HOME » NEWS » State » FARMERS HAPPY ABOUT SILK PRICE INCREASE HERE IS THE DETAILS ZP

ರೇಷ್ಮೆಗೂಡು ಬೆಲೆ ಏರಿಕೆಗೆ ರೈತರು ಸಂತಸ: ತಾಂತ್ರಿಕ ಅಡಚಣೆ ಬಗೆಹರಿಸಲು ಒತ್ತಾಯ 

ಕಳೆದ ಸುಮಾರು ತಿಂಗಳುಗಳಿಂದ ರಾಮನಗರ ರೇಷ್ಮೆ ಮಾರುಕಟ್ಟೆ ಕೊರೋನಾ ಕಾಟಕ್ಕೆ ನಲುಗಿತ್ತು. ಆದರೆ ಈಗ ಕೊರೋನಾ ಮಧ್ಯೆಯೂ ಸಹ ರೇಷ್ಮೆ ಮಾರುಕಟ್ಟೆ ಫುಲ್ ‌ಬ್ಯುಸಿಯಾಗಿದೆ. ರೈತರಿಗೆ ಒಳ್ಳೆಯ ಬೆಲೆಯೂ ಸಿಗುತ್ತಿದೆ.

news18-kannada
Updated:December 20, 2020, 8:05 PM IST
ರೇಷ್ಮೆಗೂಡು ಬೆಲೆ ಏರಿಕೆಗೆ ರೈತರು ಸಂತಸ: ತಾಂತ್ರಿಕ ಅಡಚಣೆ ಬಗೆಹರಿಸಲು ಒತ್ತಾಯ 
ramnagar silk market
  • Share this:
ರಾಮನಗರ: ಏಷ್ಯದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆಯಾಗಿರುವ  ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಕಳೆದ ಕೆಲ ತಿಂಗಳಿಂದ ವ್ಯಾಪಾರ ವಹಿವಾಟು ದೊಡ್ಡ ಮಟ್ಟದಲ್ಲಿ ನಡೆದಿರಲಿಲ್ಲ. ರೇಷ್ಮೆ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದ್ದೇ ಇದಕ್ಕೆ ಮುಖ್ಯ ಕಾರಣ. ಹೌದು, ಕೊರೋನಾ ಮಹಾಮಾರಿ ಬಂದಾಗಿನಿಂದಲೂ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈಗ ಕೊರೋನಾ ವೈರಸ್ ಇಳಿಮುಖವಾಗುತ್ತಿರುವ ಜೊತೆಗೆ ರೇಷ್ಮೆಗೂಡಿನ ಬೆಲೆಯಲ್ಲೂ ಏರಿಕೆ ಕಂಡಿದ್ದು, ರೇಷ್ಮೆ ಬೆಳೆಗಾರರು ಸಂತಸಗೊಂಡಿದ್ದಾರೆ. ನಮ್ಮ ಮಾರ್ಕೆಟ್‌ಗೆ ರೇಷ್ಮೆಗೂಡನ್ನು  ತನ್ನಿ ಎಂದು ರೀಲರ‍್ಸ್‌ಗಳು ಸಹ ರೈತರಿಗೆ ಮನವಿ ಮಾಡುತ್ತಿದ್ದಾರೆ. 

ಹೌದು, ಕಳೆದ 10 ತಿಂಗಳಿಂದ  ಇಳಿಮುಖವಾಗಿದ್ದ ರೇಷ್ಮೆ ಬೆಲೆ 15-20 ದಿನಗಳಿಂದ ಏರಿಕೆ ಕಂಡಿದೆ. ಉತ್ತಮ ಬೆಲೆಸಿಗುತ್ತಿದ್ದಂತೆ ರೈತರು, ರೀಲರ‍್ಸ್‌ಗಳು ಸಂತಸವಾಗಿದ್ದಾರೆ. ಪ್ರತಿದಿನ 30-35 ಟನ್ ರೇಷ್ಮೆಗೂಡನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದರು. ಆದರೆ ಈಗ ಅದು ಗಣನೀಯವಾಗಿ ಇಳಿಮುಖವಾಗಿದೆ. ಕೊರೋನಾ ಹಿನ್ನೆಲೆ ಗೂಡು ತರುವುದನ್ನ ರೈತರು ಸಹ ಸ್ಥಗಿತ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೇಷ್ಮೆಗೂಡಿನ ತೂಕದಲ್ಲಿ ವ್ಯತ್ಯಾಸವಾಗಿದೆ.

ಸದ್ಯ ಸಿಬಿ(ಹಳದಿ ಗೂಡು) ಕೆ.ಜಿ.ಗೆ 220-280 ರೂ.ಇದ್ದರೆ, ಸಿಎಸ್‌ಆರ್(ಬಿಳಿ ಗೂಡು) 450-530 ರವರೆಗೆ ಏರಿಕೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಈ ಹಿಂದೆ ಸಿಬಿ - 120-180 ಇದ್ದರೆ, ಸಿ ಎಸ್ ಆರ್ - 150-190 ರೂ.ಇತ್ತು. ಹೀಗಾಗಿ ಇನ್ನು ಮುಂದೆ ರೈತರು ಹೆಚ್ಚಿನದಾಗಿ ಗೂಡನ್ನ ಮಾರ್ಕೆಟ್‌ಗೆ ತನ್ನಿ ಎಂದು ರೀಲರ‍್ಸ್ ನ್ಯೂಸ್ 18 ಮೂಲಕ ಮನವಿ ಮಾಡಿದ್ದಾರೆ.

ರೇಷ್ಮೆ ಬೆಳೆಗಾರರು


ಇನ್ನು ಈಗ ಕೊರೋನಾ ನಡುವೆಯೂ ರೇಷ್ಮೆಗೂಡಿನ ಬೆಲೆಯಲ್ಲಿ ಏರಿಕೆಯಾಗಿರುವುದು ಸಂತಸದ ವಿಚಾರ. ಆದರೆ ಆರ್‌ಟಿಜಿಎಸ್ ಮೂಲಕ ರೈತರ ಅಕೌಂಟ್‌ಗೆ ರೇಷ್ಮೆಗೂಡು ಮಾರಾಟದ ಹಣವನ್ನ ಹಾಕಲಾಗುತ್ತೆ ಎಂದು ಮಾರುಕಟ್ಟೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ರೈತರು ಗೂಡು ಮಾರಾಟ ಮಾಡಿದ ಎರಡು ತಿಂಗಳು ಕಳೆದರು ಸಹ ರೈತರ ಹಣ ಅವರಿಗೆ ಸೇರಲ್ಲ, ಆದ್ದರಿಂದ ಈ ಆನ್‌ಲೈನ್ ವ್ಯವಹಾರದಲ್ಲಿ ಸಾಕಷ್ಟು ಅನಾನುಕೂಲವಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಸಚಿವರು, ಇಲಾಖೆಯ ಅಧಿಕಾರಿಗಳು ರೈತರಿಗೆ ಗೂಡು ಮಾರಾಟ ಮಾಡಿದ ತಕ್ಷಣವೇ ಅವರ ಹಣ ಕೈಸೇರುವಂತೆ ಕ್ರಮವಹಿಸಬೇಕೆಂದು ರೇಷ್ಮೆ ಬೆಳೆಗಾರ ಮುಖಂಡ ಶಿವಕುಮಾರ್ ತುಂಬೇನಹಳ್ಳಿ ನ್ಯೂಸ್ 18 ಮೂಲಕ ಆಗ್ರಹಿಸಿದ್ದಾರೆ.
Youtube Video
ಒಟ್ಟಾರೆ ಕಳೆದ ಸುಮಾರು ತಿಂಗಳುಗಳಿಂದ ರಾಮನಗರ ರೇಷ್ಮೆ ಮಾರುಕಟ್ಟೆ ಕೊರೋನಾ ಕಾಟಕ್ಕೆ ನಲುಗಿತ್ತು. ಆದರೆ ಈಗ ಕೊರೋನಾ ಮಧ್ಯೆಯೂ ಸಹ ರೇಷ್ಮೆ ಮಾರುಕಟ್ಟೆ ಫುಲ್ ‌ಬ್ಯುಸಿಯಾಗಿದೆ. ರೈತರಿಗೆ ಒಳ್ಳೆಯ ಬೆಲೆಯೂ ಸಿಗುತ್ತಿದೆ. ಆದರೆ ಕೆಲತಾಂತ್ರಿಕ ಸಮಸ್ಯೆಗಳನ್ನ ಶೀಘ್ರವೇ ಬಗೆಹರಿಸಿ ಎಂದು ರೈತರು ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ವರದಿ : ಎ.ಟಿ.ವೆಂಕಟೇಶ್
Published by: zahir
First published: December 20, 2020, 8:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories