ಚಿಕ್ಕಮಗಳೂರು ತೆಂಗು ಬೆಳೆಗಾರರಿಗೆ ಬಿಳಿ ಹುಳು ರೋಗದ ಕಾಟ; ಹುಳ ನಿವಾರಣೆಗೆ ಮಳೆಯೇ ಮದ್ದು

ಈ ರೋಗದಿಂದ 1000 ಮರಗಳನ್ನು ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕೇವಲ 50 ರಿಂದ 100 ಕಾಯಿಲೆಗಳು ಮಾತ್ರ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲದೇ ರೋಗ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ತೆಂಗಿನ ಮರವನ್ನು ನಾಶ ಮಾಡಲು ಕೂಡ ರೈತರು ಮುಂದಾಗಿದ್ದಾರೆ.

news18-kannada
Updated:March 5, 2020, 6:17 PM IST
ಚಿಕ್ಕಮಗಳೂರು ತೆಂಗು ಬೆಳೆಗಾರರಿಗೆ ಬಿಳಿ ಹುಳು ರೋಗದ ಕಾಟ; ಹುಳ ನಿವಾರಣೆಗೆ ಮಳೆಯೇ ಮದ್ದು
ರೋಗ ಬಾಧಿತ ಮರಗಳು
  • Share this:
ಚಿಕ್ಕಮಗಳೂರು(ಮಾ. 5): ಬರಗಾಲದಲ್ಲಿ ತೆಂಗು ಬೆಳೆದು ಜೀವನ ಕಂಡಿದ್ದ ಜಿಲ್ಲೆಯ ಕಡೂರಿನ ರೈತರು ಈಗ ಕಂಗಲಾಗಿದ್ದಾರೆ. ಕಾರಣ ತೆಂಗನ್ನು ಕಾಡುತ್ತಿರುವ ರೋಗ.  ತೆಂಗಿನ ಇಳುವರಿ ಕಡಿಮೆ ಮಾಡುವ ರೋಗೋಸ್ ಸ್ಪೈರಲಿಂಗ್ ವೈಟ್ ಫ್ಲೈ ರೋಗ ತೆಂಗನ್ನು ಆವರಿಸಿದ್ದು, ರೈತರಿಗೆ ಚಿಂತೆಯಾಗಿದೆ. ಬಿಳಿ ಹುಳ ರೋಗ ಎಂದು ಕರೆಯಲ್ಪಡುವ ಈ ರೋಗ ಒಂದು ಮರದಿಂದ ಒಂದು ಮರಕ್ಕೆ ಹಬ್ಬುತ್ತಿದೆ. ಇದರಿಂದ ತೆಂಗಿನ ತೋಟಗಳು ಸಾಂಕ್ರಾಮಿಕವಾಗಿ ಈ ರೋಗಕ್ಕೆ ತುತ್ತಾಗುತ್ತಿದೆ.

ಕೇವಲ ಕಡೂರು ತಾಲೂಕಿನಲ್ಲಿ ಮಾತ್ರವಲ್ಲದೇ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಾದ ಕಳಸಾಪುರ, ಬೆಳವಾಡಿ, ಲಕ್ಯಾ ಹಾಗೂ ಅಜ್ಜಂಪುರ, ಶಿವನಿ  ಹೋಬಳಿಗಳಲ್ಲಿ ಈ ರೋಗ ಹರಡುತ್ತಿದೆ.

ಈ ರೋಗದಿಂದ 1000 ಮರಗಳನ್ನು ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕೇವಲ 50 ರಿಂದ 100 ಕಾಯಿಲೆಗಳು ಮಾತ್ರ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲದೇ ರೋಗ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ತೆಂಗಿನ ಮರವನ್ನು ನಾಶ ಮಾಡಲು ಕೂಡ ರೈತರು ಮುಂದಾಗಿದ್ದಾರೆ.

ಬಿಸಿಲು ಅಧಿಕವಿರುವ ಸಂದರ್ಭದಲ್ಲಿ ಈ ಕೀಟಗಳು ಹೆಚ್ಚು ಬಾಧಿಸಲಿದ್ದು, ಮಳೆ ಬಂದರೆ ಮಾತ್ರ ಈ ರೋಗದ ನಿಯಂತ್ರಣ ಸಾಧ್ಯ ಎಂದು ಕೃಷಿ ತಜ್ಞರು ತಿಳಿಸುತ್ತಾರೆ.  ಗರಿ ಕೆಳ ಭಾಗದಲ್ಲಿ ಬಿಳಿ ಚಿಟ್ಟೆಗಳಂತಹ ಕೀಟಗಳು ಕೂತು ಕೊಳ್ಳುವುದರಿಂದ ಇಡೀ ಮರವೇ ಸುಟ್ಟು ಒಣಗುತ್ತಿದೆ.

ಇದನ್ನು ಓದಿ: Karnataka Budget Updates: ಬಜೆಟ್​ನಲ್ಲಿ ಕೃಷಿಗೆ ಮಹತ್ವ ಕೊಟ್ಟಿರುವ ಯಾವುದೇ ‌ಕಾರ್ಯಕ್ರಮ ಕಾಣುತ್ತಿಲ್ಲ: ಹೆಚ್​ಕೆ ಪಾಟೀಲ್​​​​

ಚೈನ್​ ಲಿಂಕ್​ನಂತೆ ಈ ಪ್ರದೇಶದಲ್ಲಿ ರೋಗ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಮೂಲ ಮದ್ದು ಎಂದರೆ ಮಳೆ. ಮಳೆ ಬಿದ್ದರೆ ಈ ಕೀಟಗಳು ಬೇರೆಡೆ ಹೋಗುತ್ತದೆ. ಸದ್ಯ ಮಳೆ ಬೀಳುವ ಸಾಧ್ಯತೆ ಇಲ್ಲ ಈ ಹಿನ್ನೆಲೆ ಮರಕ್ಕೆ ನೀರು ಹಾಗೂ ಗಂಜಿ ಸಿಂಪಡಿಸಿದರೆ ಕೀಟಗಳು ಹೋಗುತ್ತವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್.
First published: March 5, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading