ಒಂದು ಕಾಲದಲ್ಲಿ ಹಿತ್ತಲಿಗೆ ಮಾತ್ರ ಸೀಮಿತವಾಗಿದ್ದ ಕೆಲವು ವಿದೇಶಿ (Foreign) ಮತ್ತು ಸ್ಥಳೀಯ ಹಣ್ಣುಗಳನ್ನು (Fruits) ಕರ್ನಾಟಕದ (Karnataka) ರೈತರು ಜಮೀನಿನಲ್ಲಿ ವ್ಯಾಪಾಕವಾಗಿ ಬೆಳೆದು ಇಳುವರಿ ತೆಗೆದು ಮಾರುಕಟ್ಟೆಗೆ (Market) ತರುತ್ತಿದ್ದಾರೆ. ಈ ವಿದೇಶಿ ಹಣ್ಣುಗಳ ಕೃಷಿ (Agriculture) ಒಲವು ಕಳೆದ ಮೂರು ವರ್ಷಗಳಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ. ಆವಕಾಡೊ, ಡ್ರ್ಯಾಗನ್ ಹಣ್ಣು, ರಂಬುತಾನ್, ಮ್ಯಾಂಗೋಸ್ಟೀನ್, ಪ್ಯಾಶನ್ ಹಣ್ಣಿನ ಜೊತೆಗೆ, ಹಲಸು (Jack Fruit), ಹುಣಸೆಹಣ್ಣು (Tamarind), ನೇರಳೆಯಂತಹ ಸ್ಥಳೀಯ ಹಣ್ಣನ್ನು ಸೇರಿ 12 ಹಣ್ಣುಗಳನ್ನು ನಮ್ಮ ರಾಜ್ಯದಲ್ಲಿ ಉತ್ತಮವಾಗಿ ಕೃಷಿ ಮಾಡಿ ಇಳುವರಿ (Yield) ಪಡೆಯಲಾಗುತ್ತಿದೆ.
ಮಾರುಕಟ್ಟೆಯಲ್ಲಿನ ಇವುಗಳ ಜನಪ್ರಿಯತೆ, ಸುಲಭ ಕೃಷಿ, ಹವಮಾನ ಬದಲಾವಣೆಯಲ್ಲೂ ಬದುಕುವ ಸಾಮರ್ಥ್ಯ ಮತ್ತು ತುಲನಾತ್ಮಕವಾಗಿ ಕಡಿಮೆ ನಿರ್ವಹಣೆಯಿಂದಾಗಿ ಈ ಹಣ್ಣುಗಳ ಕೃಷಿಯತ್ತ ರೈತರು ಒಲವು ತೋರುತ್ತಿದ್ದಾರೆ.
ಡ್ರ್ಯಾಗನ್ ಹಣ್ಣು ಆವಕಾಡೊ ಸೇರಿದಂತೆ ಇತರೆ ಹಣ್ಣನ್ನು ಬೆಳೆದ ರೈತ
ಸಾಂಪ್ರದಾಯಿಕವಾಗಿ ಬೆಳೆಯುವ ದ್ರಾಕ್ಷಿಗೆ ಹೋಲಿಸಿದರೆ ಡ್ರ್ಯಾಗನ್ ಫ್ರೂಟ್‌ಗೆ ಶೇ. 80ರಷ್ಟು ಕಡಿಮೆ ನೀರು ಬೇಕಾಗುತ್ತದೆ. ನಿರ್ವಹಣೆಯೂ ಬಹುತೇಕ ಒಂದೇ ಆಗಿದೆ’’ ಎನ್ನುತ್ತಾರೆ ಡ್ರ್ಯಾಗನ್ ಹಣ್ಣು ಬೆಳೆದ ರೈತ ಚಿಕ್ಕಬಳ್ಳಾಪುರದ ನಾರಾಯಣ ಸ್ವಾಮಿ. ಹೀಗಾಗಿ ಇವರು ದ್ರಾಕ್ಷಿ ಬೆಳೆ ಬಿಟ್ಟು ಡ್ರ್ಯಾಗನ್ ಹಣ್ಣು ಮತ್ತು ಆವಕಾಡೊ ಸೇರಿದಂತೆ ಇತರೆ ಹಣ್ಣಿನ ಕೃಷಿಯನ್ನು ಆರಂಭಿಸಿದ್ದಾರೆ.
"ಬೆಳೆಗಾರರಿಂದ ಸಸ್ಯಗಳ ಬೇಡಿಕೆಯ ಉಲ್ಬಣವು ಕಳಪೆ ಗುಣಮಟ್ಟದ ನೆಟ್ಟ ವಸ್ತುಗಳಿಗೆ ಮತ್ತು ಮಾರಾಟಕ್ಕೆ ಕಾರಣವಾಗಿದೆ. ಹೀಗಾಗಿ ಬೆಳೆಗಾರರು ಸಸಿಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು’’ ಎನ್ನುತ್ತಾರೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಸಂಸ್ಥೆಯ ಹಣ್ಣು ವಿಜ್ಞಾನಿ ಜಿ. ಕರುಣಾಕರನ್. ಸಂಸ್ಥೆಯು ತಂತ್ರಜ್ಞಾನ ಮತ್ತು ಮೌಲ್ಯವರ್ಧನೆಯ ಬೆಂಬಲವನ್ನು ನೀಡುವ ಮೂಲಕ ವಿದೇಶಿ ಮತ್ತು ಸ್ಥಳೀಯ ಹಣ್ಣುಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.
ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಯಿಂದ ದೂರ ಸರಿಯುತ್ತಿರುವ ರೈತರು
"ಈಗ ವಿದೇಶಿ ಮತ್ತು ಸ್ಥಳೀಯ ಬೆಳೆಗಳ ಕೃಷಿ ಕಡಿಮೆಯಾಗಿದೆ, ಆದ್ದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಯಾವುದೇ ಬೆಳೆಯನ್ನು ವಿಸ್ತರಿಸುವಾಗ ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಳ್ಳಿ. ಒಂದಕ್ಕಿಂತ ಹೆಚ್ಚಿನ ಬಹು ಬೆಳೆಗಳನ್ನು ಬೆಳೆಯುವುದು ಯಾವಾಗಲೂ ಒಳ್ಳೆಯದು," ಎಂದು ಜಿ. ಕರುಣಾಕರನ್ ಹೇಳಿದರು. ರೈತರು ದಾಳಿಂಬೆ ಮತ್ತು ದ್ರಾಕ್ಷಿಯಂತಹ ನಿರ್ವಹಣೆ-ಕೇಂದ್ರಿತ ಬೆಳೆಗಳಿಂದ ದೂರ ಸರಿಯುತ್ತಿದ್ದಾರೆ ಎಂದೂ ಸಹ ಹೇಳಿದರು.
ದ್ರಾಕ್ಷಿ ತೋಟವನ್ನು ಹಲಸಿನ ತೋಟವನ್ನಾಗಿ ಪರಿವರ್ತನೆ
ದೊಡ್ಡಬಳ್ಳಾಪುರದ ಕೆ.ಎಸ್. ಅಶೋಕ್ ಕುಮಾರ್ ಎಂಬ ರೈತ ತಮ್ಮ 40 ಎಕರೆ ದ್ರಾಕ್ಷಿ ತೋಟವನ್ನು ಹಲಸಿನ ತೋಟವನ್ನಾಗಿ ಪರಿವರ್ತಿಸಿದ್ದಾರೆ. ‘‘ನೀರು, ನಿರ್ವಹಣೆ ಹಾಗೂ ಈ ಪ್ರದೇಶದಲ್ಲಿ ಬೆಳೆಯುವ ವಿಶಿಷ್ಟ ತಳಿಯ ಹಲಸು ಈ ಬೆಳೆಗಳಿಗೆ ಮಾರ್ಪಾಡಾಗಲು ಕಾರಣವಾಯಿತು ಎಂದು ಅವರು ಹೇಳುತ್ತಾರೆ. ಅಂತರ್ಜಲ 1,500 ಅಡಿಗಿಂತ ಕಡಿಮೆ ಇರುವ ಈ ಪ್ರದೇಶಕ್ಕೆ ಈ ಬೆಳೆಗಳು ಸೂಕ್ತ ಎನ್ನುತ್ತಾರೆ.
ಇದನ್ನೂ ಓದಿ: Pink River: ದೇವರ ನಾಡಿನಲ್ಲಿ 'ಪಿಂಕ್ ನದಿ'! ಈ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ ಹೇಳಿದ್ದೇನು?
ಹವಮಾನ ಪರಿಸ್ಥಿತಿಗಳು ರೈತರು ಕಳೆದ ದಶಕದಿಂದ ಒಣಭೂಮಿ ತೋಟಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದೆ.
"ಜನರು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಮಾರ್ಗವಾಗಿ ದೀರ್ಘಕಾಲಿಕ ಬೆಳೆಗಳತ್ತ ಕರಾವಳಿ ಪ್ರದೇಶ ಹೊರತುಪಡಿಸಿ ಕರ್ನಾಟಕದಾದ್ಯಂತ ರೈತರು ಇದರತ್ತ ಸಾಗುತ್ತಿದ್ದಾರೆ. ಇವು ಹೆಚ್ಚಿನ ಮೌಲ್ಯದ ಬೆಳೆಗಳಾಗಿದ್ದು ಜೊತೆಗೆ ಔಷಧೀಯ ಗುಣಗಳನ್ನು ಹೊಂದಿದೆ. ನಿಯಮಿತ ಆದಾಯವನ್ನು ಖಚಿತಪಡಿಸಿಕೊಳ್ಳಲು ಅವರು ಬೆಳೆಗಳ ಸಂಯೋಜನೆಯನ್ನು ಸಹ ಆರಿಸಿಕೊಳ್ಳುತ್ತಿದ್ದಾರೆ ಎಂದು ರೈತ ಅಶೋಕ್ ಕುಮಾರ್ ಹೇಳುತ್ತಾರೆ.
ಡ್ರ್ಯಾಗನ್ ಫ್ರೂಟ್ ನಿಂದ ಶೇ.80ರಷ್ಟು ಹೆಚ್ಚಿನ ಆದಾಯ
ದ್ರಾಕ್ಷಿ ತೋಟವನ್ನು ಡ್ರ್ಯಾಗನ್ ತೋಟವನ್ನಾಗಿ ಪರಿವರ್ತಿಸಿದ ಹೊಸಕೋಟೆ ತಾಲೂಕಿನ ರೈತ ಎಂ.ಬಿ ವೆಂಕಟೇಶ್ ದ್ರಾಕ್ಷಿಗಿಂತ ಡ್ರ್ಯಾಗನ್ ಫ್ರೂಟ್ ನಿಂದ ಶೇ.80ರಷ್ಟು ಹೆಚ್ಚಿನ ಆದಾಯವನ್ನು ಕೃಷಿಯಲ್ಲಿ ಪಡೆಯುತ್ತಿದ್ದೇನೆ.
"ಈಗ ಮಾರುಕಟ್ಟೆ ಬೆಲೆ ಉತ್ತಮವಾಗಿದೆ. ಕೋವಿಡ್-19 ಸಮಯದಲ್ಲಿ, ಜನರು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಆದಾಗ್ಯೂ, ಈ ವರ್ಷ ನಾನು ಸುಮಾರು 2,000 ಸಸಿಗಳನ್ನು ಮಾರಾಟ ಮಾಡಿದ್ದೇನೆ. ಈ ಪ್ರವೃತ್ತಿಯನ್ನು ಅನುಸರಿಸಿದರೆ, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಬರುವ ಸಾಧ್ಯತೆಗಳಿವೆ” ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: Viral Video: ಈ ಅಜ್ಜಿ ಬಳಿ ನೀವು ಕೊತ್ತಂಬರಿ ಸೊಪ್ಪು ಖರೀದಿಸಿದ್ದೀರಾ? ವಿಡಿಯೋ ನೋಡಿ
ಶೀಘ್ರವಾಗಿ ಹಾಳಾಗುವ ಹಣ್ಣುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೇಲೆ ಕೇಂದ್ರೀಕರಿಸುವಂತೆ ರಾಜ್ಯಾದ್ಯಂತ ಸುಮಾರು 200 ರೈತರನ್ನು ಕರ್ನಾಟಕ ವಿದೇಶಿ ಮತ್ತು ಸಣ್ಣ ಹಣ್ಣು ಉತ್ಪಾದಕ ಕಂಪನಿಯ ಗಮನಕ್ಕೆ ತರಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ