದ್ದ ಆ ರೈತರು (Farmers) ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಹಳದಿ ರೋಗಕ್ಕೆ ತುತ್ತಾಗಿ ಹಾಕಿದ್ದ ದುಡ್ಡು ಬಾರದ ಸ್ಥಿತಿಗೆ ಬಂದಿದ್ದಾರೆ ರೈತರು(Farmers). ಸಾಲ ಶೂಲ ಮಾಡಿದ್ದ ರೈತರ ಗೋಳು ಕೇಳೋರ್ಯಾರು ಅನ್ನೊ ಹಾಗಿದೆ. ಕಾಯಿ ಇದ್ದರೂ ಕಾಳು ಇಲ್ಲದೇ, ಹೂ ಉದುರಿ ಹಳದಿ ರೋಗಕ್ಕೆ ತುತ್ತಾದ ಹೆಸರು ಬೆಳೆ. ಸೂಕ್ತ ಬೆಳೆ ಬಾರದೇ ಹೆಸರು ಬೆಳೆ  ಕೀಳ್ಳುತ್ತಿರೊ ರೈತರು. ಮೋಡ ಮುಸುಕಿದ ವಾತಾವರಣದಿಂದ ಕಂಗಾಲಾದ ಕೃಷಿಕರು. ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು ಕಳೆದ 20 ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಜೊತೆಗೆ ಜಿಟಿ ಜಿಟಿ ಮಳೆಯ ಸಿಂಚನ. 20 ದಿನಗಳಿಂದ ಸೂರ್ಯ ಕಿರಣವಿಲ್ಲದೇ ಬೆಳೆಗಳು ಸಮರ್ಪಕ ರೀತಿಯಲ್ಲಿ ಬೆಳವಣಿಗೆ ಕಂಡಿಲ್ಲ.

ಜಿಲ್ಲೆಯಾದ್ಯಂತ ಸುಮಾರು 5% ರಿಂದ 10 ಪ್ರತಿಶತದಷ್ಟು ಹೆಸರು ಬೆಳೆ ನಷ್ಟವಾಗಿದೆ. ತುಂತುರು ಮಳೆ, ಜೊತೆಗೆ ಮೋಡ ಮುಸುಕಿದ ವಾತಾವರಣದಿಂದಾಗಿ ಹೆಸರು ಬೆಳೆಗೆ ಹಳದಿ ರೋಗದ ಕಾಟ ಶುರುವಾಗಿದೆ. ಈಗಾಗಲೇ ಹೆಸರು ಕಾಯಿ ಬಿಟ್ಟಿದೆ. ಆದ್ರೆ ಅದರೊಳಗಡೆ ಕಾಳುಗಳೆ ಆಗಿಲ್ಲ. ಅಲ್ಲದೇ ಹೆಸರು ಬೆಳೆ  ಸಂಪೂರ್ಣವಾಗಿ ಹಳದಿ ರೋಗಕ್ಕೆ ತುತ್ತಾಗಿ, ಕಪ್ಪು ಬಣ್ಣಕ್ಕೆ ತಿರುಗಿವೆ.

ಲಾಭದ ನಿರೀಕ್ಷೆ ಹುಸಿ

ಇದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಬಾಗಲಕೋಟೆ ಸಮೀಪದ ಶೇಖಪ್ಪ ಎಂಬ ರೈತರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಹೆಸರು ಬೆಳೆ ಹಾಕಿದ್ದರು. ಪ್ರತಿ ಎಕರೆಗೆ 10 ರಿಂದ 20  ಸಾವಿರ ಕರ್ಚು ಮಾಡಿದ್ದಾರೆ. ನಾಲ್ಕು ಎಕರೆ ಹೆಸರು ಬೆಳೆಗೆ ಅಂದಾಜು ಒಂದು ಲಕ್ಷದಷ್ಟು ಕರ್ಚು ಮಾಡಿರೊ ಶೇಖಪ್ಪ, ಒಂದುವರೆ ಲಕ್ಷದಷ್ಟು ಲಾಭದ ನಿರೀಕ್ಷೆಯಲ್ಲಿದ್ದರು.

ಆದರೆ ಹಳದಿ ರೋಗದಿಂದ ಮಾಡಿದ ಸಾಲವೂ ತೀರದ ಸ್ಥಿತಿಗೆ ರೈತರು ಬಂದಿದ್ದಾರೆ. ಹಳದಿ ರೋಗದಿಂದ ಬೆಳೆಯೆಲ್ಲ ಗೊಬ್ಬರಕ್ಕೆ ಸಮಾನವಾಗಿದ್ದು, ಲಾಸ್ ಆಗಿರುವ ರೈತ ವರ್ಗ ಸರ್ಕಾರ ಕೈ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Praveen Murder: ಇಬ್ಬರು ಪ್ರಮುಖ ಆರೋಪಿಗಳ ಬಂBJP Government: ಸಿಎಂ ಬೊಮ್ಮಾಯಿ ಸರ್ಕಾರ ರಚನೆಯಾಗಿ 1 ವರ್ಷ; ಹೊಸ ಯೋಜನೆಗಳ ಘೋಷಣೆಧನ; ಕೊಲೆ ಪ್ರಕರಣ ತನಿಖೆ ಚುರುಕು

ಇನ್ನು ಬಾಗಲಕೋಟೆ ಜಿಲ್ಲೆಯಾದ್ಯಂತ ಹೆಸರು ಬೆಳೆದ ರೈತರ ಸ್ಥಿತಿ ಇದೇ ಆಗಿದೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 56.3 ಮಿಮಿ ಮಳೆ ಆಗ್ಬೇಕಿತ್ತು. ಆದ್ರೆ 132.1 ಮಿಮಿ ಮಳೆ ಆಗಿದೆ. ಈ ಮಳೆಯಿಂದ ಹೆಸರು, ಉದ್ದು, ಸೋಯಾಬಿನ್ ಬೆಳೆ ಬಿತ್ತಲಾಗಿತ್ತು. ಜೂನ್‌ನಲ್ಲಿ 87.9 ಮಿಮೀ ಮಳೆ ಆಗ್ಬೇಕಿತ್ತು , 83.7 ಮಿಮೀ ಮಳೆ ಆಗಿದೆ. ಜುಲೈನಲ್ಲಿ ಇಲ್ಲಿವರೆಗೆ 23 ಮಿಮೀ ಮಳೆ ಆಗ್ಬೇಕಿತ್ತು, ಆದ್ರೆ 55.9 ಮಿಮೀ ಮಳೆ ಆಗಿದೆ.

20  ಸಾವಿರ ಹೆಕ್ಟೇರ್ ನಷ್ಟು ಹೆಸರು

ಈ‌ ಮಳೆಯಿಂದ 2 ಲಕ್ಷ 49 ಸಾವಿರ ಹೆಕ್ಟೇರ್‌ದಷ್ಟು ಬೆಳೆ  ಬೆಳೆಯಲಾಗಿದೆ. ಅದ್ರಲ್ಲಿ ಹೆಸರು, ಸೊಯಾಬಿನ್, ಉದ್ದು ಸೇರಿದಂತೆ ಹಲವು ಬೆಳೆ ಬೆಳೆಯಲಾಗಿದೆ. ಇದಕ್ಕೆ ಸೂಕ್ತ ಕೀಟನಾಶಕ ಸಿಂಪಡಿಸಲು  ಕೀಟನಾಶಕ ಮಾರಾಟಗಾರರಿಗೆ ಎಷ್ಟು ಪ್ರಮಾಣದಲ್ಲಿ ಸಿಂಪಡಿಸಬೇಕು ಅನ್ನೋದನ್ನ ಸೂಚಿಸಲಾಗಿದಯಂತೆ. ಅಲ್ಲದೇ ಈ ಮುಂಗಾರಿನಲ್ಲಿ ಜಿಲ್ಲಾಯಾದ್ಯಂತ 20  ಸಾವಿರ ಹೆಕ್ಟೇರ್ ನಷ್ಟು ಹೆಸರು ಬೆಳೆಯಲಾಗಿದೆ.

ಇದನ್ನೂ ಓದಿ: Praveen Murder: ಇಬ್ಬರು ಪ್ರಮುಖ ಆರೋಪಿಗಳ ಬಂಧನ; ಕೊಲೆ ಪ್ರಕರಣ ತನಿಖೆ ಚುರುಕು

ಅದರಲ್ಲಿ 5 ರಿಂದ 10 ಪರ್ಷಂಟ್‌ನಷ್ಟು ಹಳದಿ(ನಂಜಾನು ರೋಗ) ರೋಗ ಕಂಡು ಬರ್ತಿದೆ. ಮಳೆ ಕಂಟಿನ್ಯೂ ಬರ್ತಿರೋದ್ರಿಂದ ಕೀಟನಾಶಕ ಸಿಂಪಡಿಸಲು ಆಗ್ತಿಲ್ಲ. ಪ್ರತಿ ವರ್ಷ ಒಂದೇ ಪ್ರದೇಶದಲ್ಲಿ ಒಂದೇ ಬೆಳೆ ಬೆಳೆಯೊದ್ರಿಂದ ಈ ತರಹದ ರೋಗ ಬರೋಕೆ ಕಾರಣ ಆಗುತ್ತೆ. ಹಾಗಾಗಿ ಮುಂದಿನ ವರ್ಷ ಈ ಪ್ರದೇಶದಲ್ಲಿ ಬೇರೆ ಬೆಳೆ ಬೇಳೆದ್ರೆ ರೈತರ ಬೆಳೆಗೆ ಅನುಕೂಲ ಆಗುತ್ತೆ ಅಂತಾರೆ ಕೃಷಿ ಅಧಿಕಾರಿಗಳು.

ಒಟ್ಟಿನಲ್ಲಿ, ಮುಂಗಾರು ಬಿತ್ತನೆ ವೇಳೆ ಸಮರ್ಪಕ ಮಳೆ, ಬಿಸಿಲು ಇದ್ದಿದ್ದರಿಂದ ಹೆಸರು ಬೆಳೆ ಸರಿಯಾಗಿ ಬೆಳೆದಿತ್ತು.ನಂತರ ಮೋಡ ಮುಸುಕಿದ ವಾತಾವರಣದ ಜೊತೆಗೆ ಜಿಟಿ ಜಟಿ ಮಳೆ ಆವರಿಸಿದ್ದರಿಂದಾಗಿ ಹೆಸರು ಬೆಳೆದ ರೈತ ಮಾಡಿದ ಸಾಲ ತೀರಿಸುವುದು ಹೇಗೆಂಬ ಸಂಕಷ್ಟ ಸಿಲುಕಿದ್ದಾನೆ.
Published by:Divya D
First published: